ಕರ್ನಾಟಕ

karnataka

ETV Bharat / state

ಲಾಕ್​ಡೌನ್​ ಪರಿಹಾರ ನಿಧಿ ಹೆಸರಲ್ಲಿ ನಕಲಿ ಲಿಂಕ್ ನಂಬಿದರೆ ಹರೋಹರ - ಲಾಕ್ ಡೌನ್ ಪರಿಹಾರ ನಿಧಿ

ರಾಜ್ಯ ಸರ್ಕಾರಗಳು ಘೋಷಿಸಿರುವ ಲಾಕ್​ಡೌನ್ ಪರಿಹಾರ ನೀಡುವ ನೆಪದಲ್ಲಿ ನಕಲಿ ಲಿಂಕ್ ಕಳುಹಿಸಿ ಆನ್​ಲೈನ್ ಮೂಲಕ ಹಣವನ್ನು ದರೋಡೆ ಮಾಡಲು ಮುಂದಾಗಿದ್ದಾರೆ ಆನ್​​ಲೈನ್ ವಂಚಕರು. ಸರ್ಕಾರಗಳ ಆರ್ಥಿಕ ಸಹಾಯ ಘೋಷಣೆ ಆನ್​​ಲೈನ್ ವಂಚಕರಿಗೆ ವರದಾನವಾಗಿ ಪರಿಣಮಿಸಿದೆ.

Online frauds on Lockdown Relief Fund,ಲಾಕ್ ಡೌನ್ ಪರಿಹಾರ ನಿಧಿ ನೆಪದಲ್ಲಿ ವಂಚನೆ
ಲಾಕ್​ಡೌನ್​ ಪರಿಹಾರ ನಿಧಿ ಹೆಸರಿನಲ್ಲಿ ಲಿಂಕ್ ಕಳುಹಿಸಿ ಹಣ ಕಬಳಿಸಲು ಮುಂದಾದ ಆನ್​ಲೈನ್​ ವಂಚಕರು

By

Published : May 28, 2020, 5:15 PM IST

ಬೆಂಗಳೂರು: ಕೊರೊನಾ ವೈರಸ್​ಗೆ​​ ತತ್ತರಿಸಿ ಕಂಗೆಟ್ಟಿರುವ ಜನರಿಗೆ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಘೋಷಿಸಿರುವ ಲಾಕ್​ಡೌನ್ ಪರಿಹಾರ ಘೋಷಣೆ ಆನ್​ಲೈನ್ ವಂಚಕರಿಗೆ ವರದಾನವಾಗಿದೆ. ಹಾಗಾಗಿ ಪರಿಹಾರ ನೆಪದಲ್ಲಿ ನಕಲಿ ಲಿಂಕ್ ಕಳುಹಿಸಿ ಆನ್​ಲೈನ್ ಮೂಲಕ ಹಣ ದರೋಡೆ ಮಾಡಲು ಮುಂದಾಗಿದ್ದಾರೆ ಆನ್​​ಲೈನ್ ವಂಚಕರು.

ಕಾಳ್ಗಿಚ್ಚಿನಂತೆ ಜಗತ್ತಿನೆಲ್ಲೆಡೆ ಹರಡಿರುವ ಕೊರೊನಾದಿಂದ ದೇಶದಲ್ಲಿ ಸಾವಿರಾರು ಜನರು ಮೃತಪಟ್ಟಿದ್ದಾರೆ. ಲಾಕ್​​ಡೌನ್​ನಿಂದಾಗಿ ಆರ್ಥಿಕ ವ್ಯವಸ್ಥೆಗೆ‌ ಕೊಡಲಿ ಪೆಟ್ಟು ಬಿದ್ದಿದ್ದು, ಕೊರೊನಾ‌ದಿಂದ ಜೀವನ ಕಳೆದುಕೊಂಡಿರುವ ವಿವಿಧ ಸಮುದಾಯಗಳಿಗೆ ಇತ್ತೀಚೆಗೆ ರಾಜ್ಯ ಸರ್ಕಾರ ಪ್ಯಾಕೇಜ್ ಘೋಷಣೆ ಮಾಡಿತ್ತು. ನೇಕಾರರು, ಕ್ಷೌರಿಕರು ಹಾಗೂ ಆಟೋ ಚಾಲಕರು ಸೇರಿದಂತೆ ಬೇರೆ ಬೇರೆ ವೃತ್ತಿಗಳಲ್ಲಿ ತೊಡಗಿಸಿಕೊಂಡಿರುವವರಿಗೆ ಐದು ಸಾವಿರ ರೂ. ಆರ್ಥಿಕ ಸಹಾಯ ನೀಡುವುದಾಗಿ ಹೇಳಿತ್ತು. ಆರ್ಥಿಕ ಸಹಾಯ ಘೋಷಣೆ ಆನ್​​ಲೈನ್ ವಂಚಕರಿಗೆ ವರದಾನವಾಗಿ ಪರಿಣಮಿಸಿದೆ.

ಕೆಲವು ದಿನಗಳಿಂದ ವಾಟ್ಸ್​​ಆ್ಯಪ್​​​ ಸೇರಿದಂತೆ ಸೋಷಿಯಲ್ ಮಿಡಿಯಾದಲ್ಲಿ ನಕಲಿ ಲಿಂಕ್ ಕಳುಹಿಸಿ ಐದು ಸಾವಿರ ರೂ. ಪಡೆಯಲು ಎಂದು‌ ಲಿಂಕ್ ಒತ್ತಿ ಎಂದು ಹೇಳಿ ಮುಗ್ಧ ಜನರನ್ನು ಖದೀಮರು ಯಾಮಾರಿಸುತ್ತಿದ್ದಾರೆ. ಎಫ್‌ಜಿ ಲಾಕ್​​ಡೌನ್ ಫಂಡ್ ಹೆಸರಿನಲ್ಲಿ ಖದೀಮರು ಸಾಮಾಜಿಕ‌ ಜಾಲತಾಣದಲ್ಲಿ ಹರಿಬಿಟ್ಟು ಅಮಾಯಕರನ್ನು ತಮ್ಮತ್ತ ಸೆಳೆಯುವಂತೆ ಮಾಡುತ್ತಿದ್ದಾರೆ. ಲಿಂಕ್​ನಲ್ಲಿ ನೀವೂ ಭಾರತೀಯ ನಾಗರಿಕರಾಗಿದ್ದೀರಿ. ಲಾಕ್ ಡೌನ್ ಪರಿಹಾರದ ಐದು ಸಾವಿರ ಪಡೆಯಲು ನೀವು ಆಯ್ಕೆಯಾಗಿದ್ದೀರಿ. ಹಣ ಪಡೆಯಲು ಲಿಂಕ್ ಕ್ಲಿಕ್ ಮಾಡಿ ಎಂದು ಸಂದೇಶಕ್ಕೆ ರವಾನಿಸುತ್ತಾರೆ‌.‌ ಇದನ್ನು‌ ಓದುವ ಸಾಮಾನ್ಯ ಜನರಿಗೆ ಸಹಜವಾಗಿ ಆಸೆ ಹುಟ್ಟಿಕೊಳ್ಳುತ್ತದೆ. ಆಸೆಗಣ್ಣಿನಿಂದ ಲಿಂಕ್ ಒತ್ತುತ್ತಾರೆ. ಕ್ಲಿಕ್ ಮಾಡುತ್ತಿದ್ದಂತೆ ಅಭಿನಂದನೆಗಳು, ನೀವು ಭಾರತೀಯ ನಾಗರಿಕರು ಆಗಿದ್ದರೆ ಎಂಬ ಪ್ರಶ್ನೆಗೆ ಹೌದು ಎಂದು ಸಂದೇಶ ರವಾನಿಸಿದರೆ ಐದು ಸಾವಿರ ಯಾವುದಕ್ಕೆ‌ ಉಪಯೋಗಿಸುತ್ತೀರಾ ಎಂದು ಕೇಳುತ್ತದೆ. ಇಂಟರ್ ನೆಟ್, ಊಟ, ಬಟ್ಟೆ ಖರೀದಿ ಎಂಬಿತ್ಯಾದಿ ಆಯ್ಕೆಗಳ‌ ಪೈಕಿ‌ ಒಂದನ್ನು ಆಯ್ಕೆ‌ ಮಾಡಿದರೆ ಅಭಿನಂದನೆಗಳು. ಐದು ಸಾವಿರ ಪರಿಹಾರ ಹಣ ಪಡೆಯಲು ಅರ್ಹರಾಗಿದ್ದು, ಹಣ ಪಡೆಯಲು ಏಳು ವಾಟ್ಸ್​​ಆ್ಯಪ್​ ಗ್ರೂಪ್​ಗಳಿಗೆ ಸಂದೇಶ ಕಳುಹಿಸಿ ಎಂದು ಬರುತ್ತದೆ. ಕೆಲ ನಿಮಿಷಗಳ ಬಳಿಕ ನಿಮ್ಮ ಬ್ಯಾಂಕ್ ಅಕೌಂಟ್ ನಂಬರ್ ಕೇಳುತ್ತದೆ. ನೀವೂ ಏನಾದರೂ ಅಕೌಂಟ್ ನಂಬರ್ ನೀಡಿದರೆ ಬ್ಯಾಂಕ್ ಖಾತೆಯಲ್ಲಿರುವ ಹಣ ಕ್ಷಣ ಮಾತ್ರದಲ್ಲಿ ಲಪಟಾಯಿಸುತ್ತಾರೆ. ಹಣದಾಸೆಗಾಗಿ ಮೋಸದ ಜಾಲದ ಅರಿವು ಇರದ ಜನರು ವಾಟ್ಸ್​ಆ್ಯಪ್​ ಗ್ರೂಪ್​ಗಳಿಗೆ ಲಿಂಕ್ ಶೇರ್​ ಮಾಡುತ್ತಾರೆ. ಕ್ಷಣಮಾತ್ರದಲ್ಲಿ ಕಾಡ್ಗಿಚ್ಚಿನಂತೆ ಎಲ್ಲರ ವಾಟ್ಸ್​ಆ್ಯಪ್​​ ಪರದೆಗಳಿಗೆ ಫಾರ್ವಡ್ ಆಗಿ ವೈರಲ್ ಆಗುತ್ತದೆ

ಲಾಕ್ ಡೌನ್‌ ಎಫೆಕ್ಟ್ ನಿಂದ ಶೇ.25 ರಷ್ಟು ಇಂಟರ್​ನೆಟ್ ಬಳಕೆ ಮಾಡುವವರ ಸಂಖ್ಯೆ ಏರಿಕೆಯಾಗಿದೆ. ಇದನ್ನು ಕಂಡುಕೊಂಡಿರುವ ವಂಚಕರು ಆನ್​​ಲೈನ್ ದಂಧೆಯಲ್ಲಿ ತೊಡಗಿಸಿಕೊಂಡಿದ್ದಾರೆ. ಕೇಂದ್ರ ಸರ್ಕಾರ ಆ.31 ರವರೆ ಇಎಂಐ ಅವಧಿ ವಿಸ್ತರಣೆ ಹಿನ್ನೆಲೆಯಲ್ಲಿ‌ ಖದೀಮರು ಬ್ಯಾಂಕ್​​ಗಳ ಹೆಸರಿನಲ್ಲಿ ಸಾರ್ವಜನಿಕರಿಗೆ ಇಎಂಐ ಅವಧಿ ವಿಸ್ತರಣೆ ಮಾಡಬೇಕೆಂದರೆ ಬ್ಯಾಂಕ್ ಅಕೌಂಟ್ ನಂಬರ್, ಕ್ರೆಡಿಟ್ ಹಾಗೂ ಡೆಬಿಟ್ ಕಾರ್ಡ್ ಸಂಖ್ಯೆ ಕೊಡಿ ಎಂದು ಹೇಳುವ ಮೂಲಕ ವಂಚನೆ ಶತಪ್ರಯತ್ನ ನಡೆಸುತ್ತಿದ್ದಾರೆ.

ಅನಾಮಿಕ‌ ಲಿಂಕ್ ಒತ್ತುವ ಮುನ್ನ ಈ ಅಂಶಗಳ ಬಗ್ಗೆ ಗಮನವಿರಲಿ:

*ವಾಟ್ಸ್​​ಆ್ಯಪ್​​, ಸೋಷಿಯಲ್‌ ಮೀಡಿಯಾಗಳಲ್ಲಿ ಬರುವ ಅಪರಿಚಿತ ಲಿಂಕ್​​ಗಳನ್ನು ಕ್ಲಿಕ್‌ ಮಾಡದಿರಿ

*ಲಿಂಕ್​​ಗಳ ಬಗ್ಗೆ ಸಂದೇಹ ಅಥವಾ ಮಾಹಿತಿ ಬೇಕಾದರೆ ಸಂಬಂಧಪಟ್ಟ ಬ್ಯಾಂಕ್ ಗಳಿಗೆ ಅಥವಾ ವ್ಯಕ್ತಿಗಳನ್ನು ಭೇಟಿ ಮಾಡಿ ಗೊಂದಲ ನಿವಾರಿಸಿಕೊಳ್ಳಿ

*ಎಫ್ ಜಿ ಲಾಕ್ ಡೌನ್ ಪರಿಹಾರ ನಿಧಿ ಸೇರಿ ವಿವಿಧ ಹೆಸರಿನಲ್ಲಿ ಲಿಂಕ್ ಬಂದರೆ ನಿರ್ಲಕ್ಷಿಸಿ

*ಯಾವುದೇ ಕಾರಣಕ್ಕೂ ಒಟಿಪಿ, ಅಕೌಂಟ್ ನಂಬರ್ ಸೇರಿದಂತೆ ವೈಯಕ್ತಿಕ ವಿವರಗಳನ್ನು ಅಪರಿಚಿರೊಂದಿಗೆ ಹಂಚಿಕೊಳ್ಳಬೇಡಿ

ABOUT THE AUTHOR

...view details