ರಾಜಸ್ಥಾನ (ಭರತ್ಪುರ್ /ಬೆಂಗಳೂರು):ರಾಜಸ್ಥಾನ ಮೂಲದ ಹ್ಯಾಕರ್ಸ್ನಗರ ಪೊಲೀಸ್ ಆಯುಕ್ತರ ಹೆಸರಿನಲ್ಲಿ ಆನ್ಲೈನ್ನಲ್ಲಿ ವಂಚನೆ ನಡೆಸಿರುವ ಘಟನೆ ಬೆಳಕಿಗೆ ಬಂದಿದೆ.
ಆರೋಪಿಗಳು ರಾಜಸ್ಥಾನದ ಭರತ್ಪುರ್ ಮೂಲದವರು ಎಂದು ತಿಳಿದು ಬರುತ್ತಿದ್ದಂತೆ, ಬೆಂಗಳೂರು ಕ್ರೈಂ ಬ್ರಾಂಚ್ ಮತ್ತು ಸೈಬರ್ ಸೆಲ್ನ 12 ಅಧಿಕಾರಿಗಳ ತಂಡ ಭಾನುವಾರ ಭರತ್ಪುರದ ಕಮಾನ್ಗೆ ತೆರಳಿದೆ. ಭರತ್ಪುರ ವ್ಯಾಪ್ತಿಯ ಐಜಿ ಲಕ್ಷ್ಮಣ್ ಗೌರ್ ನೇತೃತ್ವದಲ್ಲಿ ಸುಮಾರು 12 ಗ್ರಾಮಗಳಲ್ಲಿ ತಂಡವು ಕಾರ್ಯಾಚರಣೆ ನಡೆಸಿ 4 ಮಂದಿ ಆರೋಪಿಗಳನ್ನು ವಶಕ್ಕೆ ಪಡೆದಿದೆ.