ದೊಡ್ಡಬಳ್ಳಾಪುರ:ಬಿಜೆಪಿ ಯುವಮೋರ್ಚಾ ಘಟಕದ ರಾಜ್ಯ ಉಪಾಧ್ಯಕ್ಷ ಭೀಮಶಂಕರ್ ಪಾಟೀಲ್ ಪತ್ರ ಪ್ರಕರಣ ಕುರಿತಾಗಿ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಸಚಿವ ಈಶ್ವರಪ್ಪ ಏಕವಚನದಲ್ಲಿಯೆ ಪದ ಪ್ರಯೋಗ ಮಾಡಿದ್ದಾರೆ.
ಯಾರ್ರೀ ಅವ್ನು ಭೀಮಾಶಂಕರ್ ಪಾಟೀಲ್... ಏಕವಚನದಲ್ಲೇ ಬೈದ ಈಶ್ವರಪ್ಪ - ಭೀಮಶಂಕರ್ ಪಾಟೀಲ್ ಪತ್ರ ಸುದ್ದಿ
ಬಿಜೆಪಿ ರಾಜ್ಯಾಧ್ಯಕ್ಷ ನಳಿನಕುಮಾರ ಕಟೀಲು ರವರಿಗೆ ಬಹಿರಂಗ ಪತ್ರ ಬರೆದಿರುವ ಯುವಮೋರ್ಚಾ ಘಟಕದ ರಾಜ್ಯ ಉಪಾಧ್ಯಕ್ಷ ಭೀಮಶಂಕರ್ ಪಾಟೀಲ್, ಯಡಿಯೂರಪ್ಪರವರನ್ನ ಕಡೆಗಣಿಸಿದ್ದೆ ಆದರೆ ಉತ್ತರ ಕರ್ನಾಟಕದ 13 ಜಿಲ್ಲೆಗಳ ಸಾವಿರಾರು ಕಾರ್ಯಕರ್ತರು ರಾಜೀನಾಮೆ ನೀಡುವ ಎಚ್ಚರಿಕೆ ನೀಡಿದ್ದರು. ಇದಕ್ಕೆ ಪ್ರತಿಕ್ರೀಯೆ ನೀಡಿದ ಸಚಿವ ಈಶ್ವರಪ್ಪ ಏಕವಚನದಲ್ಲೇ ಭೀಮಶಂಕರ್ ಪಾಟೀಲ್ ವಿರುದ್ಧ ವಾಗ್ದಾಳಿ ನಡೆಸಿದರು.
![ಯಾರ್ರೀ ಅವ್ನು ಭೀಮಾಶಂಕರ್ ಪಾಟೀಲ್... ಏಕವಚನದಲ್ಲೇ ಬೈದ ಈಶ್ವರಪ್ಪ](https://etvbharatimages.akamaized.net/etvbharat/prod-images/768-512-4571686-thumbnail-3x2-letter.jpg)
ಬಿಜೆಪಿ ರಾಜ್ಯಾಧ್ಯಕ್ಷ ನಳಿನಕುಮಾರ ಕಟೀಲು ರವರಿಗೆ ಬಹಿರಂಗ ಪತ್ರ ಬರೆದಿರುವ ಯುವಮೋರ್ಚಾ ಘಟಕದ ರಾಜ್ಯ ಉಪಾಧ್ಯಕ್ಷ ಭೀಮಶಂಕರ್ ಪಾಟೀಲ್, ಯಡಿಯೂರಪ್ಪರವರನ್ನ ಕಡೆಗಣಿಸಿದ್ದೆ ಆದರೆ ಉತ್ತರ ಕರ್ನಾಟಕದ 13 ಜಿಲ್ಲೆಗಳ ಸಾವಿರಾರು ಕಾರ್ಯಕರ್ತರು ರಾಜೀನಾಮೆ ನೀಡುವ ಎಚ್ಚರಿಕೆ ನೀಡಿದ್ದರು. ಇದಕ್ಕೆ ಪ್ರತಿಕ್ರೀಯೆ ನೀಡಿದ ಸಚಿವ ಈಶ್ವರಪ್ಪ ಏಕವಚನದಲ್ಲೇ ಭೀಮಶಂಕರ್ ಪಾಟೀಲ್ ವಿರುದ್ಧ ವಾಗ್ದಾಳಿ ನಡೆಸಿದರು.
ಬೆಂಗಳೂರು ಉತ್ತರ ತಾಲೂಕಿನ ರಾಜನಕುಂಟೆ ಗ್ರಾಮ ಪಂಚಾಯಿತಿಗೆ ದಿಢೀರ್ ಭೇಟಿ ನೀಡಿದ ಈಶ್ವರಪ್ಪ ಬಹಿರಂಗ ಪತ್ರದ ಬಗ್ಗೆ ಮಾಧ್ಯಮದವರು ಪ್ರಶ್ನೆ ಮಾಡಿದ್ದಾಗ ಪ್ರತಿಕ್ರಿಯೆ ನೀಡಲು ನಿರಾಕರಿಸಿದರು. ಅದರೆ ಭೀಮಶಂಕರ್ ಪಾಟೀಲ್ ವಿರುದ್ಧ ಏಕವಚನದಲ್ಲೇ ಪದ ಪ್ರಯೋಗ ನಡೆಸಿ, ಅವನು ಯಾರ್ರಿ ? ಅವನು ಯಾರು ಅಂತ್ಲೆ ನನಗೆ ಗೊತ್ತಿಲ್ಲ. ಅವನೇನು ಮಹಾತ್ಮಾ ಗಾಂಧಿನೊ ಇನ್ಯಾರೋ ಆಗಿದ್ದರೆ ಗೊತ್ತಿರ್ತಿತ್ತು. ಅವನು ಯಾವೋನು ಅನ್ನೋದೆ ನನಗೆ ಗೊತ್ತಿಲ್ಲ ಎಂದು ಹೇಳಿ ತೆರಳಿದರು.