ಕರ್ನಾಟಕ

karnataka

ETV Bharat / state

ರಸ್ತೆಗುಂಡಿ ಮುಚ್ಚಲು ಒಂದು ವಾರದ ಗಡುವು ನೀಡಿದ ಮೇಯರ್ - ಎಂಟು ವಲಯಗಳ ಮುಖ್ಯ ಇಂಜಿನಿಯರ್​

ಎಲ್ಲಾ ಎಂಟು ವಲಯಗಳ ಮುಖ್ಯ ಇಂಜಿನಿಯರ್​ಗಳ ಜೊತೆ ಕೂಡಲೆ ಸಭೆ ನಡೆಸಿ ತ್ವರಿತವಾಗಿ ರಸ್ತೆ ಗುಂಡಿಗಳನ್ನು ವೈಜ್ಞಾನಿಕವಾಗಿ ಮುಚ್ಚುವಂತೆ ಸೂಚನೆ ನೀಡಬೇಕೆಂದು ಮೇಯರ್​​ ಗಂಗಾಭಿಕೆ ಅಧಿಕಾರಿಗಳಿಗೆ ಆದೇಶಿಸಿದ್ದಾರೆ.

ಗಡುವು ನೀಡಿದ ಮೇಯರ್

By

Published : Aug 31, 2019, 3:33 AM IST

ಬೆಂಗಳೂರು:ನಗರದ ರಸ್ತೆಗುಂಡಿಗಳು ವೈಜ್ಞಾನಿಕವಾಗಿ ಮುಚ್ಚಿರಬೇಕು, ಸೆಪ್ಟೆಂಬರ್ 6ರಿಂದ ನಡೆಸುವ ಅನಿರೀಕ್ಷಿತ ತಪಾಸಣೆ ವೇಳೆ ಗುಂಡಿಗಳು ಕಂಡುಬಂದರೆ ಅಧಿಕಾರಿಗಳು ಮತ್ತು ಗುತ್ತಿಗೆದಾರರಿಗೆ ದಂಡ ವಿಧಿಸಲಾಗುವುದು ಎಂದು ಮೇಯರ್ ಗಂಗಾಂಬಿಕೆ ಅಧಿಕಾರಿಗಳ ಸಭೆ ನಡೆಸಿ ಸೂಚಿಸಿದ್ದಾರೆ.

ಸೆಪ್ಟೆಂಬರ್ 6 ರಿಂದ ಎಲ್ಲಾ 198 ವಾರ್ಡ್​ಗಳಿಗೆ ಅನಿರೀಕ್ಷಿತವಾಗಿ ತಪಾಸಣೆ ಆರಂಭಿಸಲಾಗುವುದು. ಎಲ್ಲಾ ಎಂಟು ವಲಯಗಳ ಮುಖ್ಯ ಇಂಜಿನಿಯರ್​ಗಳ ಜೊತೆ ಕೂಡಲೆ ಸಭೆ ನಡೆಸಿ ತ್ವರಿತವಾಗಿ ರಸ್ತೆ ಗುಂಡಿಗಳನ್ನು ವೈಜ್ಞಾನಿಕವಾಗಿ ಮುಚ್ಚುವಂತೆ ಸೂಚನೆ ನೀಡಬೇಕು. ರಸ್ತೆ ಗುಂಡಿಗಳು ಬಿದ್ದಿರುವ ಬಗ್ಗೆ ಸಹಾಯ ಆ್ಯಪ್​ನಲ್ಲಿ ಸಾರ್ವಜನಿಕರು ದಾಖಲಿಸಿರುವ ದೂರುಗಳನ್ನು ಸಂಗ್ರಹಿಸಿ, ಸ್ಥಳ ವೀಕ್ಷಣೆ ಮಾಡಿ ತಕ್ಷಣ ಗುಂಡಿಗಳನ್ನು ಮುಚ್ಚಲು ಕ್ರಮವಹಿಸಬೇಕು ಎಂದು ಸೂಚನೆ ನೀಡಿದರು.

ಪಾಲಿಕೆ ಪ್ರಧಾನ ಅಭಿಯಂತರರು ಎಂ.ಆರ್.ವೆಂಕಟೇಶ್ ಪ್ರತಿಕ್ರಿಯಿಸಿ, ಗುಂಡಿಗಳನ್ನು ಅವೈಜ್ಞಾನಿಕವಾಗಿ ಮುಚ್ಚಿದ್ದಲ್ಲಿ ಇಂಜಿನಿಯರ್ಗಳಿಗೆ ಒಂದು ಗುಂಡಿಗೆ 1 ಸಾವಿರ ರೂ. ದಂಡ ವಿಧಿಸಲಾಗುವುದು ಎಂದರು.

ABOUT THE AUTHOR

...view details