ಈರುಳ್ಳಿ ವರ್ತಕರು, ಬೆಳೆಗಾರರಿಗೆ ಸಿಹಿ ಸುದ್ದಿ: ರಫ್ತಿಗೆ ಕೇಂದ್ರದಿಂದ ಗ್ರೀನ್ ಸಿಗ್ನಲ್ - ಈರುಳ್ಳಿ ರಫ್ತಿನ ಮೇಲೆ ನಿಷೇಧ
19:57 December 28
ಬೆಂಗಳೂರು ರೋಸ್ ಈರುಳ್ಳಿ ಮತ್ತು ಕೃಷ್ಣಪುರಂ ತಳಿಯ ಈರುಳ್ಳಿ ರಫ್ತು ಮಾಡಲು ಕೇಂದ್ರ ಸರ್ಕಾರ ಅನುಮತಿ ನೀಡಿದ್ದು, ರೈತರಿಗೆ ಸಂತಸ ತಂದಿದೆ. ಈ ಮೊದಲು ಈರುಳ್ಳಿ ರಫ್ತಿಗೆ ನಿಷೇಧ ಹೇರಿದ್ದರಿಂದ ರಫ್ತುದಾರರ ಜೊತೆಗೆ ರೈತರು ಸಹ ನಷ್ಟ ಅನುಭವಿಸಿದ್ದರು.
ಬೆಂಗಳೂರು:ಈರುಳ್ಳಿ ರಫ್ತಿನ ಮೇಲೆ ನಿಷೇಧ ಹೇರಿದ್ದ ಕೇಂದ್ರ ಸರ್ಕಾರ ಇದೀಗ ರಫ್ತುದಾರರು ಹಾಗೂ ರೈತರಿಗೆ ಸಿಹಿ ಸುದ್ದಿ ನೀಡಿದೆ. ಈರುಳ್ಳಿ ನಿಷೇಧದ ಮೇಲಿದ್ದ ನೀತಿ ಪರಿಷ್ಕರಿಸಿದ್ದು, ರಫ್ತಿಗೆ ಅನುಮತಿ ನೀಡಿದೆ.
ಬೆಂಗಳೂರು ರೋಸ್ ಈರುಳ್ಳಿ ಮತ್ತು ಕೃಷ್ಣಪುರಂ ತಳಿಯ ಈರುಳ್ಳಿ ರಫ್ತು ಮಾಡಲು ಕೇಂದ್ರ ಸರ್ಕಾರ ಅನುಮತಿ ನೀಡಿದ್ದು, ರೈತರಿಗೆ ಸಂತಸ ತಂದಿದೆ. ಈ ಮೊದಲು ಈರುಳ್ಳಿ ರಫ್ತಿಗೆ ನಿಷೇಧ ಹೇರಿದ್ದರಿಂದ ರಫ್ತುದಾರರ ಜೊತೆಗೆ ರೈತರು ಸಹ ನಷ್ಟ ಅನುಭವಿಸಿದ್ದರು. ಇದೀಗ ಹೊರ ರಾಜ್ಯ ಹಾಗೂ ವಿದೇಶಕ್ಕೂ ರಫ್ತು ಮಾಡಲು ಅವಕಾಶ ನೀಡಲಾಗಿದೆ.
ಇದನ್ನೂ ಓದಿ:ಈರುಳ್ಳಿ ರಫ್ತು ನಿಷೇಧದ ಬಳಿಕ ಆನಿಯನ್ ಸೀಡ್ಸ್ ಮೇಲೂ ನಿರ್ಬಂಧ!