ಕರ್ನಾಟಕ

karnataka

ETV Bharat / state

'ಬೆಳ್ಳಿ ಸಿನಿಮಾ' ಕಾರ್ಯಕ್ರಮದಲ್ಲಿ ಅತಿಥಿಯಾಗಿ ಬಂದ್ರು ಚಿನ್ನೇಗೌಡ್ರು - ಸಾಕ್ಷ್ಯಚಿತ್ರ

ಕನ್ನಡ ಚಲನಚಿತ್ರ ಅಕಾಡೆಮಿ ನಡೆಸುವ ವಿಶೇಷ ಕಾರ್ಯಕ್ರಮ ಬೆಳ್ಳಿ ಸಿನಿಮಾ ಬೆಳ್ಳಿ ಮಾತು. ಸುಮಾರು 75 ವಾರಗಳಿಂದ ಯಶಸ್ವಿಯಾಗಿ ನಡೆದುಕೊಂಡು ಬರುತ್ತಿರುವ ಈ ಕಾರ್ಯಕ್ರಮಕ್ಕೆ ಈ ವಾರ ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿಯ ಅಧ್ಯಕ್ಷರಾದ ನಿರ್ಮಾಪಕ ಎಸ್‌.ಎ.ಚಿನ್ನೇಗೌಡ ಅತಿಥಿಯಾಗಿ ಆಗಮಿಸಿ ಬೆಳ್ಳಿ ಮಾತು ಕಾರ್ಯಕ್ರಮಕ್ಕೆ ನೇರವೆರಿಸಿದರು.

ಈ ಬಾರಿಯ ಬೆಳ್ಳಿ ಸಿನಿಮಾ ಬೆಳ್ಳಿ ಮಾತುಗೆ ಎಸ್‌.ಎ.ಚಿನ್ನೇಗೌಡ

By

Published : Jun 16, 2019, 11:49 AM IST

ಬೆಂಗಳೂರು:ಕನ್ನಡ ಚಲನಚಿತ್ರ ಅಕಾಡೆಮಿ ವತಿಯಿಂದ 75 ವಾರಗಳಿಂದ ಹಮ್ಮಿಕೊಳ್ಳಲಾಗುತ್ತಿರುವಬೆಳ್ಳಿ ಸಿನಿಮಾ ಬೆಳ್ಳಿ ಮಾತು ಕಾರ್ಯಕ್ರಮದಲ್ಲಿ ಈ ವಾರ ವಿಶೇಷ ಅತಿಥಿಯಾಗಿ ಚಲನಚಿತ್ರ ವಾಣಿಜ್ಯ ಮಂಡಳಿಯ ಅಧ್ಯಕ್ಷರಾದ ನಿರ್ಮಾಪಕ ಎಸ್‌.ಎ.ಚಿನ್ನೇಗೌಡ ಆಗಮಿಸಿದ್ದರು.

ನಗರದ ರವೀಂದ್ರ ಕಲಾಕ್ಷೇತ್ರದಲ್ಲಿ ನಡೆದ ಈ ಕಾರ್ಯಕ್ರಮಕ್ಕೆ ಚಿನ್ನೇಗೌಡರ ಕುಟುಂಬ ಸಮೇತ ಆಗಮಿಸಿ ಕಾರ್ಯಕ್ರಮಕ್ಕೆ ಮೆರಗು ಹೆಚ್ಚಿಸಿದರು. ಅಲ್ಲದೆ ಚಿನ್ನೇಗೌಡ್ರು ಕುರಿತಾದಂತಹ ಓದು ಸಾಕ್ಷ್ಯಚಿತ್ರವನ್ನು ಕನ್ನಡ ಚಲನಚಿತ್ರ ಅಕಾಡೆಮಿ ಅಧ್ಯಕ್ಷರಾದ ನಾಗತಿಹಳ್ಳಿ ಚಂದ್ರಶೇಖರ್ ಅವರ ಮಾರ್ಗದರ್ಶನದಲ್ಲಿ ಸಿದ್ದಪಡಿಸಿ ಕಾರ್ಯಕ್ರಮದಲ್ಲಿ ಪ್ರದರ್ಶಿಸಲಾಯಿತು.

ಅಲ್ಲದೆ ಈ ಕಾರ್ಯಕ್ರಮದಲ್ಲಿ ಚಿನ್ನೇಗೌಡರು ನಡೆದು ಬಂದ ಹಾದಿಯನ್ನು ಸಂವಾದದ ಮುಖಾಂತರ ಚರ್ಚಿಸಲಾಯಿತು. ಇನ್ನು ಈ ಕಾರ್ಯಕ್ರಮಕ್ಕೆ ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿಯ ಉಪಾಧ್ಯಕ್ಷರಾದ ಕರಿಸುಬ್ಬು, ಕಾರ್ಯದರ್ಶಿಗಳಾದ ಭಾಮ ಹರೀಶ್, ಹಿರಿಯ ನಟಿ ಜಯಂತಿ, ಸುಂದರ್ ರಾಜ್, ಪ್ರಮೀಳ ಜೋಷಾಯಿ, ಶಿವರಾಮಣ್ಣ, ಸಾರಾ ಗೋವಿಂದು ಸೇರಿದಂತೆ ಅನೇಕ ಹಿರಿಯ ಕಲಾವಿದರು ಕಾರ್ಯಕ್ರಮಕ್ಕೆ ಆಗಮಿಸಿದರು.

ಈ ಬಾರಿಯ ಬೆಳ್ಳಿ ಸಿನಿಮಾ ಬೆಳ್ಳಿ ಮಾತುನಲ್ಲಿ ಎಸ್.ಎ.ಚಿನ್ನೇಗೌಡ

ABOUT THE AUTHOR

...view details