ಬೆಂಗಳೂರು: ಮಧ್ಯಪ್ರದೇಶದ ಕಮಲ್ ನಾಥ್ ನೇತೃತ್ವದ ಕಾಂಗ್ರೆಸ್ ಸರ್ಕಾರವನ್ನ ಪತನಗೊಳಿಸಲು ಬಿಜೆಪಿ ಶತಾಯ - ಗತಾಯು ಪ್ರಯತ್ನಿಸುತ್ತಿದ್ದು, ಮಧ್ಯಪ್ರದೇಶ ಸರ್ಕಾರದ ಇಬ್ಬರು ಕಾಂಗ್ರೆಸ್ ಶಾಸಕರು ಹಾಗೂ ಒಬ್ಬ ಪಕ್ಷೇತರ ಶಾಸಕರನ್ನು ಹೈಜಾಕ್ ಮಾಡಿರುವ ಬಿಜೆಪಿ, ಅಧಿಕಾರದಲ್ಲಿರುವ ರಾಜ್ಯವಾದ ಕರ್ನಾಟಕಕ್ಕೆ ಕರೆತಂದು ಸುರಕ್ಷಿತವಾಗಿ ಇರಿಸಿದೆ ಎಂದು ತಿಳಿದು ಬಂದಿದೆ.
ಆಪರೇಷನ್ ಕಮಲಕ್ಕೆ ತುತ್ತಾದ ಶಾಸಕರು ಕರ್ನಾಟಕದಲ್ಲಿ, ಅದರಲ್ಲೂ ಚಿಕ್ಕಮಗಳೂರಿನ ಖಾಸಗಿ ರೆಸಾರ್ಟ್ಗೆ ಕರೆ ತಂದು ಇರಿಸಲಾಗಿದೆ ಎಂಬ ಆರೋಪವನ್ನು ಕಾಂಗ್ರೆಸ್ ಮಾಡಿದೆ. ಇಬ್ಬರು ಕಾಂಗ್ರೆಸ್ ಶಾಸಕರು ಹಾಗೂ ತಮ್ಮನ್ನು ಬೆಂಬಲಿಸಿರುವ ಒಬ್ಬ ಪಕ್ಷೇತರ ಶಾಸಕನನ್ನು ಆಪರೇಷನ್ ಕಮಲ ಮೂಲಕ ಹ್ಯಾಕ್ ಮಾಡಲಾಗಿದೆ ಎಂದು ಆರೋಪಿಸಿದೆ. ಮೂವರನ್ನು ಆಪರೇಷನ್ ಕಮಲ ಮಾಡಿ ಕರ್ನಾಟಕಕ್ಕೆ ಕರೆತಂದಿರುವ ಬಗ್ಗೆ ಮಾಹಿತಿ ಲಭಿಸಿದ್ದು, ರಘುರಾಜ್ ಕಂಸಾನಾ, ಅದಲ್ ಸಿಂಗ್ ಕಂಸಾನಾ, ಸುರೇಂದ್ರ ಸಿಂಗ್ ಆಪರೇಷನ್ ಕಮಲಕ್ಕೆ ತುತ್ತಾದ ಶಾಸಕರು ಎಂದು ಹೇಳಲಾಗುತ್ತಿದೆ.