ಬೆಂಗಳೂರು: ಲಾಕ್ಡೌನ್ ಹಿನ್ನೆಲೆಯಲ್ಲಿ ರೋಗ ನಿಯಂತ್ರಣಕ್ಕೆ ವೈದ್ಯರು, ಪೊಲೀಸರು ಹಾಗೂ ಬಿಬಿಎಂಪಿ ಸಿಬ್ಬಂದಿ ಸೇವೆ ಮಾಡುತ್ತಿದ್ದು, ಇವರು ದಿನ ನಿತ್ಯ ಓಡಾಡುವ ವಾಹನ ಕೆಟ್ಟರೆ ಏನ್ ಗತಿ ಅಲ್ವಾ.. ಯಾಕಂದ್ರೆ ಅವುಗಳನ್ನ ಹೇಗೆ ರಿಪೇರಿ ಮಾಡೋದು ಅನ್ನೋ ಚಿಂತೆಯಲ್ಲಿರುತ್ತಾರೆ.
ಹೀಗಾಗಿ ತುರ್ತು ಸೇವೆ ಸಲ್ಲಿಸುತ್ತಿರುವವರ ವಾಹನ ಕೆಟ್ಟರೆ ಇವರ ಅಗತ್ಯಕ್ಕೆ ಕರ್ನಾಟಕ ರಾಜ್ಯ ದ್ವಿ ಚಕ್ರವಾಹನ ವರ್ಕ್-ಶಾಪ್ ಮಾಲೀಕರ ಮತ್ತು ತಂತ್ರಜ್ಞಾನ ಸಂಘವು ಪೊಲೀಸರು ಹಾಗೂ ವೈದ್ಯರ ವಾಹನ ಸರಿಪಡಿಸಲು ಆನ್ಲೈನ್ ಸೇವೆ ಶುರು ಮಾಡಿದೆ. ಸದ್ಯ ವಾಹನಗಳ ರಿಪೇರಿ ಮಾಡುವ ಕೆಲಸ ಮಾಡುತ್ತಿದ್ದಾರೆ. ಎಮರ್ಜೆನ್ಸಿ ಸೇವೆಯ ವಾಹನ ಕೆಟ್ಟರೆ ತಕ್ಷಣ ಆನ್ಲೈನ್ ಮುಖಾಂತರ ಮಾಹಿತಿ ತಿಳಿಸಿದರೆ ಸೇವೆಯು ನಿಮ್ಮಮನೆ ಬಾಗಿಲಿಗೆ ಬರುತ್ತದೆ.