ಬೆಂಗಳೂರು :ಅಕ್ಟೋಬರ್ 11ರಿಂದ 16ರವರೆಗೆಕಲಬುರಗಿ ಹಾಗೂ ಧಾರವಾಡ ಪೀಠವೂ ಸೇರಿಬೆಂಗಳೂರುಹೈಕೋರ್ಟ್ ಪ್ರಧಾನ ಪೀಠಕ್ಕೂ ಒಂದು ವಾರ ದಸರಾ ರಜೆ ನೀಡಲಾಗಿದೆ.
ಹೈಕೋರ್ಟ್ನ ಹಂಗಾಮಿ ಸಿಜೆ ಎಸ್ ಸಿ ಶರ್ಮಾ ಅವರ ಆದೇಶದ ಮೇರೆಗೆ ಹೈಕೋರ್ಟ್ ರಿಜಿಸ್ಟ್ರಾರ್ ಜನರಲ್ ಶಿವಶಂಕರೇಗೌಡ ಈ ಕುರಿತು ನೋಟಿಫಿಕೇಶನ್ ಹೊರಡಿಸಿದ್ದಾರೆ. ಅದರಂತೆ, ಹೈಕೋರ್ಟ್ನ ಎಲ್ಲ ಪೀಠಗಳಿಗೆ ಒಂದು ವಾರ ದಸರಾ ರಜೆ ನೀಡಲಾಗಿದೆ.
ಈ ಅವಧಿಯಲ್ಲಿ ಸಿವಿಲ್ ಹಾಗೂ ಕ್ರಿಮಿನಲ್ ಪ್ರಕರಣಗಳಿಗೆ ಸಂಬಂಧಿಸಿದಂತೆ ಯಾವುದೇ ಅರ್ಜಿ, ಮೇಲ್ಮನವಿ ಸ್ವೀಕರಿಸುವುದಿಲ್ಲ. ಹಾಗಿದ್ದೂ, ತುರ್ತು ಇದ್ದಲ್ಲಿ ಮಧ್ಯಂತರ ಆದೇಶ, ತಡೆಯಾಜ್ಞೆ ಹಾಗೂ ತಾತ್ಕಾಲಿಕ ನಿರ್ಬಂಧಕಾಜ್ಞೆಗಳಿಗೆ ಅರ್ಜಿ ಸಲ್ಲಿಸಬಹುದು ಎಂದು ತಿಳಿಸಲಾಗಿದೆ.
ಅರ್ಜಿ ಸಲ್ಲಿಸುವುದಿದ್ದಲ್ಲಿ ಅಕ್ಟೋಬರ್ 11ರ ಬೆಳಗ್ಗೆ 10-30ರಿಂದ 12-30ರ ನಡುವೆ ಸಲ್ಲಿಸಿದರೆ ಆ ಅರ್ಜಿಗಳನ್ನು ಆಯಾ ಪೀಠಗಳ ಮುಂದೆ ವಿಚಾರಣೆಗೆ ನಿಗದಿಪಡಿಸಲಾಗುವುದು. ಈ ಅವಧಿಯಲ್ಲಿ ರಿಜಿಸ್ಟ್ರಾರ್ (ನ್ಯಾಯಾಂಗ) ಮುಂದೆ ಸಲ್ಲಿಸುವ ಮೆಮೋಗಳನ್ನು ಪರಿಗಣಿಸಲಾಗದು ಎಂದು ನೋಟಿಫಿಕೇಷನ್ನಲ್ಲಿ ತಿಳಿಸಲಾಗಿದೆ. ರಜಾಕಾಲದಲ್ಲಿ ತುರ್ತು ಪ್ರಕರಣಗಳ ವಿಚಾರಣೆಗೆ ಎಲ್ಲ ಪೀಠಗಳಲ್ಲೂ ಅಕ್ಟೋಬರ್ 12ರಂದು ಕಲಾಪ ನಡೆಯಲಿದೆ ಎಂದು ಸ್ಪಷ್ಟಪಡಿಸಲಾಗಿದೆ.
ಓದಿ:ಪಂಚಮಸಾಲಿ ಮೀಸಲಾತಿ ಹೋರಾಟದ ಬಗ್ಗೆ ಸಂಧಾನದ ಪ್ರಶ್ನೆ ಇಲ್ಲ.. ವರದಿ ಪಡೆದ ಬಳಿಕ ಪ್ರಕ್ರಿಯೆ ಆರಂಭ : ಸಿಎಂ