ಬೆಂಗಳೂರು: 2019-20ನೇ ಶೈಕ್ಷಣಿಕ ಸಾಲಿನ ನರ್ಸಿಂಗ್ ಮತ್ತು ಫಿಜಿಯೋಥೆರಪಿ ಸ್ನಾತಕೋತ್ತರ ಕೋರ್ಸ್ಗಳಿಗೆ ಸೆಪ್ಟೆಂಬರ್ 8ರಂದು ಪರೀಕ್ಷೆ ನಡೆಯಲಿದ್ದು, ಇಂದಿನಿಂದ ಆನ್ಲೈನ್ ರಿಜಿಸ್ಟ್ರೇಷನ್ ಆರಂಭವಾಗಿದೆ.
ಸೆ. 8ರಂದು ಪಿಜಿ ಪ್ರವೇಶ ಪರೀಕ್ಷೆ: ಆನ್ಲೈನ್ ರಿಜಿಸ್ಟ್ರೇಷನ್ ಆರಂಭ
2019-20 ನೇ ಶೈಕ್ಷಣಿಕ ಸಾಲಿನ ನರ್ಸಿಂಗ್ ಮತ್ತು ಫಿಜಿಯೋಥೆರಪಿ ಸ್ನಾತಕೋತ್ತರ ಕೋರ್ಸ್ಗಳಿಗೆ ಇಂದಿನಿಂದ ಆನ್ಲೈನ್ ರಿಜಿಸ್ಟ್ರೇಷನ್ ಆರಂಭವಾಗಿದೆ.
ಕರ್ನಾಟಕ ಪರೀಕ್ಷಾ ಪ್ರಾಧಿಕಾರವು 2019-20ನೇ ಶೈಕ್ಷಣಿಕ ಸಾಲಿಗೆ ನರ್ಸಿಂಗ್ ಮತ್ತು ಫಿಜಿಯೋಥೆರಪಿ ಸ್ನಾತಕೋತ್ತರ ಕೋರ್ಸ್ಗಳಿಗೆ ಸರ್ಕಾರಿ ಕಾಲೇಜುಗಳು ಮತ್ತು ಅನುದಾನಿತ/ ಅನುದಾನ ರಹಿತ, ಮೈನಾರಿಟಿ ಮತ್ತು ನಾನ್ ಮೈನಾರಿಟಿ ಕಾಲೇಜುಗಳಲ್ಲಿ ಸರ್ಕಾರಿ ಸೀಟುಗಳ ಪ್ರವೇಶಾತಿಗಾಗಿ ಅಭ್ಯರ್ಥಿಗಳು ಆಯಾ ಕೋರ್ಸ್ಗಳಲ್ಲಿ ಪದವಿ ಪಡೆದು ಅರ್ಹರಿದ್ದಲ್ಲಿ ಅರ್ಜಿ ಸಲ್ಲಿಸಲು ಕೆಇಎ ವೆಬ್ಸೈಟ್ನಲ್ಲಿ ನೇರವಾಗಿ ನೋಂದಾಯಿಸಿಕೊಳ್ಳಬಹುದಾಗಿದೆ..
ಆನ್ಲೈನ್ ಮೂಲಕ kea.kar.nic.in ನಲ್ಲಿ ಇಂದಿನಿಂದ ರಿಜಿಸ್ಟೇಷನ್ ಮಾಡಿಕೊಳ್ಳಬಹುದು. ಪಿಜಿ ಪರೀಕ್ಷೆಯನ್ನು ಸೆಪ್ಟೆಂಬರ್ 8ರಂದು ಮಧ್ಯಾಹ್ನ 2:30 ರಿಂದ 4:30ರವರೆಗೆ ಬೆಂಗಳೂರು ಕೇಂದ್ರದಲ್ಲಿ ಮಾತ್ರ ನಡೆಸಲಾಗುವುದು. ಬ್ರೊಚರ್ ಮತ್ತು ಇತರೆ ವಿವರಗಳಿಗಾಗಿ ಕೆಇಎ ವೆಬ್ಸೈಟ್ ನೋಡಬಹುದಾಗಿದೆ.