ಬೆಂಗಳೂರು: ರಾಜ್ಯದಲ್ಲಿ ಕೋವಿಡ್ 3ನೇ ಅಲೆ ಹೆಚ್ಚಾಗುತ್ತಿರುವ ಹೊತ್ತಲ್ಲೇ ಮತ್ತೆ ಒಮಿಕ್ರಾನ್ ಸದ್ದು ಮಾಡಿದೆ. ಕೋವಿಡ್-19 ನ ರೂಪಾಂತರಿ ವೈರಸ್ ಹೊಸದಾಗಿ 146 ಜನರಲ್ಲಿ ಕಾಣಿಸಿಕೊಂಡಿದೆ. ಈ ಮೂಲಕ ಒಮಿಕ್ರಾನ್ ಸೋಂಕಿತರ ಸಂಖ್ಯೆ 479ಕ್ಕೇರಿದೆ.
ರಾಜ್ಯದಲ್ಲಿಂದು 11 ಸಾವಿರಕ್ಕೂ ಹೆಚ್ಚು ಮಂದಿಗೆ ಕೋವಿಡ್; 146 ಒಮಿಕ್ರಾನ್ ಸೋಂಕಿತರು ಪತ್ತೆ - ಓಮಿಕ್ರಾನ್ ಸಂಖ್ಯೆಯಲ್ಲಿ ಹೆಚ್ಚಳ
ವಿದೇಶ ಪ್ರಯಾಣ ಇತಿಹಾಸ ಹೊಂದಿರುವ ಅಂತಾರಾಷ್ಟ್ರೀಯ ಪ್ರಯಾಣಿಕರಲ್ಲೇ ಒಮಿಕ್ರಾನ್ ಸೋಂಕು ಹೆಚ್ಚು ಕಾಣಿಸಿಕೊಳ್ತಿದೆ.
ಒಮಿಕ್ರಾನ್
ರಾಜ್ಯದಲ್ಲಿಂದು ಒಟ್ಟು 1,50,479 ಜನರಿಗೆ ಕೊರೊನಾ ಪರೀಕ್ಷೆ ನಡೆಸಲಾಗಿದೆ. ಹೊಸದಾಗಿ 11,698 ಕೋವಿಡ್ ಕೇಸ್ಗಳು ಕಂಡುಬಂದಿವೆ. 60,48 ಸಕ್ರಿಯ ಸೋಂಕು ಪ್ರಕರಣಗಳಿವೆ. ಬೆಂಗಳೂರಿನಲ್ಲೇ 9,221 ಪ್ರಕರಣಗಳು ದಾಖಲಾಗಿವೆ. ಸೋಂಕಿನಿಂದ 1,148 ಜನ ಗುಣಮುಖರಾಗಿದ್ದಾರೆ. ಒಟ್ಟು ಪಾಸಿಟಿವಿಟಿ ದರ ಶೇ. 7.7ರಷ್ಟಿದೆ ಎಂದು ಆರೋಗ್ಯ ಸಚಿವ ಡಾ. ಸುಧಾಕರ್ ಟ್ವೀಟ್ ಮಾಡಿದ್ದಾರೆ.
ಇದನ್ನೂ ಓದಿ:ಹರ ಜಾತ್ರೆ ಬೇಡ ಎಂದ ಉಪ ರಾಷ್ಟ್ರಪತಿ; ಸಮಾರಂಭ ಮುಂದೂಡಿದ ವಚನಾನಂದ ಶ್ರೀ
Last Updated : Jan 10, 2022, 6:35 PM IST