ಬೆಂಗಳೂರು: ಮಾರುಕಟ್ಟೆಯಲ್ಲಿ ಈರುಳ್ಳಿ ದರ ದಿಢೀರ್ ಕುಸಿತಗೊಂಡಿದ್ದು, ಬೆಳೆಗಾರನಿಗೆ ಕಣ್ಣೀರು ತರಿಸಿದೆ. ಕೆಲ ತಿಂಗಳ ಹಿಂದೆ ಕೆ.ಜಿಗೆ 150 ರೂ ತಲುಪಿದ್ದ ಈರುಳ್ಳಿದ ದರ ಇದೀಗ 50 ಕೆ.ಜಿ ಮೂಟೆಗೆ 250 ರೂಪಾಯಿಗೆ ತಲುಪಿದೆ.
ನಗರದ ಯಶವಂತಪುರ ಈರುಳ್ಳಿ ಮಾರುಕಟ್ಟೆಯಲ್ಲಿ ಮಹಾರಾಷ್ಟ್ರದ ಈರುಳ್ಳಿ 100 ಕೆ.ಜಿ ಮೂಟೆಗೆ 500 ರೂ. ನಿಂದ 1500 ರೂ. ಬೆಲೆಯಿದ್ದರೆ, ಕರ್ನಾಟಕದ ಈರುಳ್ಳಿ ಸಗಟು ದರ 100 ಕೆ.ಜಿ ಮೂಟೆಗೆ 500 ರೂ. ನಿಂದ 1,400 ರೂ. ದರವಿದೆ ಎಂದು ಯಶವಂತಪುರ ಎಪಿಎಂಸಿ ಈರುಳ್ಳಿ, ಆಲೂಗಡ್ಡೆ ವರ್ತಕರ ಸಂಘದ ಕಾರ್ಯದರ್ಶಿ ಸಿ. ಉದಯ್ ಶಂಕರ್ ತಿಳಿಸಿದರು.