ಕರ್ನಾಟಕ

karnataka

ETV Bharat / state

ವಿಶ್ವನಾಥನ್​ ಆನಂದ ಜೊತೆ ಸೆಣಸಾಡಿದ್ದ 14 ರ ಪೋರನಿಂದ ಚಿಣ್ಣರಿಗೆ ಚೆಸ್ ಪಾಠ - ಅಕ್ಷಯಕಲ್ಪ ಸಂಸ್ಥೆ ಚೆಸ್​ ಸ್ಪರ್ಧೆ

ಕಳೆದ ವರ್ಷ ಚೆಸ್​ ಮಾಂತ್ರಿಕ ವಿಶ್ವನಾಥನ್​ ಆನಂದ್ ಜೊತೆ ಚೆಸ್ ಪಂದ್ಯ ಆಟವಾಡಿದ್ದೆ, ಅದು ಡ್ರಾ ಆಗಿತ್ತು. ಆ ಕ್ಷಣ ನನ್ನನ್ನು ಸಾಕಷ್ಟು ಬಲಗೊಳಿಸಿದೆ. ಆ ಪಂದ್ಯದ ವೇಳೆ ನಾನು ಸ್ವಲ್ಪ ಬಳಲಿದ್ದೆ. ಆದರೆ ಈಗ ಇನ್ನು ಛಲ ಜಾಸ್ತಿಯಾಗಿದೆ ಎಂದು 14ವರ್ಷದ ಚೆಸ್​ ಆಟಗಾರ ನಿಹಾಲ್ ಸರಿನ್ ಹೇಳಿದ್ದಾರೆ.

ಚೆಸ್​ ಆಟಗಾರ ನಿಹಾಲ್​ ಸರಿನ್

By

Published : Oct 4, 2019, 7:58 AM IST

ಬೆಂಗಳೂರು: ಗುರುವಾರದಿಂದ 20019ನೇ ಸಾಲಿನ ಅಕ್ಷಯಕಲ್ಪ ಕರ್ನಾಟಕ ರಾಜ್ಯ ಓಪನ್ ಚೆಸ್ ಚಾಂಪಿಯನ್​ಶಿಪ್ ಕೋಣನಕುಂಟೆಯ ಸಿಲಿಕಾನ್ ಅಕಾಡೆಮಿಯಲ್ಲಿ ಆರಂಭವಾಗಿದೆ. 14ವರ್ಷ ವಯಸ್ಸಿನ ಚೆಸ್​ ಆಟಗಾರ ನಿಹಾಲ್ ಸರಿನ್ ಚೆಸ್ ಚಾಂಪಿಯನ್​ಶಿಪ್ ನ ಆಕರ್ಷಕ ಬಿಂದು ಆಗಿದ್ದರು.

ಚೆಸ್​ ಆಟಗಾರ ನಿಹಾಲ್​ ಸರಿನ್​ನಿಂದ​ ಚೆಸ್ ಪಾಠ

ಪಂದ್ಯಕ್ಕೆ ಆಗಮಿಸಿದ್ದ ಸ್ಪರ್ಧಿಗಳು ಹಾಗೂ ಪೋಷಕರ ಜೊತೆ ಸಂವಾದ ನಡೆಸಿದ ನಿಹಾನ್ ಸೆರಿನ್ ಕೆಲ ಕಾಲ ಚೆಸ್ ಬಗ್ಗೆ ಆಸಕ್ತಿಕರ ವಿಷಯಗಳನ್ನು ತಿಳಿಸಿಕೊಟ್ಟರು. ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕಳೆದ ವರ್ಷ ವಿಶ್ವನಾಥನ್​ ಆನಂದ್ ಜೊತೆ ಚೆಸ್ ಪಂದ್ಯವಾಡಿದ್ದೆ. ಆದ್ರೆ ಅದು ಡ್ರಾ ಆಗಿತ್ತು. ಈ ನನ್ನನ್ನು ಸಾಕಷ್ಟು ಬಲಗೊಳಿಸಿತ್ತು. ಆಗ ವೇಳೆ ನಾನು ಸ್ವಲ್ಪ ಬಳಲಿದಂತಾಗಿದ್ದೆ. ಈಗ ಛಲ ಇನ್ನೂ ಜಾಸ್ತಿಯಾಗಿದೆ.

ಚೆಸ್​ ಆಟಗಾರ ನಿಹಾಲ್​ ಸರಿನ್​ನಿಂದ​ ಚೆಸ್ ಪಾಠ

ಅಕ್ಟೋಬರ್ 10 ರಿಂದ ಫಿಡೆ ಗ್ರಾಂಡ್ ಸ್ವಿಸ್​ನಲ್ಲಿ ಐಸ್ಲೆ ಆಫ್​ ಮ್ಯಾನ್ ಆಯೋಜಿತ ಪಂದ್ಯದಲ್ಲಿ ಭಾಗವಹಿಸುತ್ತಿದ್ದೇನೆ. ಭಾರತದಲ್ಲಿ ಅದರಲ್ಲೂ ಬೆಂಗಳೂರು ನಗರದಲ್ಲಿ ಇತ್ತೀಚಿನ ದಿನಗಳಲ್ಲಿ ಚೆಸ್ ಬಗ್ಗೆ ಒಲವು ಹೆಚ್ಚಿದೆ. ಮಕ್ಕಳು ತಮ್ಮನ್ನು ಸ್ಪರ್ಧಾ ಪರೀಕ್ಷೆಗೆ ತಯಾರಿ ಮಾಡಿಕೊಳ್ಳುವ ಕಾರಣಕ್ಕೆ ಹೆಚ್ಚಿನ ಸಂಖ್ಯೆಯಲ್ಲಿ ಚೆಸ್ ಆಟವನ್ನು ಆಡುತ್ತಿದ್ದಾರೆ. ನನ್ನ ಆಟವನ್ನು ಮೆಚ್ಚಿ ಈಗ ನನಗೆ ಪ್ರೋತ್ಸಾಹಿಸಲು ಅಕ್ಷಯಕಲ್ಪ ಸಂಸ್ಥೆ ಮುಂದೆ ಬಂದಿದೆ ಎಂದು ನಿಹಾಲ್​ ಹೇಳಿದ್ರು.

ಚೆಸ್​ ಆಟಗಾರ ನಿಹಾಲ್​ ಸರಿನ್​ನಿಂದ​ ಚೆಸ್ ಪಾಠ

ABOUT THE AUTHOR

...view details