ಬೆಂಗಳೂರು:ಬಿಬಿಎಂಪಿ ವ್ಯಾಪ್ತಿಯ ಎಲ್ಲ ವಲಯಗಳಲ್ಲಿ ಚಿತಾಗಾರ - ಸ್ಮಶಾನಗಳಲ್ಲಿ ಅಂತ್ಯಕ್ರಿಯೆ ವ್ಯವಸ್ಥೆ ಆನ್‌ಲೈನ್ ಮೂಲಕ ಜಾರಿಗೆ ತರಲು ಸರ್ಕಾರ ಆದೇಶಿಸಿದೆ.
20 ಚಿತಾಗಾರಗಳಿಗೂ ಹೊಸ ಆನ್‌ಲೈನ್ ವ್ಯವಸ್ಥೆ ಜಾರಿಗೊಳಿಸಿ, ಉಚಿತ ಆ್ಯಂಬುಲೆನ್ಸ್ ಹಾಗೂ ಮೃತದೇಹಗಳ ಅಂತ್ಯಸಂಸ್ಕಾರಕ್ಕೆ ಯಾವುದೇ ಹಣ ವಸೂಲಿ ಮಾಡುವಂತಿಲ್ಲ ಎಂದು ಸೂಚಿಸಿದೆ.
ಆನ್‌ಲೈನ್ ಚಿತಾಗಾರ/ ಸ್ಮಶಾನ ನಿರ್ವಹಣಾ ವ್ಯವಸ್ಥೆ 24/7 ಕೆಲಸ ಮಾಡಬೇಕು. ಅಂತ್ಯಕ್ರಿಯೆ ಸ್ಥಳ ಮತ್ತು ಸಮಯ ನಿಗದಿಗೆ ಸಹಾಯವಾಣಿ ಸಂಖ್ಯೆ 8495998495 ಆಗಿದ್ದು, ಇದೇ ಸಂಖ್ಯೆಗೆ ವಾಟ್ಸ್ಆ್ಯಪ್ ಸಂದೇಶ ಕೂಡಾ ಕಳಿಸಬಹುದಾಗಿದೆ. ಸಹಾಯವಾಣಿಗೆ ಕರೆ ಮಾಡಿ, ಸ್ಥಳ-ಸಮಯ ನಿಗದಿ ಬಳಿಕ ಟೋಕನ್ ಸಂಖ್ಯೆ ಮೆಸೇಜ್ ಬರಲಿದೆ, ಅರ್ಧ ಗಂಟೆ ಮೊದಲು ಸ್ಮಶಾನ ತಲುಪಬೇಕು ಎಂದು ತಿಳಿಸಲಾಗಿದೆ.