ಬೆಂಗಳೂರು:ನಗರದ ಪುಲಿಕೇಶಿನಗರದಲ್ಲಿ ಕೂಕ್ಟೌನ್ ರಸ್ತೆಯಲ್ಲಿ ಮೂರು ಹಾಗೂ ನಾಲ್ಕು ಅಂತಸ್ತಿನ ಎರಡು ಕಟ್ಟಡಗಳು ಕುಸಿದು ಓರ್ವ ಕಾರ್ಮಿಕ ಸಾವನ್ನಪ್ಪಿದ್ದಾನೆ.
ಈ ಘಟನೆ ತಡರಾತ್ರಿ 2.15 ರ ಸುಮಾರಿಗೆ ನಡೆದಿದೆ. ಮೂರು ಅಂತಸ್ತಿನ ಕಟ್ಟಡ ನಿರ್ಮಾಣ ಹಂತದಲ್ಲಿತ್ತು. ಈವರೆಗೂ 6 ಕಾರ್ಮಿಕರನ್ನು ರಕ್ಷಣೆ ಮಾಡಲಾಗಿದೆ. ಇನ್ನು ಗಾಯಾಳುಗಳಿಗೆ ಬೌರಿಂಗ್ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗ್ತಿದೆ.
ಅಗ್ನಿಶಾಮಕ ಸಿಬ್ಬಂದಿಯಿಂದ ರಕ್ಷಣಾ ಕಾರ್ಯಾರಣೆ ನಡೆಯುತ್ತಿದೆ. ಕಟ್ಟಡದ ಅವಶೇಷಗಳಡಿ ಹಲವರು ಸಿಲುಕಿರುವ ಶಂಕೆ ಇದೆ. ಬಿಬಿಎಂಪಿ ಅಧಿಕಾರಿಗಳು ಘಟನಾ ಸ್ಥಳಕ್ಕೆ ಆಗಮಿಸಿದ್ದಾರೆ.
ನಾಲ್ಕು ಅಂತಸ್ತಿನ ಸಾಯಿ ಆದಿ ಅಂಬಲ್ ಅಪಾರ್ಟ್ಮೆಂಟ್ನ ಬೇಸ್ ಮೆಂಟ್ನ ರೂಂನಲ್ಲಿ ಸೆಕ್ಯುರಿಟಿ ಗಾರ್ಡ್ ಪ್ಯಾಮಿಲಿ ಸಿಲುಕಿರುವ ಶಂಕೆಯಿದ್ದು.ಪತ್ನಿ, ಮಗು ಜೊತೆ ಸೆಕ್ಯೂರಿಟಿ ಗಾರ್ಡ್ ವಾಸವಿದ್ದರು.ಸ್ಥಳಕ್ಕೆ ಫ್ರೇಜರ್ ಟೌನ್ ಪೊಲೀಸರು ಹಾಗೂ ಅಗ್ನಿಶಾಮಕ ಸಿಬ್ಬಂದಿ ದೌಡಾಯಿಸಿದ್ದಾರೆ.ಕಟ್ಟಡದಲ್ಲಿರುವವರು ಬಿಹಾರ ,ರಾಜಸ್ಥಾನ, ನೇಪಾಳ ಮೂಲದವರು ಎಂದು ತಿಳಿದು ಬಂದಿದೆ.
ಕಟ್ಟಡದಲ್ಲಿ ಫರ್ನಿಚರ್ ಕಾಮಗಾರಿ ನಡೆಯುತ್ತಿದ್ದು, 3 ಹಂತದ ಕಟ್ಟಡದ ಬೇಸ್ ಮೆಂಟ್‌ನಲ್ಲಿ 13ಜನ ಇದ್ದರು ಎನ್ನಲಾಗ್ತಿದೆ.ಅದರಲ್ಲಿ 5 ಜನರನ್ನ ಹೊರತೆಗೆದು ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಗಿದೆ. ಇವರಲ್ಲಿ ಐವರ ಸ್ಥಿತಿ ಗಂಭೀರವಾಗಿದೆ.