ಕರ್ನಾಟಕ

karnataka

ETV Bharat / state

ಬೆಂಗಳೂರಿನ ಮತ್ತೆ ನಾಲ್ವರಲ್ಲಿ ಒಮಿಕ್ರಾನ್ ದೃಢ: ಕೋರಮಂಗಲ ಅಪಾರ್ಟ್​ಮೆಂಟ್ ಸೀಲ್​ಡೌನ್ - ಬೆಂಗಳೂರಿನ ನಾಲ್ವರಲ್ಲಿ ಒಮಿಕ್ರಾನ್ ದೃಢ

ಬೆಂಗಳೂರಿನ ನಾಲ್ವರಲ್ಲಿ ಒಮಿಕ್ರಾನ್ ದೃಢಪಟ್ಟಿದ್ದು, ಒಟ್ಟಾರೆ ಒಮಿಕ್ರಾನ್ ಸಂಖ್ಯೆ 23 ಕ್ಕೆ ಏರಿಕೆಯಾಗಿದೆ. ಪರಿಣಾಮ ಕೋರಮಂಗಲದ ಮೂರನೇ ಬ್ಲಾಕ್​​ನಲ್ಲಿರುವ ರಹೇಜ ಅಪಾರ್ಟ್ ಮೆಂಟ್ ಸೀಲ್​ಡೌನ್​ ಮಾಡಲಾಗಿದೆ.

Omicron found in four people in Bengaluru
ಕೋರಮಂಗಲ ಅಪಾರ್ಟ್​ಮೆಂಟ್ ಸೀಲ್​ಡೌನ್

By

Published : Dec 23, 2021, 3:19 PM IST

ಬೆಂಗಳೂರು: ವಿದೇಶಿ ಪ್ರಯಾಣದಿಂದ ಡಿಸೆಂಬರ್ 12 ರಂದು ಬೆಂಗಳೂರಿಗೆ ಮರಳಿದ್ದ ಮಹಿಳೆ ಹಾಗೂ ಅವರ ಕುಟುಂಬದ ಮೂವರಲ್ಲಿ ಕೋವಿಡ್ ಸೋಂಕು ದೃಢಪಟ್ಟಿದ್ದು, ಆಸ್ಪತ್ರೆಗೆ ದಾಖಲಿಸಲಾಗಿತ್ತು. ನಂತರ ಜೀನೋಮ್ ಸೀಕ್ವೆನ್ಸಿಂಗ್ ನಡೆಸಿದಾಗ ಅವರಲ್ಲಿ ಒಮಿಕ್ರಾನ್ ರೂಪಾಂತರಿ ತಳಿ ಇರುವುದು ದೃಢಪಟ್ಟಿದೆ.

ಎಲ್ಲರಿಗೂ ಮಣಿಪಾಲ್ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ ಎಂದು ಬಿಬಿಎಂಪಿ ಆರೋಗ್ಯ ವಿಶೇಷ ಆಯುಕ್ತರಾದ ತ್ರಿಲೋಕ್ ಚಂದ್ರ ತಿಳಿಸಿದ್ದಾರೆ. ಸೋಂಕಿತರು ಕೋರಮಂಗಲದ ಮೂರನೇ ಬ್ಲಾಕ್​​ನಲ್ಲಿರುವ ರಹೇಜ ಅಪಾರ್ಟ್ ಮೆಂಟ್ ನ ನಿವಾಸಿಗಳಾಗಿದ್ದಾರೆ.

ಇದನ್ನೂ ಓದಿ: ಮತಾಂತರ ನಿಷೇಧ ವಿಧೇಯಕ ಮೇಲಿನ ಚರ್ಚೆ: ಸಚಿವ ಮಾಧುಸ್ವಾಮಿ - ಸಿದ್ದರಾಮಯ್ಯ ಮಧ್ಯೆ ಸವಾಲು, ಪ್ರತಿ ಸವಾಲು

ಅಪಾರ್ಟ್​​​ಮೆಂಟ್ ನ ಕ್ಲಸ್ಟರ್ ಮಾಡಿ, ಅಗತ್ಯ ಮುನ್ನೆಚ್ಚರಿಕೆ ಕ್ರಮ ಕೈಗೊಳ್ಳಲಾಗಿದ್ದು, ಸ್ಥಳೀಯ ಫ್ಲಾಟ್ ನಿವಾಸಿಗಳಿಗೂ ಬಿಬಿಎಂಪಿ ಕೋವಿಡ್ ಟೆಸ್ಟ್ ನಡೆಸುತ್ತಿದೆ, ಬಹುತೇಕ ಸೆಕೆಂಡರಿ ಕಾಂಟ್ಯಾಕ್ಟ್ ನವರ ಕೋವಿಡ್ ಪರೀಕ್ಷೆ ನೆಗೆಟಿವ್ ಬಂದಿದೆ. ಈ ಮೂಲಕ ಒಟ್ಟಾರೆ ರಾಜ್ಯದಲ್ಲಿ ಒಮಿಕ್ರಾನ್ ಕೋವಿಡ್ ತಳಿ ಪ್ರಕರಣ 19 ರಿಂದ 23 ಕ್ಕೆ ಏರಿಕೆಯಾದಂತಾಗಿದೆ.

ಕೋರಮಂಗಲ ನಿವಾಸಿ ಮಹಿಳೆ ಯುನೈಟೆಡ್ ಕಿಂಗ್ಡಮ್​ನಿಂದ ವಾಪಸ್​ ಆಗಿದ್ದರು. ಪ್ರಯಾಣದ ವೇಳೆ ಆರ್ ಟಿಪಿಸಿಆರ್ ನೆಗೆಟಿವ್ ವರದಿ ಬಂದಿದ್ದರೂ ನಂತರ ರೋಗ ಲಕ್ಷಣ ಕಂಡುಬಂದಾಗ ಪರೀಕ್ಷೆ ನಡೆಸಿದಾಗ ಕೋವಿಡ್ ಪಾಸಿಟಿವ್ ದೃಢಪಟ್ಟ ಹಿನ್ನೆಲೆ, ಆಸ್ಪತ್ರೆಗೆ ದಾಖಲಿಸಲಾಗಿತ್ತು. ಜೀನೊಮ್ ಸ್ವೀಕ್ವೆನ್ಸಿಂಗ್ ಕೂಡಾ ನಡೆಸಲಾಗಿತ್ತು. ಇದೀಗ ಒಮಿಕ್ರಾನ್ ತಳಿ ದೃಢಪಟ್ಟಿದೆ. ಜೊತೆಗೆ ಮಹಿಳೆಯ ತಂದೆ, ತಾಯಿ ಹಾಗೂ ಸಹೋದರಿಗೂ ದೃಢಪಟ್ಟಿದೆ. ನಾಲ್ವರೂ ಕೋವಿಡ್ ಲಸಿಕೆಯ ಎರಡೂ ಡೋಸ್ ಗಳನ್ನು ಪಡೆದಿದ್ದರು.

ABOUT THE AUTHOR

...view details