ಕರ್ನಾಟಕ

karnataka

ETV Bharat / state

ಕನ್ನಡೇತರರಿಗೆ ಕನ್ನಡ ಕಲಿಕೆ, ಆನ್​ಲೈನ್​ ಪರೀಕ್ಷೆಗೆ ಪ್ರಾಧಿಕಾರದ ಸಿದ್ಧತೆ - ಕನ್ನಡ ಆನ್​​​ಲೈನ್ ಪರೀಕ್ಷೆ

ಕನ್ನಡವನ್ನು ಕಲಿಕಾ ನಿಯಮವನ್ನಾಗಿ ಜಾರಿಗೆ ತರುವಲ್ಲಿ ಸಿದ್ಧತೆ ನಡೆಸಿದ್ದಾರೆ. ಅದರಲ್ಲಿ 1-7ನೇ ತರಗತಿಯ ಎಲ್ಲಾ ಪ್ರಾಥಮಿಕ ಶಾಲೆಗಳಲ್ಲಿ ಕನ್ನಡ ಭಾಷೆಯನ್ನು ಕಲಿಸುವುದಕ್ಕೆ ಕಠಿಣ ಕ್ರಮ ಜರುಗಿಸಲಾಗಿದೆ. ಇನ್ನು ಶಿಕ್ಷಣ ಸಚಿವ ಸುರೇಶ್ ಕುಮಾರ್ ಸಹಯೋಗದಲ್ಲಿ ಎಲ್ಲಾ ಪ್ರಾಥಮಿಕ ಶಾಲೆಗಳ ಮುಖ್ಯಸ್ಥರ ಜೊತೆ ಮಾತುಕತೆ ಮಾಡಲಾಗಿದೆ ಎಂದರು.

Online exma for non kannadiga
ಕನ್ನಡೇತರರಿಗೆ ಕನ್ನಡ ಕಲಿಕೆ...ಆನ್​ಲೈನ್​ ಪರೀಕ್ಷಗೆ ಪ್ರಾಧಿಕಾರದ ಸಿದ್ಧತೆ

By

Published : Aug 11, 2020, 8:54 PM IST

ಬೆಂಗಳೂರು:ಕನ್ನಡ ಅಭಿವೃದ್ಧಿ ದೃಷ್ಟಿಯಿಂದ ಇನ್ನು ಮುಂದೆ ರಾಜ್ಯದಲ್ಲಿರುವ ಕನ್ನಡೇತರರು ಕನ್ನಡ ಮಾತನಾಡಬೇಕು ಹಾಗೂ ಕನ್ನಡ ಕಲಿಯಬೇಕು ಎಂಬ ನಿಟ್ಟಿನಲ್ಲಿ ಕನ್ನಡ ಅಭಿವೃದ್ಧಿ ಪ್ರಾಧಿಕಾರ ಹೊಸ ಹೆಜ್ಜೆ ಇಟ್ಟಿದೆ.

ಸದ್ಯ ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷರಾಗಿರುವ ಟಿ.ಎಸ್.ನಾಗಾಭರಣ ಇಂತಹ ಹೊಸ ಕಾರ್ಯಕ್ಕೆ ಕೈ ಹಾಕಿದ್ದಾರೆ. ಕನ್ನಡ ಭಾಷಾ ಕೌಶಲ್ಯ ವೃದ್ಧಿಸಲು, ಆನ್​ಲೈನ್​ ಮೂಲಕ ಪರೀಕ್ಷೆಯೊಂದನ್ನು ಜಾರಿಗೆ ತಂದಿದ್ದಾರೆ.

ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಟಿ.ಎಸ್.ನಾಗಾಭರಣ

ಈ ಬಗ್ಗೆ ‘ಈಟಿವಿ ಭಾರತ’ ಜೊತೆ ಮಾತನಾಡಿದ ಟಿ.ಎಸ್ ನಾಗಾಭರಣ, ಮುಖ್ಯವಾಗಿ ಶಿಕ್ಷಣದಲ್ಲಿ ಕನ್ನಡವನ್ನು ಕಲಿಕಾ ನಿಯಮವನ್ನಾಗಿ ಜಾರಿಗೆ ತರುವಲ್ಲಿ ಸಿದ್ಧತೆ ನಡೆಸಿದ್ದಾರೆ. ಅದರಲ್ಲಿ 1-7ನೇ ತರಗತಿಯ ಎಲ್ಲಾ ಪ್ರಾಥಮಿಕ ಶಾಲೆಗಳಲ್ಲಿ ಕನ್ನಡ ಭಾಷೆಯನ್ನು ಕಲಿಸುವುದಕ್ಕೆ ಕಠಿಣ ಕ್ರಮ ಜರುಗಿಸಲಾಗಿದೆ. ಇನ್ನು ಶಿಕ್ಷಣ ಸಚಿವ ಸುರೇಶ್ ಕುಮಾರ್ ಸಹಯೋಗದಲ್ಲಿ ಎಲ್ಲಾ ಪ್ರಾಥಮಿಕ ಶಾಲೆಗಳ ಮುಖ್ಯಸ್ಥರ ಜೊತೆ ಮಾತುಕತೆ ಮಾಡಲಾಗಿದೆ ಎಂದರು.

ಈ ನಿಯಮವನ್ನು ಪಾಲಿಸದ ಶಾಲೆಗಳಿಗೆ ನೋಟಿಸ್ ಹಾಗೂ ಅವರ ಪರವಾನಗಿಯನ್ನು ರದ್ದು ಮಾಡಲಾಗುವುದು ಎಂದಿದ್ದಾರೆ. ಇದಲ್ಲದೆ ಉದ್ಯೋಗ ಕ್ಷೇತ್ರದಲ್ಲಿ ಇನ್ಮುಂದೆ ಶೇ. 90ರಷ್ಟು ಕನ್ನಡಿಗರಿಗೆ ಉದ್ಯೋಗ ಕಲ್ಪಿಸುವುದಕ್ಕೆ ರಾಜ್ಯ ಸರ್ಕಾರ ಕೆಲಸ ಮಾಡಿದೆ. ಸರೋಜಿನಿ ಮಹರ್ಷಿ ವರದಿಯಂತೆ, 15 ವರ್ಷ ಕರ್ನಾಟಕದಲ್ಲಿ ಇರಬೇಕು ಆತನಿಗೆ ಕನ್ನಡ, ಒದಲು, ಬರೆಯಲು ಬರಬೇಕು.

ಆದರೆ ಕನ್ನಡ ಗೊತ್ತಿಲ್ಲದವರಿಗೂ ಕೆಲಸ ಸಿಗುತ್ತಿದೆ. ಹೀಗಾಗಿ ಪರೀಕ್ಷೆಯ ಮಾನದಂಡ ಮುಖ್ಯ ಎಂದಿದ್ದಾರೆ. ಇದರ ಜೊತೆ ಅಮೆರಿಕ, ಆಸ್ಟ್ರೇಲಿಯಾ ಸೇರಿದಂತೆ ಬೇರೆ ಬೇರೆ ದೇಶದಲ್ಲಿರುವ ಕನ್ನಡಿಗರ ಮಕ್ಕಳಿಗೆ, ನಮ್ಮಲ್ಲಿ ವೈದ್ಯಕೀಯ ಹಾಗೂ ಇಂಜಿನಿಯರಿಂಗ್ ಕಾಲೇಜ್​​ಗಳಲ್ಲಿ ಸೀಟ್​ಗಳು ಸಿಗುತ್ತಿಲ್ಲ. ಕಾರಣ ಅವರಿಗೆ ಕನ್ನಡ ಭಾಷೆಯ ಕಲಿಕೆ ಇರುವುದಿಲ್ಲ. ಈ ಕಾರಣಕ್ಕೆ ಹೊರದೇಶದ ಕನ್ನಡಿಗರಿಗೆ ಕನ್ನಡ ಕಲಿಕೆಯ ದೃಢೀಕರಣ ಪತ್ರ ಬಯಸುವವರು, ಕನ್ನಡ ಭಾಷಾ ಆನ್​ಲೈನ್​ ಪರೀಕ್ಷೆ ತುಂಬಾ ಸಹಾಯಕಾರಿ ಆಗಲಿದೆ.

ಇದರಿಂದ ಉದ್ಯೋಗ ಸೃಷ್ಟಿ ಜೊತೆಗೆ ಕನ್ನಡದ ಬಗ್ಗೆ ಜ್ಞಾನ ವೃದ್ಧಿಯಾಗಲಿದೆ ಎಂದು ನಾಗಾಭರಣ ತಿಳಿಸಿದ್ದಾರೆ.

ABOUT THE AUTHOR

...view details