ಬೆಂಗಳೂರು:ಕಾಮಗಾರಿ ವೇಳೆ ಬೃಹತ್ ಶೆಡ್ ಗೋಡೌನ್ ಮುರಿದುಬಿದ್ದು, ಸೈಟ್ ಇಂಜಿನಿಯರ್ ಮೋಹಿತ್ ಖಂಡೇವಾಲ ಎಂಬುವವರು ಸ್ಥಳದಲ್ಲೇ ಮೃತಪಟ್ಟಿದ್ದಾರೆ.
ಬೃಹತ್ ಶೆಡ್ ಮುರಿದು ಸೈಟ್ ಇಂಜಿನಿಯರ್ ಸ್ಥಳದಲ್ಲೇ ಸಾವು - site engineer death in Bangalore,
ಬೃಹತ್ ಮಟ್ಟದ ಶೆಡ್ ಮುರಿದು ಸೈಟ್ ಇಂಜಿನಿಯರ್ ಸ್ಥಳದಲ್ಲೇ ಸಾವನ್ನಪ್ಪಿರುವ ಘಟನೆ ಬೆಂಗಳೂರಿನಲ್ಲಿ ನಡೆದಿದೆ.
![ಬೃಹತ್ ಶೆಡ್ ಮುರಿದು ಸೈಟ್ ಇಂಜಿನಿಯರ್ ಸ್ಥಳದಲ್ಲೇ ಸಾವು site engineer death, site engineer death in Bangalore, site engineer death news, bangalore site engineer death news, Bangalore crime news, ಸೈಟ್ ಇಂಜನಿಯರ್ ಸಾವು, ಬೆಂಗಳೂರಿನಲ್ಲಿ ಸೈಟ್ ಇಂಜನೀಯರ್ ಸಾವು, ಬೆಂಗಳೂರಿನಲ್ಲಿ ಸೈಟ್ ಇಂಜನೀಯರ್ ಸಾವು ಸುದ್ದಿ, ಬೆಂಗಳೂರು ಅಪರಾಧ ಸುದ್ದಿ,](https://etvbharatimages.akamaized.net/etvbharat/prod-images/768-512-7278142-933-7278142-1589977739179.jpg)
ಬೃಹತ್ ಮಟ್ಟದ ಶೆಡ್ ಮುರಿದು ಸೈಟ್ ಇಂಜಿನಿಯರ್ ಸ್ಥಳದಲ್ಲೇ ಸಾವು
ಮಧ್ಯಪ್ರದೇಶದ ಮೂಲದ ಮೋಹಿತ್ ಹಲವು ವರ್ಷಗಳಿಂದ ನಗರದಲ್ಲಿ ಕೆಲಸ ಮಾಡುತ್ತಿದ್ದರು. ನಿನ್ನೆ ಉತ್ತರ ಚಿಕ್ಕಜಾಲ ಸಮೀಪ ಸೊಣ್ಣಪ್ಪನಹಳ್ಳಿಯ ರಾಷ್ಟ್ರೀಯ ಹೆದ್ದಾರಿಗೆ ಹೊಂದಿಕೊಂಡಿರುವ ಎರಡು ಎಕರೆ ಪ್ರದೇಶದಲ್ಲಿ ಗೋಡೌನ್ ನಿರ್ಮಾಣವಾಗ್ತಿತ್ತು. ಈ ಜಾಗಕ್ಕೆ ಭೇಟಿ ನೀಡಿದ ವೇಳೆ ಶೆಡ್ ಮುರಿದು ದುರಂತ ಸಂಭವಿಸಿದೆ.
ಇನ್ನು ಈ ಘಟನೆ ಬಗ್ಗೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಚಿಕ್ಕಜಾಲ ಪೊಲೀಸರು ಮುಂದಿನ ಕ್ರಮ ಕೈಗೊಂಡಿದ್ದಾರೆ.