ಕರ್ನಾಟಕ

karnataka

ETV Bharat / state

ಹೊಸಕೋಟೆಯಲ್ಲಿ ತಮ್ಮ ಮತ ತಮಗೇ ಹಾಕಿಕೊಳ್ಳಲಾಗದ ಎಂಟಿಬಿ, ಪದ್ಮಾವತಿ ಸುರೇಶ್​! ಕಾರಣ?

ಹೊಸಕೋಟೆ ಉಪಚುನಾವಣೆ ಕಣದಲ್ಲಿರುವ ಪ್ರಮುಖ ಮೂರು ಜನ ಅಭ್ಯರ್ಥಿಗಳ ಪೈಕಿ ಒಬ್ಬ ಅಭ್ಯರ್ಥಿಗೆ ಮಾತ್ರ ತಮ್ಮ ಮತ ತಮಗೇ ಹಾಕಿಕೊಳ್ಳುವ ಅವಕಾಶವಿದೆ. ಮಿಕ್ಕಿಬ್ಬರು ಅಭ್ಯರ್ಥಿಗಳಿಗೆ ಆ ಭಾಗ್ಯವಿಲ್ಲ.

Hoskote Assembly constituency
ಮೂರು ಜನ ಅಭ್ಯರ್ಥಿಗಳು

By

Published : Dec 5, 2019, 9:01 AM IST

ಹೊಸಕೋಟೆ: ನಗರದ ಉಪಚುನಾವಣೆ ಕಣದಲ್ಲಿರುವ ಪ್ರಮುಖ ಮೂರು ಜನ ಅಭ್ಯರ್ಥಿಗಳ ಪೈಕಿ ಒಬ್ಬ ಅಭ್ಯರ್ಥಿಗೆ ಮಾತ್ರ ತಮ್ಮ ಮತ ತಮಗೇ ಹಾಕಿಕೊಳ್ಳುವ ಅವಕಾಶವಿದೆ. ಮಿಕ್ಕಿಬ್ಬರು ಅಭ್ಯರ್ಥಿಗಳಿಗೆ ಆ ಭಾಗ್ಯವಿಲ್ಲ.

ಪ್ರಮುಖ ಮೂರು ಅಭ್ಯರ್ಥಿಗಳ ಪೈಕಿ ಹೊಸಕೋಟೆ ವಿಧಾನಸಭಾ ಕ್ಷೇತ್ರದ ಮತದಾರರ ಪಟ್ಟಿಯಲ್ಲಿ ಶರತ್​ ಬಚ್ಚೇಗೌಡ ಅವರ ಕುಟುಂಬದ ಮತ ಮಾತ್ರ ಇದೆ. ಇನ್ನುಳಿದ ಕಾಂಗ್ರೆಸ್ ಅಭ್ಯರ್ಥಿ ಪದ್ಮಾವತಿ ಸುರೇಶ್, ಹಾಗೂ ಎಂಟಿಬಿ ನಾಗರಾಜ್ ಅವರ ಮತ ಮಹದೇವಪುರ ಕ್ಷೇತ್ರದಲ್ಲಿದೆ. ಆದ್ದರಿಂದ ಹೊಸಕೋಟೆ ಕ್ಷೇತ್ರದಲ್ಲಿ ಇಬ್ಬರು ಅಭ್ಯರ್ಥಿಗಳು ತಮ್ಮ ಮತವನ್ನು ತಾವೇ ಹಾಕಿಕೊಳ್ಳೋಕೆ ಆಗದಂತಾಗಿದೆ.

ಇನ್ನು ಪಕ್ಷೇತರ ಅಭ್ಯರ್ಥಿ ಶರತ್ ಬಚ್ಚೇಗೌಡ ಹಾಗೂ ತಂದೆ ಸಂಸದ ಬಚ್ಚೇಗೌಡರ ಕುಟುಂಬದ ಮತಗಳು ಹೊಸಕೋಟೆ ಪಟ್ಟಣದ ಚನ್ನಭೈರೇಗೌಡ ಮೈದಾನದ ಬಳಿಯಿರುವ ಸರ್ಕಾರಿ ಶಾಲೆಯಲ್ಲಿ ಅವರ ಮತದಾನ ಪ್ರಕ್ರಿಯೆ ಇದ್ದು, ಮತದಾನದಲ್ಲಿ ಶರತ್ ಬಚ್ಚೇಗೌಡ ಕುಟುಂಬ ಮತ ಹಾಕುತ್ತಾರೆ.

ಆದ್ರೆ ಚುನಾವಣೆ ಶುರುವಾಗಿದ್ದಾಗಿನಿಂದಲೂ ಕಣ್ಮರೆಯಾಗಿರುವ ಪಕ್ಷೇತರ ಅಭ್ಯರ್ಥಿ ಶರತ್ ಬಚ್ಚೇಗೌಡರ ತಂದೆ ಸಂಸದ ಬಚ್ಚೇಗೌಡರು ಮತ ಹಾಕಲು ಬರುತ್ತಾರಾ ಇಲ್ಲ, ಇಂದು ಸಹ ತಮ್ಮ ತಟಸ್ಥ ನಿಲುವುವನ್ನು ಮುಂದುವರಿಸುತ್ತಾರ ಅನ್ನೋದು ಪ್ರಶ್ನೆಯಾಗಿ ಕಾಡಿದೆ.

ABOUT THE AUTHOR

...view details