ಬೆಂಗಳೂರು: ಭೂ ಸುಧಾರಣಾ ತಿದ್ದುಪಡಿ ವಿಧೇಯಕ ಮಂಡನೆಯಾಗಿದೆ. ಇಂದು ಅದು ಚರ್ಚೆಗೆ ಬರಲಿದೆ. ಈ ವಿಧೇಯಕವನ್ನು ನಾವು ವಿರೋಧಿಸ್ತೇವೆ ಎಂದು ಜೆಡಿಎಸ್ ಶಾಸಕ ಶಿವಲಿಂಗೇಗೌಡ ತಿಳಿಸಿದ್ದಾರೆ.
ಭೂ ಸುಧಾರಣಾ ತಿದ್ದುಪಡಿ ವಿಧೇಯಕ ವಿರೋಧಿಸುತ್ತೇವೆ: ಶಾಸಕ ಶಿವಲಿಂಗೇಗೌಡ - Shivalinge Gowda
ಭೂ ಸುಧಾರಣಾ ತಿದ್ದುಪಡಿ ವಿಧೇಯಕವನ್ನ ವಿರೋಧಿಸುವುದಾಗಿ ಜೆಡಿಎಸ್ ಶಾಸಕ ಶಿವಲಿಂಗೇಗೌಡ ತಿಳಿಸಿದ್ದಾರೆ.
ವಿಧಾನಸೌಧದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, 400 ಎಕರೆವರೆಗೆ ಕೃಷಿ ಭೂಮಿ ಹೊಂದಲು ಅವಕಾಶವಿದೆ. 79 ಎ, ಬಿಗೆ ತಿದ್ದುಪಡಿ ತಂದಿದ್ದಾರೆ. ಕಳ್ಳ ದಂಧೆಯ ಹಣ ಈ ಭೂಮಿ ಖರೀದಿಗೆ ವಿನಿಯೋಗವಾಗಲಿದೆ. ಕೃಷಿ ಭೂಮಿ ಹಣವಂತರ ಪಾಲಾಗುತ್ತದೆ. ತೆರಿಗೆ ಹಣವನ್ನ ಭೂಮಿ ಮೇಲೆ ಹಾಕುತ್ತಾರೆ ಎಂದು ದೂರಿದರು.
10 ಲಕ್ಷ ವೈಟ್ ಮನಿ ಇದ್ದರೆ 2 ಕೋಟಿ ಹಣ ಹೂಡಬಹುದು. ಅಕ್ರಮ ಹಣವನ್ನ ಇದಕ್ಕೆ ವಿನಿಯೋಗಿಸ್ತಾರೆ. ಭೂಮಿ ಖರೀದಿಸಿ ಬೆಳೆ ಬೆಳೆಯೋದಿಲ್ಲ. ತಂತಿ ಹಾಕಿ ಬಿಟ್ಟು ಬಿಡುತ್ತಾರೆ. ನಂತರ ಸೈಟ್ ಮಾಡಿ ಮಾರಾಟ ಮಾಡ್ತಾರೆ. ಬೆಂಗಳೂರು ಸುತ್ತಮುತ್ತ ಭೂಮಿ ಕಬಳಿಸುವ ಹುನ್ನಾರವಿದೆ. ರಿಜಿಸ್ಟರ್ ಮಾಡೋಕೆ ಇದನ್ನ ತಂದಿದ್ದಾರೆ ಎಂದು ದೂರಿದರು.