ಬೆಂಗಳೂರು: ಪಿಎಸ್ಐ ನೇಮಕಾತಿ ಹಗರಣ ಸಂಬಂಧ ನಗರದ ಹೈಗ್ರೌಂಡ್ಸ್ ಪೊಲೀಸ್ ಠಾಣೆಯಲ್ಲಿ ದಾಖಲಾಗಿದ್ದ ಎಫ್ಐಆರ್ನ ಮೊದಲ ಆರೋಪಿ ಜಾಗೃತ್ ಕೊನೆಗೂ ಸಿಐಡಿ ಪೊಲೀಸರ ಬಲೆಗೆ ಬಿದ್ದಿದ್ದಾನೆ. ಚನ್ನಪಟ್ಟಣದಲ್ಲಿ ಆರೋಪಿಯನ್ನು ಬಂಧಿಸಲಾಗಿದೆ. ಈತ ಪರೀಕ್ಷೆ ರದ್ದಾದ ಬಳಿಕ ನಡೆದ ಪ್ರತಿಭಟನೆಯ ಮುಂದಾಳತ್ವವನ್ನೂ ವಹಿಸಿದ್ದ.
ಹಗರಣ ಕುರಿತು ಪ್ರಕರಣ ದಾಖಲಾಗುತ್ತಿದ್ದಂತೆ ಪರಾರಿಯಾಗಿದ್ದ ಜಾಗೃತ್, ಮೊದಲ ಹಂತದಲ್ಲೇ ಹಣ ಕೊಟ್ಟು ಒಎಂಆರ್ ಶೀಟ್ ತಿದ್ದಿಸಿರುವುದು ಗೊತ್ತಾಗಿತ್ತು. ಎಫ್ಎಸ್ಎಲ್ ವರದಿಯನ್ವಯ ಪ್ರಕರಣದಲ್ಲಿ ಈತ ಆರೋಪಿಯಾಗಿದ್ದ. ಇದಾದ ನಂತರ ತಲೆಮರೆಸಿಕೊಂಡು ಹೈಕೋರ್ಟ್ನಲ್ಲಿ ಎಫ್ಐಆರ್ ವಜಾಕ್ಕೆ ಆಗ್ರಹಿಸಿ ಅರ್ಜಿ ಸಲ್ಲಿಸಿದ್ದನು.