ಬೆಂಗಳೂರು: ರಾಜ್ಯದ ಹಣಕಾಸು ಪರಿಸ್ಥಿತಿಯನ್ನು ನೋಡಿಕೊಂಡು ನಂತರ ಪೆಟ್ರೋಲ್, ಡೀಸೆಲ್ ಮೇಲಿನ ಸುಂಕ ಇಳಿಕೆ ಕುರಿತು ನಿರ್ಧಾರ ಕೈಗೊಳ್ಳಲಾಗುತ್ತದೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಸ್ಪಷ್ಟಪಡಿಸಿದ್ದಾರೆ.
ಮೈಸೂರು ರಸ್ತೆಯಲ್ಲಿರುವ ರಾಮಾನುಜ ಮಠಕ್ಕೆ ಸಿಎಂ ಬಸವರಾಜ ಬೊಮ್ಮಾಯಿ ಭೇಟಿ ನೀಡಿದ್ದು, ನವ ಚಂಡಿಕಾ ಮಹಾ ಯಾಗದಲ್ಲಿ ಭಾಗಿಯಾಗಿದ್ರು. ನಂತರ ಮಾಧ್ಯಮದವರೊಂದಿಗೆ ಮಾತನಾಡಿದ ಸಿಎಂ, ಮಠದ ಅಧಿಕಾರಿಗಳು ಪ್ರತಿ ವರ್ಷ ಯಾಗಕ್ಕೆ ಕರೆಯುತ್ತಾರೆ. ನಾಡು ಸುಭೀಕ್ಷವಾಗಲಿ ಅಂತ ಯಜ್ಞ ಮಾಡಿದ್ದೇವೆ ಎಂದರು. ತಿರುಪತಿ ಪ್ರವಾಸಕ್ಕೆ ತೆರಳುವ ವಿಚಾರವಾಗಿ ಮಾತನಾಡಿದ ಅವರು, ಈ ಬಗ್ಗೆ ಇನ್ನೂ ತೀರ್ಮಾನವಾಗಿಲ್ಲ. ಸಂಜೆ ತೀರ್ಮಾನ ಮಾಡುತ್ತೇವೆ ಎಂದು ಹೇಳಿದ್ರು.
ತೈಲದ ಮೇಲಿನ ಸುಂಕ ಕಡಿಮೆ ಮಾಡುವ ನಿರ್ಧಾರ ಏಕಾಏಕಿ ತೆಗೆದುಕೊಳ್ಳಲು ಸಾಧ್ಯವಿಲ್ಲ, ಹಣಕಾಸು ಸ್ಥಿತಿಗತಿ, ಆದಾಯದ ಪ್ರಮಾಣ ಎಲ್ಲವನ್ನೂ ನೋಡಿಕೊಂಡು ನಿರ್ಧರಿಸಲಾಗುತ್ತದೆ ಎಂದರು.
ಕಲ್ಲಿದ್ದಲು ಕೊರತೆ ಬಗ್ಗೆ ಮಾತುಕತೆ
ಕಲ್ಲಿದ್ದಲು ಕೊರತೆ ಬಗ್ಗೆ ಕೇಂದ್ರದ ಜೊತೆ ಮಾತನಾಡಿದ್ದು, ರಾಜ್ಯಕ್ಕೆ ಕಲ್ಲಿದ್ದಲು ಪೂರೈಕೆ ಹೆಚ್ಚಿಸುವಂತೆ ಮನವಿ ಮಾಡಿದ್ದೇನೆ. ನಮಗೆ ಅಂತಲೇ ಮೈನ್ಸ್ ಅಲಾಟ್ ಆಗಿದೆ. ಒಡಿಶಾದ ಮಹಾನಂದಿ, ಚಂದ್ರಾಪುರ ಫಾರೆಸ್ಟ್ ಎರಡು ಕಡೆ ಅಲಾಟ್ ಆಗಿದೆ. ಚಂದ್ರಾಪುರದ ಅಧಿಕಾರಿಗಳು ಲೆಟರ್ ಬಂದ ಬಳಿಕ ಪೂರೈಕೆ ಮಾಡುವುದಾಗಿ ಹೇಳಿದ್ದಾರೆ. ಆ ಪ್ರಕ್ರಿಯೆ ಇನ್ನೊಂದು ವಾರದಲ್ಲಿ ಆಗಲಿದೆ. ಒಡಿಶಾದ ಮಹಾನಂದಿ ಬೇರೆಯವರಿಗಿದ್ದದ್ದು, ಈಗ ನಮಗೆ ಕೊಟ್ಟಿದ್ದಾರೆ. ಅದರ ಬಗ್ಗೆ ಈಗಾಗಲೇ ಪರಿಶೀಲಿಸಲಾಗಿದೆ. ಇವೆರಡು ಮೈನ್ಸ್ ನಮಗಾದ್ರೆ ಸ್ವಲ್ಪ ಕಾಸ್ಟ್ ಕಡಿಮೆಯಾಗಲಿದೆ ಎಂದು ಸಿಎಂ ಮಾಹಿತಿ ನೀಡಿದ್ರು.
ಕಾಂಗ್ರೆಸ್ನವರಿಗೆ ರಾಜಕೀಯ ಕಾಮಾಲೆ