ಬೆಂಗಳೂರು :ವಿಧಾನಪರಿಷತ್ನ 3ನೇ ದಿನದ ಕಲಾಪ ಆರಂಭಗೊಳ್ಳುತ್ತಿದ್ದಂತೆ ಕಲ್ಯಾಣ ಕರ್ನಾಟಕ ಭಾಗದ ಜಿಲ್ಲೆಗಳ ಅಭಿವೃದ್ಧಿ ವಿಚಾರದ ಚರ್ಚೆಗೆ ನಿಯಮ 59ರ ಅಡಿಯಲ್ಲಿ ಅವಕಾಶ ನೀಡುವಂತೆ ಪ್ರತಿಪಕ್ಷ ನಾಯಕ ಎಸ್ ಆರ್ ಪಾಟೀಲ್ ನಿಳುವಳಿ ಸೂಚನೆ ಮಂಡಿಸಿದರು.
ಪ್ರಶ್ನೋತ್ತರ ಕಲಾಪಕ್ಕೂ ಮುನ್ನ ಎಸ್ ಆರ್ ಪಾಟೀಲ್ ನಿಳುವಳಿ ಸೂಚನೆ ಮಂಡಿಸಿದರು. ಶಿಕ್ಷಣ, ಸಾಮಾಜಿಕ, ಆರ್ಥಿಕವಾಗಿ ಕಲ್ಯಾಣ ಕರ್ನಾಟಕ ಹಿಂದುಳಿದಿದೆ. ಇದು ಬಹಳ ಗಂಭೀರ ಸಮಸ್ಯೆ. ಆರ್ಟಿಕಲ್ 371ಜೆ ಜಾರಿ ಬಗ್ಗೆ ಬೇರೆ ವಿಚಾರಗಳನ್ನ ಬದಿಗಿಟ್ಟು ಚರ್ಚೆಗೆ ಅವಕಾಶ ನೀಡುವಂತೆ ಮನವಿ ಮಾಡಿದರು.