ಕರ್ನಾಟಕ

karnataka

ETV Bharat / state

ಪರಿಚಯಸ್ಥನಿಂದಲೇ ಮನೆಗೆ ಕನ್ನ: ಮನೆಮಂದಿ ಊರಿಗೆ ತೆರಳಿದಾಗ ಚಿನ್ನಾಭರಣ ಕಳ್ಳತನ

ಕುಟುಂಬಸ್ಥರು ಊರಿಗೆ ತೆರಳಿದಾಗ ಹೊಂಚು ಹಾಕಿದ ಪರಿಚಯಸ್ಥ ವ್ಯಕ್ತಿ 1 ಲಕ್ಷದ 20 ಸಾವಿರ ರೂ. ಬೆಲೆ ಬಾಳುವ 20 ಗ್ರಾಂ ತೂಕದ ಚಿನ್ನದ ಸರ ಹಾಗೂ 5 ಗ್ರಾಂ ತೂಕದ ಚಿನ್ನದ ಉಂಗುರ ಎಗರಿಸಿದ್ದ. ಆ ಚಿನ್ನಾಭರಣವನ್ನು ವಶಪಡಿಸಿಕೊಳ್ಳುವಲ್ಲಿ ಬ್ಯಾಡರಹಳ್ಳಿ ಪೊಲೀಸರು ಯಶಸ್ವಿಯಾಗಿದ್ದಾರೆ.

By

Published : Jun 23, 2021, 12:55 PM IST

lakshminarayana
ಚಿನ್ನಾಭರಣ ಕಳ್ಳತನದಲ್ಲಿ ಬಂಧಿತನಾದ ಆರೋಪಿ ಲಕ್ಷ್ಮೀನಾರಾಯಣ್

ಬೆಂಗಳೂರು: ಕುಟುಂಬಸ್ಥರು ಊರಿಗೆ ತೆರಳಿದಾಗ ಹೊಂಚು ಹಾಕಿದ ಪರಿಚಯಸ್ಥ ವ್ಯಕ್ತಿ ಲಕ್ಷಾಂತರ ರೂಪಾಯಿ ಮೌಲ್ಯದ ಚಿನ್ನಾಭರಣ ಕಳ್ಳತನ ಮಾಡಿದ್ದಾನೆ. ಇದೀಗ ಬ್ಯಾಡರಹಳ್ಳಿ ಪೊಲೀಸರು ಕಾರ್ಯಾಚರಣೆ ನಡೆಸಿ ಆರೋಪಿಯನ್ನು ಬಂಧಿಸಿದ್ದಾರೆ.

ವಶಪಡಿಸಿಕೊಂಡ ಚಿನ್ನಾಭರಣ

ಲಕ್ಷ್ಮೀನಾರಾಯಣ್ ಬಂಧಿತ ಆರೋಪಿ. ಈತನಿಂದ 1 ಲಕ್ಷ 20 ಸಾವಿರ ರೂ ಮೌಲ್ಯದ 20 ಗ್ರಾಂ ಚಿನ್ನಾಭರಣವನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಪರಿಚಯಸ್ಥರ ಮನೆಯಲ್ಲಿಯೇ ಕಳ್ಳತನ ಮಾಡಿದ್ದ ಆರೋಪಿಯ ವಿರುದ್ಧ ಬ್ಯಾಡರಹಳ್ಳಿ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.

ಪ್ರಕರಣದ ವಿವರ

ದೂರುದಾರರಿಗೆ ಲಕ್ಷ್ಮೀನಾರಾಯಣ ಪರಿಚಯಸ್ಥನಾಗಿದ್ದ. ಆಗಾಗ್ಗೆ ಮನೆಗೆ ಬಂದು ಹೋಗುತ್ತಿದ್ದನಂತೆ. ಕಳೆದ ವರ್ಷ ಡಿಸೆಂಬರ್ 1 ರಂದು ಊರಿಗೆ ಹೋಗಿದ್ದ ದೂರುದಾರರು ಅದೇ ತಿಂಗಳ 15 ರಂದು ಊರಿನಿಂದ ವಾಪಸ್ ಬಂದಿದ್ದಾರೆ. ಈ ವೇಳೆ ಮನೆಯಲ್ಲಿದ್ದ ಚಿನ್ನಾಭರಣ ಕಳವಾಗಿದ್ದು ಗೊತ್ತಾಗಿದೆ.

ಇದನ್ನೂ ಓದಿ:'ಎಡವಟ್ಟಾದ್ರೆ ಏನ್ ಗತಿ, 5 ಸಾವಿರ ರೂ. ಕೊಡಿ ಆಮೇಲೆ ಲಸಿಕೆ ಹಾಕಿ..!!‌‌' ವೃದ್ಧನ ರಂಪಾಟ ನೋಡಿ

ABOUT THE AUTHOR

...view details