ಕರ್ನಾಟಕ

karnataka

ETV Bharat / state

ಕ್ರಿಸ್​ಮಸ್-ಹೊಸ ವರ್ಷಕ್ಕೆ ಮಾರ್ಗಸೂಚಿ ನಿಗದಿಪಡಿಸುವಲ್ಲಿ ಸರ್ಕಾರದ ವಿಳಂಬ: ಏನಂತಾರೆ ಆರೋಗ್ಯ ಸಚಿವರು? - ಒಮಿಕ್ರಾನ್​ ಮಾರ್ಗಸೂಚಿ

Omicron cases in Karnataka: ಡೆಲ್ಟಾ ಸೋಂಕಿಗೆ ಹೋಲಿಕೆ ಮಾಡಿದರೆ ಒಮಿಕ್ರಾನ್ ಸೋಂಕು ಬಹಳ ದೊಡ್ಡ ಮಟ್ಟದಲ್ಲಿ ವೇಗವಾಗಿ ಹರಡುತ್ತಿದೆ. ಈ ಮಧ್ಯೆ ರಾಜ್ಯದಲ್ಲಿ ಈಗಾಗಲೇ 8 ಒಮಿಕ್ರಾನ್ ಸೋಂಕು ದೃಢಪಟ್ಟಿದೆ. ಕ್ರಿಸ್ ಮಸ್ ಹಾಗೂ ಹೊಸ ವರ್ಷಾಚರಣೆ ಸಮೀಪಿಸುತ್ತಿದ್ದು, ಯಾವ ರೀತಿ ಚಟುವಟಿಕೆ ಇರಬೇಕು ಎಂಬುದನ್ನ ಸರ್ಕಾರದ ಮಟ್ಟದಲ್ಲಿ ಚರ್ಚಿಸಿ ನಿರ್ಣಾಯ ತೆಗೆದುಕೊಳ್ಳಲಾಗುವುದು ಎಂದು ಆರೋಗ್ಯ ಸಚಿವ ಸುಧಾಕರ್​ ಹೇಳಿದರು.

omicron-guidelines
ಒಮಿಕ್ರಾನ್​ ಮಾರ್ಗಸೂಚಿ

By

Published : Dec 18, 2021, 1:16 PM IST

ಬೆಂಗಳೂರು : ದಿನೇ ದಿನೇ ಹೈರಿಸ್ಕ್ದೇಶದಿಂದ ಬರುವವರ ಸಂಖ್ಯೆ ಹೆಚ್ಚಾಗ್ತಿದ್ದು, ಇಲ್ಲಿಂದ ಬರುವ ಪ್ರಯಾಣಿಕರು ಒಮಿಕ್ರಾನ್ ಸೋಂಕು ಹೊತ್ತು ತರುತ್ತಿದ್ದಾರೆ. ಈ ಮಧ್ಯೆ ರಾಜ್ಯದಲ್ಲಿ 8 ಒಮಿಕ್ರಾನ್ ಸೋಂಕು ಪ್ರಕರಣಗಳು ದೃಢಪಟ್ಟಿವೆ. ತಾಂತ್ರಿಕ ಸಲಹಾ ಸಮಿತಿಯು ಸರಣಿ ಸಭೆಗಳನ್ನ ಮಾಡಿ ಸರ್ಕಾರಕ್ಕೆ ಹಲವು ಶಿಫಾರಸುಗಳನ್ನ ಮಾಡುತ್ತಾ ಬರ್ತಿದ್ದಾರೆ‌. ಡಿಸೆಂಬರ್- ಜನವರಿಯ ಮೊದಲೆರಡು ವಾರಗಳು ನಿರ್ಣಾಯಕವಾಗಿದ್ದು, ಕೊರೊನಾ ನಿಯಂತ್ರಣಕ್ಕೆ ಕಟ್ಟುನಿಟ್ಟಿನ ಮಾರ್ಗಸೂಚಿ ಅಗತ್ಯ ಅಂತ ತಜ್ಞರು ಸೂಚಿಸಿದ್ದಾರೆ. ಸ್ವಲ್ಪ ಯಾಮಾರಿದರು ಮೂರನೇ ಅಲೆಗೆ ಒಮಿಕ್ರಾನ್ ಕಾರಣವಾಗಿ ಇರಲಿದೆ. ಹೀಗಾಗಿ ಸಾಧ್ಯವಾದಷ್ಟು ಒಮಿಕ್ರಾನ್ ನಿಯಂತ್ರಣಕ್ಕೆ ಕ್ರಮಗಳನ್ನ ಕೈಗೊಳ್ಳುವಂತೆ ಸೂಚಿಸಲಾಗಿದೆ.

Omicron guidelines in Karnataka : ಈ ಕುರಿತು ಪ್ರತಿಕ್ರಿಯಿಸಿರುವ ಸಚಿವ ಸುಧಾಕರ್, ಯುಕೆ ದೇಶದಲ್ಲಿ ಒಮಿಕ್ರಾನ್ ಸೋಂಕು ಹರಡುವುದನ್ನ ನೋಡಿದ್ದರೆ ನಿಜಕ್ಕೂ ಆತಂಕ ಮೂಡಿಸ್ತಿದೆ. ಡೆಲ್ಟಾ ಸೋಂಕಿಗೆ ಹೋಲಿಕೆ ಮಾಡಿದ್ರೆ ಒಮಿಕ್ರಾನ್ ಬಹಳ ದೊಡ್ಡ ಮಟ್ಟದಲ್ಲಿ ವೇಗವಾಗಿ ಹರಡಲಿದೆ. ಹೀಗಾಗಿ ಸರ್ಕಾರ ರಾಜ್ಯದಲ್ಲಿ ವಿಶೇಷ ಮುನ್ನೆಚ್ಚರಿಕೆ ಕ್ರಮತೆಗೆದುಕೊಳ್ಳಲಿದೆ. ಈಗಾಗಲೇ ಆರೋಗ್ಯ ಇಲಾಖೆಯ ಅಧಿಕಾರಿಗಳು, ತಜ್ಞರೊಂದಿಗೆ ಸಮಾಲೋಚನೆಯಲ್ಲಿ ನಿರತರಾಗಿದ್ದೇವೆ. ಜನರ ನಿಯಂತ್ರಣ ಕ್ರಮಕ್ಕೆ ನಾಗರಿಕರೇ ಸಹಾಯ ಮಾಡಬೇಕೆಂದು ತಿಳಿಸಿದರು.

ಒಮಿಕ್ರಾನ್ ಕಡಿವಾಣಕ್ಕೆ ನಮ್ಮ ಚಲನವಲನದ ಬಗ್ಗೆ ಜಾಗರೂಕತೆ ವಹಿಸಬೇಕು. ಕ್ರಿಸ್​ಮಸ್ ಹಾಗೂ ಹೊಸ ವರ್ಷಾಚರಣೆ ಸಮೀಪಿಸುತ್ತಿದ್ದು, ಯಾವ ರೀತಿ ಚಟುವಟಿಕೆ ಇರಬೇಕು ಎಂಬುದನ್ನ ಸರ್ಕಾರದ ಮಟ್ಟದಲ್ಲಿ ಚರ್ಚಿಸಿ ನಿರ್ಣಾಯ ತೆಗೆದುಕೊಳ್ಳಲಾಗುವುದು ಎಂದು ಹೇಳಿದರು.

ಒಮಿಕ್ರಾನ್ ಸೋಂಕು ಹರಡದಂತೆ ಸರ್ಕಾರ ಕಟ್ಟುನಿಟ್ಟಿನ ಕ್ರಮಕೈಗೊಳ್ಳಬೇಕು ಅಂತ ಸಿಎಂ ಬಸವರಾಜ ಬೊಮ್ಮಾಯಿಯವರು ಕೂಡ ಸೂಚನೆ ನೀಡಿದ್ದಾರೆ. ಹೀಗಾಗಿ, ತಜ್ಞರೊಂದಿಗೆ ನಿರಂತರ ಸಂಪರ್ಕದಲ್ಲಿದ್ದು, ಸೋಂಕು ಹರಡದಂತೆ ಯಾವ ರೀತಿ ಬಿಗಿಯಾದ ಕ್ರಮ ಕೈಗೊಳ್ಳಬೇಕು ಅಂತ ಇನ್ನೆರಡು ದಿನದಲ್ಲಿ ವಿಚಾರ ಮಾಡ್ತಿವಿ ಅಂದರು.

ಅಂತಾರಾಷ್ಟ್ರೀಯ ಪ್ರಯಾಣಿಕರ ಸಾಂಸ್ಥಿಕ ಕ್ವಾರೈಂಟನ್ ಇಲ್ಲ :ಏರ್ ಪೋರ್ಟ್ ನಲ್ಲಿ ಬರುವ ಪ್ರಯಾಣಿಕರಲ್ಲಿ ಮೊದಲು ಕೋವಿಡ್ ರಿಪೋರ್ಟ್ ನೆಗಟಿವ್ ಬಂದು, ನಂತರ 5-6 ದಿನಗಳಲ್ಲಿ ಪಾಸಿಟಿವ್ ಬರ್ತಿದೆ. ಈ ಹಿನ್ನೆಲೆಯಲ್ಲಿ ಸರ್ಕಾರದಿಂದಲೇ ಸಾಂಸ್ಥಿಕ ಕ್ವಾರೈಂಟನ್ ರೂಲ್ಸ್ ಜಾರಿಯಾಗುತ್ತಾ? ಎಂಬುದಕ್ಕೆ ಉತ್ತರಿಸಿದ ಸಚಿವರು, ಹೈರಿಸ್ಕ್ ಸೇರಿದಂತೆ ಬೇರೆ ಯಾವುದೇ ದೇಶದಿಂದ ಬರುವ ಅಂತಾರಾಷ್ಟ್ರೀಯ ಪ್ರಯಾಣಿಕರಿಗೆ ಸಾಂಸ್ಥಿಕ ಕ್ವಾರೈಂಟನ್ ಇಲ್ಲ. ಆ ರೀತಿಯ ಅಲೋಚನೆ ಸದ್ಯಕ್ಕೆ ಇಲ್ಲ ಅಂತ ಸಚಿವ ಸುಧಾಕರ್ ತಿಳಿಸಿದ್ದಾರೆ. ಮನೆಯಲ್ಲೇ ಕ್ವಾರಂಟೈನ್ ಮಾಡುವ ಕ್ರಮ ಕೈಗೊಂಡಿದ್ದು, ಆರೋಗ್ಯಾಧಿಕಾರಿಗಳು ಅವ್ರ ಮೇಲೆ ನಿಗಾ ವಹಿಸಲಿದ್ದಾರೆ. ಜೊತೆಗೆ ಪ್ರಾಥಮಿಕ- ದ್ವಿತೀಯ ಸಂಪರ್ಕಿತರ ಟ್ರಾಕ್ ಕೂಡ ಮಾಡಲಾಗುವುದು ಅಂದರು.

ಯೂನಿವರ್ಸಲ್ ಪಾಸ್ ಪ್ಲಾನ್ :ರಾಜ್ಯದಲ್ಲಿ ಒಮಿಕ್ರಾನ್ ವೈರಸ್ ನ ಆತಂಕ ಹಿನ್ನೆಲೆ ಯೂನಿವರ್ಸಲ್ ಪಾಸ್ ಪ್ಲಾನ್ ಜಾರಿಗೊಳಿಸುವಂತೆ ಸರ್ಕಾರಕ್ಕೆ ಸಲಹೆ ಬಂದಿದೆ. ಎರಡು ಡೋಸ್ ವ್ಯಾಕ್ಸಿನ್ ಪಡೆದವರಿಗೆ ಈ ಪಾಸ್ ಸಿಗಲಿದ್ದು, ಪಾಸ್ ಇದ್ದರಷ್ಟೇ ಪ್ರವೇಶಕ್ಕೆ ಅನುಮತಿ ನೀಡಲಾಗುತ್ತೆ‌. ಮುಂದೆ ಸಾರ್ವಜನಿಕ ಸ್ಥಳಗಳಲ್ಲಿ ಪಾಸ್ ಕಡ್ಡಾಯ ಗೊಳಿಸುವ ಪ್ಲಾನ್ ಜಾರಿಯಾಗಲಿದೆ. ದೇವಸ್ಥಾನ, ಹೈಪರ್ ಮಾರ್ಕೆಟ್, ಬಸ್, ಟ್ರೈನ್ ಹತ್ತೋಕು ಪಾಸ್ ಕಡ್ಡಾಯಕ್ಕೆ ಸಲಹೆ ಬಂದಿದ್ದು, ಈಗಾಗಲೇ ಮಹಾರಾಷ್ಟ್ರದಲ್ಲಿ ಯೂನಿವರ್ಸಲ್ ಪಾಸ್ ವ್ಯವಸ್ಥೆ ಜಾರಿಗೊಳಿಸಲಾಗಿದೆ. ಹೀಗಾಗಿ ತಜ್ಞರೊಂದಿಗೆ ಸಭೆಯಲ್ಲಿ ಚರ್ಚಿಸಿ ಯೂನಿವರ್ಸಲ್ ಪಾಸ್ ಬಗ್ಗೆ ಚರ್ಚೆ ಮಾಡುವುದಾಗಿ ತಿಳಿಸಿದ್ದಾರೆ.

ಡಿಸೆಂಬರ್ 22ರಿಂದ ಜನವರಿ 2ರ ತನಕ ಕಠಿಣ ಮಾರ್ಗಸೂಚಿ ಜಾರಿ :ಹೊಸ ವರ್ಷಾಚರಣೆಗೆ ಬ್ರೇಕ್ ಹಾಕಲು ತಾಂತ್ರಿಕ ಸಲಹಾ ಸಮಿತಿ ಸಲಹೆ ನೀಡಿದೆ. ರಾಜ್ಯ ಸರ್ಕಾರಕ್ಕೆ ತಾಂತ್ರಿಕ ಸಲಹಾ ಸಮಿತಿ ಡಿಸೆಂಬರ್ 22 ರಿಂದ ಜನವರಿ 2 ರವರೆಗೆ ಕಠಿಣ ಮಾರ್ಗಸೂಚಿ ಬಿಡುಗಡೆ ಮಾಡಲು ತಿಳಿಸಿದ್ದಾರೆ. ಹೊಸ ವರ್ಷದ ಆಚರಣೆ ಹಾಗೂ ಕ್ರಿಸ್ ಮಸ್ ಗೆ ಮಾರ್ಗಸೂಚಿ ಅಗತ್ಯವಿದ್ದು, ಪ್ರಾರ್ಥನಾ ಮಂದಿರಗಳಿಗೂ ಕೋವಿಡ್ ಪಾಲನೆ ಕಡ್ಡಾಯ ಮಾಡಲು ಸೂಚನೆ ನೀಡಲಾಗಿದೆ.

ತಜ್ಞರ ಶಿಫಾರಸುಗಳೇನು..?

  1. ದೇವಸ್ಥಾನಕ್ಕೆ ಆಗಮಿಸುವವರಿಗೆ ಎರಡು ಡೋಸ್ ವ್ಯಾಕ್ಸಿನ್ ಕಡ್ಡಾಯ
  2. ಪಬ್ ಕ್ಲಬ್​ಗಳಲ್ಲಿ ಕೇವಲ 50 ಮಂದಿಗೆ ಮಾತ್ರ ಅವಕಾಶ ಕಲ್ಪಿಸುವುದು
  3. ಪಬ್​ಗೆ ಬರುವ ಗ್ರಾಹಕರು ಕೂಡ ಎರಡು ಡೋಸ್ ವ್ಯಾಕ್ಸಿನ್ ಪಡೆದಿರಬೇಕು
  4. ಹೊರಾಂಗಣ ಪ್ರದೇಶದಲ್ಲಿ 3.5 ಚದರ ಮೀಟರ್​ನಲ್ಲಿ 200-300 ಜನರಿಗೆ ಸೀಮಿತ
  5. ದೇಗುಲ, ಚರ್ಚ್, ಮಸೀದಿಗಳಲ್ಲಿ ಅಂತರ ಕಾಪಾಡಿಕೊಳ್ಳಲು ಮಾರ್ಷಲ್​ಗಳ ನಿಯೋಜನೆ

ABOUT THE AUTHOR

...view details