ಕರ್ನಾಟಕ

karnataka

ETV Bharat / state

Arun Singh ಸೂಚನೆ ಇದ್ದರೂ ಐದೇ ಸಚಿವರು ಶಕ್ತಿಸೌಧಕ್ಕೆ ಹಾಜರ್: ಉಳಿದವರೆಲ್ಲ ಗೈರು!

ಬಿಜೆಪಿ ರಾಜ್ಯ ಉಸ್ತುವಾರಿ ಅರುಣ್ ಸಿಂಗ್ ಪ್ರತಿ ಗುರುವಾರ ಸಚಿವರು ವಿಧಾನಸೌಧದಲ್ಲಿರುವ ತಮ್ಮ ಕಚೇರಿಯಲ್ಲಿ ಇರಬೇಕು ಎಂದು ಸೂಚನೆ ನೀಡಿದ್ದರು. ಆದರೆ ,ಸೂಚನೆ ನೀಡಿದ ಮೊದಲ ಗುರುವಾರ ಬಹುತೇಕ ಸಚಿವರು ವಿಧಾನಸೌಧದತ್ತ ಸುಳಿಯಲಿಲ್ಲ.

Shakti soudha
ಶಕ್ತಿಸೌಧ

By

Published : Jun 24, 2021, 5:23 PM IST

ಬೆಂಗಳೂರು:ಪ್ರತಿ ಗುರುವಾರ ಸಚಿವರು ವಿಧಾನಸೌಧದಲ್ಲಿರುವ ತಮ್ಮ ಕಚೇರಿಯಲ್ಲಿ ಇರಬೇಕು. ಶಾಸಕರು ಹಾಗೂ ಸಾರ್ವಜನಿಕರಿಗೆ ಲಭ್ಯವಾಗಬೇಕು ಎಂದು ಬಿಜೆಪಿ ರಾಜ್ಯ ಉಸ್ತುವಾರಿ ಅರುಣ್ ಸಿಂಗ್ ಸೂಚನೆ ನೀಡಿದ್ದರು. ಆದರೆ, ಸೂಚನೆ ನೀಡಿದ ಮೊದಲ ಗುರುವಾರ ಬಹುತೇಕ ಸಚಿವರು ವಿಧಾನಸೌಧದತ್ತ ಸುಳಿಯಲಿಲ್ಲ.

ಜೂನ್ 16 ರಂದು ಬಿಜೆಪಿ ರಾಜ್ಯ ಉಸ್ತುವಾರಿ ಅರುಣ್ ಸಿಂಗ್ ಬೆಂಗಳೂರು ಭೇಟಿ ವೇಳೆ ಎಲ್ಲಾ ಸಚಿವರು ವಿಧಾನಸೌಧ ತಮ್ಮ ಕಚೇರಿಗೆ ಆಗಮಿಸಿ, ಶಾಸಕರಿಗೆ ಹಾಗೂ ಸಾರ್ವಜನಿಕರಿಗೆ ಲಭ್ಯವಾಗಬೇಕೆಂದು ಸೂಚನೆ ನೀಡಿದ್ದರು. ಆದರೆ, ಮೊದಲ ಗುರುವಾರದಂದೇ ಬೆರಳೆಣಿಕೆಯಷ್ಟೇ ಮಂದಿ ವಿಧಾನಸೌಧಕ್ಕೆ ಆಗಮಿಸಿದರು. ಬಹುತೇಕ ಸಚಿವರು ವಿಧಾನಸೌಧದ ತಮ್ಮ ಕಚೇರಿ‌ ಕಡೆ ಸುಳಿಯಲಿಲ್ಲ. ಕೇವಲ ಐವರು ಸಚಿವರು ಇಂದು ವಿಧಾನಸೌಧಕ್ಕೆ ಆಗಮಿಸಿದ್ದಾರೆ.

ಸಚಿವರಾದ ಜಗದೀಶ್ ಶೆಟ್ಟರ್, ಆರ್. ಅಶೋಕ್, ಅರವಿಂದ ಲಿಂಬಾವಳಿ, ಆರ್.ಶಂಕರ್, ಕೆ. ಗೋಪಾಲಯ್ಯ ಅವರು ಗುರುವಾರ ವಿಧಾನಸೌಧಕ್ಕೆ ಆಗಮಿಸಿದ್ದಾರೆ. ಸುಮಾರು ನಾಲ್ಕೈದು ತಾಸು ವಿಧಾನಸೌಧದಲ್ಲಿ ಸಚಿವರು ಕಾರ್ಯನಿರ್ವಹಿಸಿದರು.

ಜೂನ್ 16 ರಂದು ರಾಜ್ಯಕ್ಕೆ ಆಗಮಿಸಿದ್ದ ಬಿಜೆಪಿ ರಾಜ್ಯ ಉಸ್ತುವಾರಿ ಅರುಣ್ ಸಿಂಗ್ ಸಚಿವರ ಸಭೆಯನ್ನು ನಡೆಸಿದ್ದರು. ಈ ವೇಳೆ, ಶಾಸಕರಿಗೆ ಹಾಗೂ ಪಕ್ಷದ ಕಾರ್ಯಕರ್ತರ ಕೈಗೆ ಸಚಿವರು ಸಿಗುತ್ತಿಲ್ಲ ಎಂಬ ಆಕ್ಷೇಪ ವ್ಯಕ್ತವಾಗಿತ್ತು. ಕೋವಿಡ್ ಹಿನ್ನೆಲೆಯಲ್ಲಿ ಸರ್ಕಾರದ ವರ್ಚಸ್ಸು ಹೆಚ್ಚಳದ ನಿಟ್ಟಿನಲ್ಲಿ ಸಚಿವರು ಮುತುವರ್ಜಿಯಿಂದ ಕೆಲಸ ಕಾರ್ಯಗಳನ್ನು ಮಾಡಬೇಕು. ಪ್ರತಿ ಗುರುವಾರದಂದು ವಿಧಾನಸೌಧದ ತಮ್ಮ ಕಚೇರಿಯಲ್ಲಿ ಉಪಸ್ಥಿತರಿರಬೇಕು ಎಂದು ಸೂಚನೆ ನೀಡಿದ್ದರು.

ಆದರೆ, ಬಹುತೇಕ ಸಚಿವರು ಉಸ್ತುವಾರಿ ಅರುಣ್ ಸಿಂಗ್ ಸೂಚನೆಯನ್ನು ಮೊದಲ ಗುರುವಾದಂದು ಪಾಲನೆ ಮಾಡಿಲ್ಲ.‌ ಮುಂದಿನ ವಾರಿದಿಂದ ಹೆಚ್ಚಿನ ಸಚಿವರು ವಿಧಾನಸೌಧಕ್ಕೆ ಆಗಮಿಸಿ ಶಾಸಕರು ಹಾಗೂ ಕಾರ್ಯಕರ್ತರ ಅಹವಾಲನ್ನು ಸ್ವೀಕರಿಸಲಿದ್ದಾರೆ ಎಂದು ಹೇಳಲಾಗಿದೆ.

ABOUT THE AUTHOR

...view details