ಬೆಂಗಳೂರು:ಬೊಮ್ಮನಹಳ್ಳಿಯ ಹೊಂಗಸಂದ್ರದಲ್ಲಿ ಕೊರೊನಾ ಅಟ್ಟಹಾಸ ಹೆಚ್ಚಾಗುತ್ತಿರುವ ಹಿನ್ನೆಲೆ ವಿದ್ಯಾ ಜ್ಯೋತಿ ಕಾಲೊನಿಯಲ್ಲಿ ಬಿಬಿಎಂಪಿ ಆಪರೇಷನ್ ಕ್ವಾರಂಟೈನ್ ನಡೆಸಿದೆ. ಕಳೆದ ರಾತ್ರಿ ನೂರಕ್ಕೂ ಹೆಚ್ಚು ಜನರನ್ನು ಕ್ವಾರಂಟೈನ್ಗೆ ಕರೆದೊಯ್ಯಲಾಗಿದೆ.
ಬಿಬಿಎಂಪಿಯಿಂದ ಆಪರೇಷನ್ ಕ್ವಾರಂಟೈನ್: ರಾತ್ರೋರಾತ್ರಿ 188 ಜನರ ಸ್ಥಳಾಂತರ - operation quarantine by
ಬುಧವಾರ ಬೆಳಗ್ಗೆ ಕ್ವಾರಂಟೈನ್ನಲ್ಲಿ ಇದ್ದ ಬೊಮ್ಮನಹಳ್ಳಿ ಕೂಲಿ ಕಾರ್ಮಿಕರ ಪರೀಕ್ಷಾ ವರದಿಯಲ್ಲಿ 9ಮಂದಿಗೆ ಪಾಸಿಟಿವ್ ಬಂದ ಹಿನ್ನೆಲೆ ಮುಂಜಾಗ್ರತಾ ಕ್ರಮವಾಗಿ ರಾತ್ರೋರಾತ್ರಿ 15 ರಿಂದ 20 ಟಿಟಿ ವಾಹನಗಳಲ್ಲಿ ಕಾರ್ಮಿಕರಿದ್ದ ಕಾಲೋನಿ ನಿವಾಸಿಗಳನ್ನು ಕ್ವಾರಂಟೈನ್ಗೆ ಶಿಫ್ಟ್ ಮಾಡಲಾಗಿದೆ.
ನಿನ್ನೆ ಬೆಳಗ್ಗೆ ಕ್ವಾರಂಟೈನ್ನಲ್ಲಿ ಇದ್ದವರ ಪರೀಕ್ಷಾ ವರದಿಯಲ್ಲಿ 9ಮಂದಿಗೆ ಪಾಸಿಟಿವ್ ಬಂದ ಹಿನ್ನೆಲೆ ಮುಂಜಾಗ್ರತಾ ಕ್ರಮವಾಗಿ 15 ರಿಂದ 20 ಟಿಟಿಗಳಲ್ಲಿ ಕಾಲೋನಿ ನಿವಾಸಿಗಳನ್ನು ಕ್ವಾರಂಟೈನ್ಗೆ ಶಿಫ್ಟ್ ಮಾಡಲಾಯಿತು. ಎಲ್ಲರೂ ಕೂಡ ಕೂಲಿ ಕಾರ್ಮಿಕರಾಗಿದ್ದು, ರಾತ್ರಿ 11 ಗಂಟೆಯಿಂದ ಬೆಳಗಿನ ಜಾವ 2:25 ರವರೆಗೂ ಬಿಬಿಎಂಪಿ ಕಾರ್ಯಾಚರಣೆ ನಡೆಸಿ ನಿವಾಸಿಗಳನ್ನು ಕ್ವಾರಂಟೈನ್ಗೆ ಸ್ಥಳಾಂತರಿಸಲಾಗಿದೆ.
ಪ್ರಾಥಮಿಕ ಸಂಪರ್ಕ 24, ಸೆಕೆಂಡರಿ ಕಾಂಟ್ಯಾಕ್ಟ್ 164 ಸೇರಿ ಒಟ್ಟು 188 ಮಂದಿಯನ್ನು ಕ್ವಾರಂಟೈನ್ನಲ್ಲಿ ಇಡಲಾಗಿದೆ. ಇಡೀ ವಿದ್ಯಾಜ್ಯೋತಿ ನಗರವನ್ನೇ ಖಾಲಿ ಮಾಡಿಸಲಾಗಿದೆ. ಇಂದು ಸಂಜೆಯ ಹೊತ್ತಿಗೆ ಮತ್ತಷ್ಟು ಕೊರೊನಾ ಪಾಸಿಟಿವ್ ಆಗುವ ಸಾಧ್ಯತೆಯಿದ್ದು, ಪ್ರಾಥಮಿಕ ಹಾಗೂ ದ್ವಿತೀಯ ಹಂತದ ಸಂಪರ್ಕಿತರ ಸಂಖ್ಯೆ ಆತಂಕ ಮೂಡಿಸಿದೆ. ಈ ಕುರಿತು ಪ್ರತಿಕ್ರಿಯೆ ನೀಡಿದ ವೈದ್ಯಕೀಯ ಶಿಕ್ಷಣ ಸಚಿವ ಡಾ. ಸುಧಾಕರ್, 188 ಜನರನ್ನು ಕ್ವಾರಂಟೈನ್ ಮಾಡಲಾಗಿದೆ. ಎರಡು ದಿನಗಳಲ್ಲಿ ಅವರೆಲ್ಲರ ಕೊರೊನಾ ತಪಾಸಣೆ ನಡೆಸಲಾಗುತ್ತದೆ ಎಂದು ಮಾಹಿತಿ ನೀಡಿದರು.