ಕರ್ನಾಟಕ

karnataka

ETV Bharat / state

ಬಿಬಿಎಂಪಿ ವ್ಯಾಪ್ತಿಯ ವ್ಯವಹಾರ ವಹಿವಾಟು ಪರವಾನಗಿ ನವೀಕರಣಕ್ಕೆ ಆನ್​ಲೈನ್ ವ್ಯವಸ್ಥೆ - ಬಿಬಿಎಂಪಿ ವ್ಯವಹಾರ ಪರವಾನಗಿ ನವೀಕರಣ

ನಿಗದಿತ ಶುಲ್ಕವನ್ನು ಬಿಬಿಎಂಪಿ ಪೋರ್ಟಲ್ ಮೂಲಕ ಪಾವತಿಸಿದ ನಂತರ, ಆನ್‌ಲೈನ್‌ನಲ್ಲಿ ವ್ಯವಹಾರ ಪರವಾನಗಿ ನವೀಕರಣ ಮಾಡಬಹುದು. ಅರ್ಜಿದಾರರು ಯಾವುದೇ ಪ್ರತ್ಯೇಕ ಅರ್ಜಿಯನ್ನು ಸಲ್ಲಿಸುವ ಅಗತ್ಯವಿಲ್ಲ.

On-line system for BBMP business license rene
ಬಿಬಿಎಂಪಿ ವ್ಯವಹಾರ ಪರವಾನಗಿ

By

Published : Oct 12, 2020, 10:49 PM IST

ಬೆಂಗಳೂರು : ಪಾಲಿಕೆ ವ್ಯಾಪ್ತಿಯ ವ್ಯಾಪಾರ ಪರವಾನಗಿಗಳ ಸ್ವಯಂ ನವೀಕರಣಕ್ಕಾಗಿ ಬಿಬಿಎಂಪಿ ಆನ್‌ಲೈನ್ ವ್ಯವಸ್ಥೆಯನ್ನು ಜಾರಿಗೆ ತಂದಿದೆ.

ನಿಗದಿತ ಶುಲ್ಕವನ್ನು ಬಿಬಿಎಂಪಿ ಪೋರ್ಟಲ್ ಮೂಲಕ ಪಾವತಿಸಿದ ನಂತರ ಆನ್‌ಲೈನ್‌ನಲ್ಲಿ ಈ ನವೀಕರಣವನ್ನು ಮಾಡಬಹುದು. ಅರ್ಜಿದಾರರು ಯಾವುದೇ ಪ್ರತ್ಯೇಕ ಅರ್ಜಿಯನ್ನು ಸಲ್ಲಿಸುವ ಅಗತ್ಯವಿಲ್ಲ.

ನಿಗದಿತ ಶುಲ್ಕ ಪಾವತಿಸಿ, ಅಂತರ್ಜಾಲ ತಾಣದಿಂದ ಡಿಜಿಟಲ್ ಸಹಿ ಹೊಂದಿದ ಅನುಮತಿ/ನವೀಕರಣ ಪ್ರತಿಗಳನ್ನು ಪಡೆಯಬಹುದು. ಈ ಪ್ರಕ್ರಿಯೆಯಲ್ಲಿ ನೇರ ಸಂಪರ್ಕ ಹೊಂದದೆ ಆನ್​ಲೈನ್​​ನಲ್ಲಿ ಅನುಮತಿ/ನವೀಕರಣ ಪ್ರತಿ ಡೌನ್‌ಲೋಡ್ ಮಾಡಿಕೊಳ್ಳಬಹುದು.‌

ABOUT THE AUTHOR

...view details