ಕರ್ನಾಟಕ

karnataka

ETV Bharat / state

ರಾಜ್ಯಕ್ಕೆ ಕಾಲಿಟ್ಟಿದೆಯಾ ಒಮಿಕ್ರಾನ್ ಉಪತಳಿ?: ಇನ್ನೆರಡು ದಿನಗಳಲ್ಲಿ ಬರಲಿದೆ ನಿಖರ ವರದಿ ! - ಒಮಿಕ್ರಾನ್ ಉಪತಳಿ ಬಗ್ಗೆ ಇನ್ನೆರಡು ದಿನಗಳಲ್ಲಿ ನಿಖರ ವರದಿ

BA.2.12 ರೂಪಾಂತರಿ ವೈರಸ್ ಗೋಚರದ ಬಗ್ಗೆ ಇಂದು ಅಥವಾ ನಾಳೆ ವರದಿ ಬರುವ ನಿರೀಕ್ಷೆ ಇದೆ. INSACOG (Indian SARS-CoV-2 Consortium on Genomics) ಲ್ಯಾಬ್ ನಿಂದ ಕೇಂದ್ರಕ್ಕೆ ರವಾನೆ ಆಗಿದೆ. ರಾಜ್ಯದಲ್ಲಿ ನಡೆಸಿರುವ ಜೀನೋಮ್ ಸೀಕ್ವೆನ್ಸಿಂಗ್​​ನಲ್ಲಿ ಒಮಿಕ್ರಾನ್ ಉಪತಳಿ BA.2.12 ಪತ್ತೆ ಆಗಿದ್ಯಾ ಇಲ್ವಾ ಎಂಬುದರ ಮಾಹಿತಿ ಇನ್ನೆರಡು ದಿನದಲ್ಲಿ ಬಹಿರಂಗವಾಗಲಿದೆ.

ರಾಜ್ಯಕ್ಕೆ ಕಾಲಿಟ್ಟಿದೆಯಾ ಒಮಿಕ್ರಾನ್ ಉಪತಳಿ ದಾಳಿ ಇಟ್ಟಿರುವ ಶಂಕೆ
ರಾಜ್ಯಕ್ಕೆ ಕಾಲಿಟ್ಟಿದೆಯಾ ಒಮಿಕ್ರಾನ್ ಉಪತಳಿ ದಾಳಿ ಇಟ್ಟಿರುವ ಶಂಕೆ

By

Published : Apr 26, 2022, 10:53 AM IST

ಬೆಂಗಳೂರು: ರಾಜ್ಯಕ್ಕೆ ಒಮಿಕ್ರಾನ್ ಉಪತಳಿ ಕಂಟಕವಾಗಲಿದ್ಯಾ? ಇಂತಹದೊಂದು ಭೀತಿ ಸದ್ಯ ಹೆಚ್ಚಾಗಿದೆ. ಯಾಕೆಂದರೆ 50ರ ಒಳಗೆ ಇದ್ದ ಸೋಂಕಿತರ ಸಂಖ್ಯೆಯಲ್ಲಿ ಇದೀಗ ಬದಲಾವಣೆ ಆಗ್ತಿದ್ದು, ನಾಲ್ಕನೇ ಅಲೆ ಪ್ರವೇಶದ ಎಲ್ಲ ಲಕ್ಷಣಗಳು ಗೋಚರಿಸುತ್ತಿವೆ. ರಾಜ್ಯಕ್ಕೆ ರೂಪಾಂತರಿ ಒಮಿಕ್ರಾನ್ ಉಪತಳಿ ಕಾಲಿಟಿದ್ಯಾ? ಇಂತಹದೊಂದು ಪ್ರಶ್ನೆ ಸಹಜವಾಗಿಯೇ ಕಾಡ್ತಿದೆ. ಈಗಾಗಲೇ ದೆಹಲಿ ಸೇರಿದಂತೆ ಹಲವು ರಾಜ್ಯದಲ್ಲಿ ಪತ್ತೆಯಾಗಿದ್ದು, ಇದೀಗ ರಾಜ್ಯಕ್ಕೆ BA.2.12 ರೂಪಾಂತರಿ ದಾಳಿ ಇಟ್ಟಿದೆಯಾ ಇಲ್ವಾ ಎಂಬ ಆತಂಕದ ಪ್ರಶ್ನೆ ಮನೆ ಮಾಡಿದೆ.

ಇದನ್ನೂ ಓದಿ: ವಿಜಯಪುರದಲ್ಲಿ ಭಾರಿ ಮಳೆ: ಪ್ರತ್ಯೇಕ ಪ್ರಕರಣದಲ್ಲಿ ಬಾಲಕ ಸೇರಿ ಇಬ್ಬರು ಸಾವು!

BA.2.12 ರೂಪಾಂತರಿ ವೈರಸ್ ಗೋಚರದ ಬಗ್ಗೆ ಇಂದು ಅಥವಾ ನಾಳೆ ವರದಿ ಬರುವ ನಿರೀಕ್ಷೆ ಇದೆ. INSACOG (Indian SARS-CoV-2 Consortium on Genomics) ಲ್ಯಾಬ್ ನಿಂದ ಕೇಂದ್ರಕ್ಕೆ ರವಾನೆ ಆಗಿದೆ. ರಾಜ್ಯದಲ್ಲಿ ನಡೆಸಿರುವ ಜೀನೋಮ್ ಸೀಕ್ವೆನ್ಸಿಂಗ್​​ನಲ್ಲಿ ಒಮಿಕ್ರಾನ್ ಉಪತಳಿ BA.2.12 ಪತ್ತೆ ಆಗಿದ್ಯಾ ಇಲ್ವಾ ಎಂಬುದರ ಮಾಹಿತಿ ಇನ್ನೆರಡು ದಿನದಲ್ಲಿ ಬಹಿರಂಗವಾಗಲಿದೆ. ಈಗಾಗಲೇ ದೆಹಲಿ, ಮುಂಬೈನಲ್ಲಿ ಪತ್ತೆಯಾಗಿರುವ ಒಮಿಕ್ರಾನ್ ಉಪತಳಿಗಳು, ರಾಜ್ಯಕ್ಕೂ ರೂಪಾಂತರಿ ತಳಿಯ ಆತಂಕ ಶುರುವಾಗಿದೆ. ಒಮಿಕ್ರಾನ್​​ನ ಎರಡು ಉಪತಳಿಗಳಾದ BA.2.10 ಹಾಗೂ BA.2.12 ರೂಪಾಂತರಿಯಿಂದ ಸೋಂಕು ಹೆಚ್ಚುತ್ತಿದೆ ಎಂದು ತಿಳಿದು ಬಂದಿದೆ.

ABOUT THE AUTHOR

...view details