ಕರ್ನಾಟಕ

karnataka

ETV Bharat / state

ಒಂದು ದೇಶ ಒಂದು ತೆರಿಗೆ ಓಕೆ, ಒಂದು ದೇಶ ಒಂದು ಭಾಷೆ ಏಕೆ: ಕೇಂದ್ರಕ್ಕೆ ಜೈರಾಮ್​ ರಮೇಶ್​ ಪ್ರಶ್ನೆ - ಬೆಂಗಳೂರು ಲೇಟೆಸ್ಟ್​ ಸುದ್ದಿ

ಒಂದು ದೇಶ ಒಂದು ತೆರಿಗೆ ಓಕೆ, ಒಂದು ದೇಶ ಒಂದು ಭಾಷೆ ಏಕೆ ಎಂಬ ಅರ್ಥದಲ್ಲಿ ಕೇಂದ್ರಕ್ಕೆ ಕಾಂಗ್ರೆಸ್​ ನಾಯಕ ಜೈರಾಮ್​ ಟಾಂಗ್​ ಕೊಟ್ಟಿದ್ದಾರೆ.

ಕೇಂದ್ರಕ್ಕೆ ಜೈರಾಂ​ ರಮೇಶ್​ ಕಿಡಿ

By

Published : Sep 15, 2019, 5:30 PM IST

ಬೆಂಗಳೂರು: ಒಂದು ದೇಶ ಒಂದು ತೆರಿಗೆ, ಒಂದು ದೇಶ ಒಂದು ಭಾಷೆ ಏಕೆ ಹೊಂದಬೇಕು ಎಂದು ಹಿಂದಿ ಹೇರಿಕೆ ಕುರಿತು ಕೇಂದ್ರ ಗೃಹ ಸಚಿವ ಅಮಿತ್ ಶಾ ಹೇಳಿಕೆಗೆ ಕಾಂಗ್ರೆಸ್ ನಾಯಕ ಜೈರಾಮ್​ ರಮೇಶ್ ತಿರುಗೇಟು ನೀಡಿದ್ದಾರೆ.

ಕೇಂದ್ರಕ್ಕೆ ಜೈರಾಮ್​​ ರಮೇಶ್​ ಟಾಂಗ್​

ಕರ್ನಾಟಕ ವಾಣಿಜ್ಯ ಮತ್ತು ಕೈಗಾರಿಕಾ ಮಹಾಸಂಸ್ಥೆಯಲ್ಲಿ ಆಯೋಜಿದಲಾಗಿದ್ದ ಸಂಸ್ಥಾಪನಾ ದಿನಾಚರಣೆ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ರಾಜ್ಯಪಾಲರನ್ನು ಹಿಂದಿಯಲ್ಲಿ, ಮುಖ್ಯಮಂತ್ರಿಗಳನ್ನು ಕನ್ನಡದಲ್ಲಿ ಇತರ ಅತಿಥಿಗಳನ್ನು ಇಂಗ್ಲಿಷ್​ನಲ್ಲಿ ಸ್ವಾಗತಿಸಿ ಒಂದು ದೇಶ ಹಲವು ಭಾಷೆ ಎಂಬ ಸಂದೇಶವನ್ನು ಸಾರಿ ಹಿಂದಿ ಹೇರಿಕೆಯನ್ನು ಅವರು ಖಂಡಿಸಿದರು.

ಒಂದು ದೇಶ ಒಂದು ತೆರಿಗೆ ಹೊಂದಬಹುದು. ಒಂದು ದೇಶ ಒಂದು ಚುನಾವಣೆ ಹೊಂದಬಹುದು. ಆದರೆ ಒಂದು ದೇಶ ಒಂದು ಭಾಷೆ ಸರಿಯಲ್ಲ. ಇದು ವಾಸ್ತವದಲ್ಲಿ ಜಾರಿಯಾಗದ ಪರಿಕಲ್ಪನೆ ಎಂದು ಭಾಷಣದ ಆರಂಭದಲ್ಲೇ ಒಂದೇ ನಿಮಿಷದೊಳಗೆ ಕನ್ನಡ, ಇಂಗ್ಲಿಷ್ ಮತ್ತು ಹಿಂದಿಯಲ್ಲಿ ಮಾತನಾಡಿ ಕೇಂದ್ರಕ್ಕೆ ಟಾಂಗ್ ಕೊಟ್ಟರು.

ಬಿಜೆಪಿ ನಾಯಕರ ಕಾಲೆಳೆದ ಬಳಿಕ ರಾಜ್ಯಪಾಲ ವಿ. ಆರ್. ವಾಲಾ ಕ್ಷಮೆಯಾಚಿಸಿದ ಜೈರಾಮ್​ ರಮೇಶ್ ಅವರು, ಡಿಸಿಎಂ ಗೋವಿಂದ ಕಾರಜೋಳಗೂ ಟಾಂಗ್ ಕೊಟ್ಟರು. ನಾವೆಲ್ಲ ಇಲ್ಲಿ ಬೆಂಗಳೂರು ಅಭಿವೃದ್ಧಿ ಬಗ್ಗೆ ಮಾತನಾಡುದ್ದೇವೆ. ಆದ್ರೆ ಕೆಲವರು ವಿಚಿತ್ರ ವ್ಯಕ್ತಿಗಳೂ ಇದ್ದಾರೆ. ಈ ವ್ಯಕ್ತಿಗಳು ಉತ್ತಮ ರಸ್ತೆಗಳೇ ಅಪಘಾತಕ್ಕೆ ಕಾರಣ ಅಂತ ಯೋಚನೆ ಮಾಡುತ್ತಾರೆ ಎಂದು ಗೋವಿಂದ ಕಾರಜೋಳ ಇತ್ತೀಚೆಗೆ ಉತ್ತಮ ರಸ್ತೆಗಳಿಂದ ರಸ್ತೆ ಅಪಘಾತಗಳು ಸಂಭವಿಸುತ್ತವೆ ಎಂಬ ಹೇಳಿಕೆಗೆ ತಿರುಗೇಟು ನೀಡಿದ್ರು.

ABOUT THE AUTHOR

...view details