ಬೆಂಗಳೂರು :ನಗರದಲ್ಲಿ ಎನ್ಐಎ ಅಧಿಕಾರಿಗಳು ಭರ್ಜರಿ ಕಾರ್ಯಾಚರಣೆ ನಡೆಸಿ ಶಂಕಿತ ಐಸಿಸ್ ಉಗ್ರನನ್ನು ಬಂಧಿಸಿದ್ದಾರೆ.
ಎನ್ಐಎ ಅಧಿಕಾರಿಗಳ ಭರ್ಜರಿ ಬೇಟೆ.. ಬೆಂಗಳೂರಿನಲ್ಲಿ ಶಂಕಿತ ಐಸಿಸ್ ಉಗ್ರ ಸೆರೆ! - ಭಯೋತ್ಪಾದಕನನ್ನು ಬಂಧಿಸಿದ ಐಎನ್ಐ
ಎರಡು ದಿನಗಳ ಹಿಂದೆ ರಾಜ್ಯಾದ್ಯಂತ 19 ಕಡೆ ದಾಳಿ ನಡೆಸಿದ್ದ ಎನ್ಐಎ, ಅತ್ತ ತಮಿಳುನಾಡಿನಲ್ಲೂ ರೇಡ್ ಮಾಡಿತ್ತು. ಇಂದು ಆರೋಪಿ ಬೆಂಗಳೂರಿನಲ್ಲಿರುವ ಮಾಹಿತಿ ಮೇರೆಗೆ ಬಂಧಿಸಿದ್ದಾರೆ. ಈ ಆರೋಪಿ ಹಾಗೂ ಮೆಹಬೂಬ್ ಪಾಷಾ ಸೇರಿ ಕರ್ನಾಟಕ, ತಮಿಳುನಾಡು ಸೇರಿ ಹಲವು ರಾಜ್ಯಗಳಲ್ಲಿ ಮತೀಯ ಗಲಭೆ ಹುಟ್ಟು ಹಾಕಲು ಹಾಗೂ ಉಗ್ರ ಚಟುವಟಿಕೆ ನಡೆಸಲು ಸಂಚು ರೂಪಿಸಿದ್ದರು ಎನ್ನಲಾಗ್ತಿದೆ.
ಫಝಿ@ಫಝೀವ್ ಉರ್ ರೆಹಮಾನ್ ಬಂಧಿತ ಆರೋಪಿ. ಈ ಆರೋಪಿ ಅಲ್ ಹಿಂದ್ ಸಂಘಟನೆಯ ಮುಖ್ಯಸ್ಥ ಮೆಹಬೂಬ್ ಪಾಷಾ ಮತ್ತು ಖ್ವಾಜಿ ಟೀಂ ಜೊತೆ ಗುರುತಿಸಿಕೊಂಡಿದ್ದ. ಇಂದು ಆರೋಪಿ ಬೆಂಗಳೂರಿನ ಟ್ಯಾನಿ ರೋಡ್‌ನಲ್ಲಿರುವ ಮಾಹಿತಿ ಮೇರೆಗೆ ಎನ್ಐಎ ಅಧಿಕಾರಿಗಳು ಸಿನಿಮೀಯ ರೀತಿ ಆರೋಪಿಯನ್ನು ಬೆನ್ನತ್ತಿ ಹಿಡಿದಿದ್ದಾರೆ.
ಎರಡು ದಿನಗಳ ಹಿಂದೆ ರಾಜ್ಯಾದ್ಯಂತ 19 ಕಡೆ ದಾಳಿ ನಡೆಸಿದ್ದ ಎನ್ಐಎ, ಅತ್ತ ತಮಿಳುನಾಡಿನಲ್ಲೂ ರೇಡ್ ಮಾಡಿತ್ತು. ಇಂದು ಆರೋಪಿ ಬೆಂಗಳೂರಿನಲ್ಲಿರುವ ಮಾಹಿತಿ ಮೇರೆಗೆ ಬಂಧಿಸಿದ್ದಾರೆ. ಈ ಆರೋಪಿ ಹಾಗೂ ಮೆಹಬೂಬ್ ಪಾಷಾ ಸೇರಿ ಕರ್ನಾಟಕ, ತಮಿಳುನಾಡು ಸೇರಿ ಹಲವು ರಾಜ್ಯಗಳಲ್ಲಿ ಮತೀಯ ಗಲಭೆ ಹುಟ್ಟು ಹಾಕಲು ಹಾಗೂ ಉಗ್ರ ಚಟುವಟಿಕೆ ನಡೆಸಲು ಸಂಚು ರೂಪಿಸಿದ್ದರು ಎನ್ನಲಾಗ್ತಿದೆ. ಇತ್ತಿಚೇಗಷ್ಟೇ ಸುದ್ದು ಗುಂಟೆಪಾಳ್ಯ ಬಳಿ ಮೆಹಬೂಬ್ ಪಾಷಾನನ್ನ ಬಂಧಿಸಲಾಗಿತ್ತು. ಸದ್ಯ ಈತನ ಸಹಚರ ಪಝಿ ಕೆಲ ಉಗ್ರ ಚಟುವಟಿಕೆ ನಡೆಸಲು ಸಿದ್ಧತೆ ಮಾಡಿದ್ದ ಎಂದು ತಿಳಿದು ಬಂದಿದೆ.