ಕರ್ನಾಟಕ

karnataka

ETV Bharat / state

ಮಾಲೀಕನಿಲ್ಲದ ಸಮಯ ನೋಡಿಕೊಂಡು ಆಭರಣಗಳನ್ನು ಕದ್ದೊಯ್ದಿದ್ದ ಕೆಲಸಗಾರ ಅಂದರ್​ - bangalore latest news

ಬ್ಯಾಡರಹಳ್ಳಿಯ ಕಾಳಿಕಾ ನಗರದ ಜ್ಯುವೆಲ್ಲರಿ ಮೇಕಿಂಗ್ ಶಾಪ್​​ನಲ್ಲಿ ಕೆಲಸಕ್ಕಿದ್ದ ಚೇತನ್ ಎಂಬಾತ ಅಂಗಡಿ ಮಾಲೀಕ ಇಲ್ಲದ ಸಮಯ ನೋಡಿಕೊಂಡು ಆಭರಣಗಳನ್ನು ಕದ್ದು ಪರಾರಿಯಾಗಿದ್ದ. ಸದ್ಯ ಆರೋಪಿ ಚೇತನ್​ನನ್ನು ಬ್ಯಾಡರಹಳ್ಳಿ ಪೊಲೀಸರು ಬಂಧಿಸಿ, 3 ಲಕ್ಷ ರೂ. ಬೆಲೆ ಬಾಳುವ ಆಭರಣಗಳನ್ನು ವಶಕ್ಕೆ ಪಡೆದಿದ್ದಾರೆ.

one arrested who theft silver from jewelry shop
ಮಾಲೀಕ ಇಲ್ಲದ ಸಮಯ ನೋಡಿಕೊಂಡು ಆಭರಣಗಳನ್ನು ಹೊತ್ತೊಯ್ದ ಕೆಲಸಗಾರ; ಆರೋಪಿ ಅಂದರ್​!

By

Published : Feb 18, 2021, 1:46 PM IST

ಬೆಂಗಳೂರು: ಬ್ಯಾಡರಹಳ್ಳಿ ಪೊಲೀಸರು ಕಾರ್ಯಾಚರಣೆ ನಡೆಸಿ ಐದು ಕೆಜಿ ಬೆಳ್ಳಿಯನ್ನು ಕಳ್ಳತನ ಮಾಡಿ ಪರಾರಿಯಾಗಿದ್ದ ಆರೋಪಿಯನ್ನು ಬಂಧಿಸಿದ್ದಾರೆ.

ಬ್ಯಾಡರಹಳ್ಳಿಯ ಕಾಳಿಕಾನಗರದ ಜ್ಯುವೆಲ್ಲರಿ ಮೇಕಿಂಗ್ ಶಾಪ್​​ನಲ್ಲಿ ಕೆಲಸಕ್ಕಿದ್ದ ಆರೋಪಿಯು, ಮಾಲೀಕ ಇಲ್ಲದ್ದನ್ನು ಗಮನಿಸಿ ಕಳ್ಳತನ ಮಾಡಿದ್ದಾನೆ. ಕಾಳಿಕಾನಗರದಲ್ಲಿ ಬೆಳ್ಳಿಯ ಆಭರಣಗಳ ಡಿಸೈನ್ ಮಾಡುವ ಅಂಗಡಿ ಇಟ್ಟುಕೊಂಡಿದ್ದ ವ್ಯಕ್ತಿಯು ಅದೇ ಅಂಗಡಿಯಲ್ಲಿ ಎರಡೂವರೆ ತಿಂಗಳ ಹಿಂದೆ ಕೆಲಸಕ್ಕೆಂದು ಆರೋಪಿ ಚೇತನ್​ನನ್ನು ಸೇರಿಸಿಕೊಂಡಿದ್ದಾನೆ.

ಈ ಸುದ್ದಿಯನ್ನೂ ಓದಿ:ಗದಗ; ಚಾಲಕನ ನಿಯಂತ್ರಣ ತಪ್ಪಿ ಕಾರು ಪಲ್ಟಿ, ಒಬ್ಬನ ಸಾವು

ದಿನೇಶ್ ಎಂಬುವರು ತನ್ನ ಬೆಳ್ಳಿಯ ಆಭರಣವನ್ನು ಡಿಸೈನ್ ಮಾಡಲು ಕೊಟ್ಟಿದ್ದರು. ಅಂಗಡಿ ಮಾಲೀಕನು ತನ್ನ ತಂದೆಗೆ ಹುಷಾರಿಲ್ಲದ ಕಾರಣ ಊರಿಗೆ ಹೋಗಿ ಬರುವಷ್ಟರಲ್ಲಿ ಬೆಳ್ಳಿಯ ಆಭರಣಗಳ ಜೊತೆ ಆರೋಪಿ ಚೇತನ್ ಪರಾರಿಯಾಗಿದ್ದ. ಸದ್ಯ ಆರೋಪಿಯನ್ನು ಬ್ಯಾಡರಹಳ್ಳಿ ಪೊಲೀಸರು ಬಂಧಿಸಿ, 3 ಲಕ್ಷ ರೂ. ಬೆಲೆ ಬಾಳುವ ಆಭರಣಗಳನ್ನು ವಶಕ್ಕೆ ಪಡೆದಿದ್ದಾರೆ.

ABOUT THE AUTHOR

...view details