ಬೆಂಗಳೂರು: ಕೋವಿಡ್ ಸೋಂಕು ತಡೆಗಟ್ಟಲು ಇಡೀ ದೇಶದಲ್ಲೇ ಲಾಕ್‌ಡೌನ್ ಘೋಷಿಸಲಾಗಿತ್ತು. ಇದಾದ ಬಳಿಕ ಮೊದಲ ಅಲೆಯ ಕೋವಿಡ್ ಅಂತ್ಯವಾಗುತ್ತಿದ್ದಂತೆ ದೇಶದೆಲ್ಲೆಡೆ 45 ವರ್ಷ ಮೇಲ್ಪಟ್ಟವರಿಗೆ ಲಸಿಕೆ ನೀಡಲು ಆರಂಭಿಸಲಾಯಿತು. ಅದರಲ್ಲೂ ಎರಡನೇ ಅಲೆಯ ಕೋವಿಡ್ ತೀವ್ರತೆ ಹೆಚ್ಚಾದ ಬೆನ್ನಲ್ಲೆ ಇದೇ ವರ್ಷ ಮೇ ತಿಂಗಳಿಂದ 18 ವರ್ಷ ಮೇಲ್ಪಟ್ಟವರು ಕೂಡ ಲಸಿಕೆ ಪಡೆಯಬಹುದು ಎಂದು ಕೇಂದ್ರ ಸರ್ಕಾರ ಅದೇಶ ಹೊರಡಿಸಿತು.
ಇದರ ಜೊತೆಗೆ ರಾಜ್ಯದಲ್ಲಿ ಹಾಗೂ ನಗರದಲ್ಲಿ ಲಸಿಕೆಗೆ ಹಾಹಾಕಾರ ಉಂಟಾಗಿದ್ದು ಕೂಡ ನಿಜ. ಇದೀಗ ಬಿಬಿಎಂಪಿ ಮತ್ತು ಬೆಂಗಳೂರು ನಗರ ವ್ಯಾಪ್ತಿಯಲ್ಲಿ 1 ಕೋಟಿ ವ್ಯಾಕ್ಸಿನೇಷನ್ ನೀಡಲಾಗಿದೆ. ಅದರಲ್ಲೂ ಬಿಬಿಎಂಪಿ ಮತ್ತು ಬೆಂಗಳೂರು ಜಿಲ್ಲಾಡಳಿತ ವೇಗವಾಗಿ ಲಸಿಕೆ ವಿತರಿಸಿದ ಹೆಗ್ಗಳಿಕೆ ಪಡೆದಿದೆ.
ಬಿಬಿಎಂಪಿ:
- ಫಸ್ಟ್ ಡೋಸ್ - 65,50,169
- ಸೆಕೆಂಡ್ ಡೋಸ್ - 21,80,183
- ಒಟ್ಟು - 87,30,352 ಲಸಿಕೆ