ಕರ್ನಾಟಕ

karnataka

ETV Bharat / state

'ರೈತರ ಜೊತೆ ಒಂದು ದಿನ' ಕಾರ್ಯಕ್ರಮ ಮುಂದುವರೆಯಲಿದೆ : ಸಚಿವ ಬಿ ಸಿ ಪಾಟೀಲ್

ಮದ್ಯದಲ್ಲಿ ಮಳೆ ಕೊಂಚ ಕೈಕೊಟ್ಟ ಹಿನ್ನೆಲೆ ಸಮಸ್ಯೆ ಆಗಿತ್ತು. ಕೆಲ ಒಣ ಬೆಳೆಗಳಿಗೆ ಸಮಸ್ಯೆ ಇಲ್ಲ. ಬೀಜ, ಗೊಬ್ಬರದ ಸಮಸ್ಯೆ ಈ ವರ್ಷ ಆಗಿಲ್ಲ. ಎಲ್ಲಾ ಭಾಗದಲ್ಲೂ ಮಳೆಯಾಗಿದೆ..

one-day-with-farmers-program-will-continue
ಬಿ ಸಿ ಪಾಟೀಲ್​

By

Published : Aug 30, 2021, 9:28 PM IST

ಬೆಂಗಳೂರು :ಕೋವಿಡ್​ ಹಿನ್ನೆಲೆ ಸ್ಥಗಿತಗೊಂಡಿದ್ದ 'ರೈತರ ಜೊತೆ ಒಂದು ದಿನ' ಕಾರ್ಯಕ್ರಮವನ್ನು ಮರಳಿ ಮುಂದುವರಿಸಲಾಗುವುದು ಎಂದು ಕೃಷಿ ಸಚಿವ ಬಿ ಸಿ ಪಾಟೀಲ್​ ಹೇಳಿದರು.

'ರೈತರ ಜೊತೆ ಒಂದು ದಿನ' ಕಾರ್ಯಕ್ರಮ ಮುಂದುವರಿಯಲಿದೆ..

ಇಂದು ನಗರದ ಬಿಜೆಪಿ ಕಚೇರಿ ಜಗನ್ನಾಥ ಭವನದಲ್ಲಿ ಮಾತನಾಡಿದ ಸಚಿವರು, ರೈತರಿಗೆ ಆತ್ಮ ಸ್ಥೈರ್ಯ ತುಂಬಲು 'ರೈತರ ಜೊತೆ ಒಂದು ದಿನ' ಕಾರ್ಯಕ್ರಮ ಆರಂಭಿಸಲಾಗಿತ್ತು. ರೈತರ ಜೊತೆ ಒಂದು ದಿನ ಕಳೆದಾಗ ಅಲ್ಲಿರೋ ಸಮಸ್ಯೆ ಆಲಿಸಬಹುದು ಎಂಬುದು ಈ ಕಾರ್ಯಕ್ರಮದ ಉದ್ದೇಶ. ಈ ನಿಟ್ಟಿನಲ್ಲಿ ಮುಂದಿನ ದಿನಗಳಲ್ಲಿ ಈ ಕಾರ್ಯಕ್ರಮವನ್ನು ಮುಂದುವರೆಸಿಕೊಂಡು ಹೋಗಲಾಗುವುದು ಎಂದು ಹೇಳಿದರು.

ಬಿಜೆಪಿ ಕಚೇರಿಗೆ ಸಚಿವರ ಭೇಟಿ ಬಗ್ಗೆ ಮಾತನಾಡಿ, ಬಿಜೆಪಿಯಲ್ಲಿ ಒಂದು ಸಂಪ್ರದಾಯ ಇದೆ. ತಿಂಗಳಲ್ಲಿ ಮಂತ್ರಿಗಳು ಎರಡು ಬಾರಿ ಸಾರ್ವಜನಿಕರ ಸಮಸ್ಯೆ ಆಲಿಸಲು ಪಕ್ಷ ಸೂಚಿಸಿದೆ. ಸರ್ಕಾರ ಮತ್ತು ಪಕ್ಷದ ನಡುವೆ ಬೆಸುಗೆ ಇರಬೇಕು, ಬೇರೆ ಪಕ್ಷದಲ್ಲಿ ಈ ನಡವಳಿಕೆ ಇಲ್ಲ ಎಂದುರು.

ಇದೇ ಸಂದರ್ಭದಲ್ಲಿ ರಾಜ್ಯದಲ್ಲಿ ಮಳೆ-ಬೆಳೆ ಬಗ್ಗೆ ಮಾತನಾಡಿ, ಮದ್ಯದಲ್ಲಿ ಮಳೆ ಕೊಂಚ ಕೈಕೊಟ್ಟ ಹಿನ್ನೆಲೆ ಸಮಸ್ಯೆ ಆಗಿತ್ತು. ಕೆಲ ಒಣ ಬೆಳೆಗಳಿಗೆ ಸಮಸ್ಯೆ ಇಲ್ಲ. ಬೀಜ, ಗೊಬ್ಬರದ ಸಮಸ್ಯೆ ಈ ವರ್ಷ ಆಗಿಲ್ಲ. ಎಲ್ಲಾ ಭಾಗದಲ್ಲೂ ಮಳೆಯಾಗಿದೆ ಎಂದರು.

ABOUT THE AUTHOR

...view details