ಕರ್ನಾಟಕ

karnataka

ETV Bharat / state

ಇಳಿ ವಯಸ್ಸಲ್ಲೂ ಕುಂದದ ಉತ್ಸಾಹ: ಶತಾಯುಷಿ ಅಜ್ಜಿಯಿಂದ ಮತದಾನ - ಕರ್ನಾಟಕ ಕುರುಕ್ಷೇತ್ರ 2023

ರಾಜ್ಯದಲ್ಲಿ ಯುವ ಜನತೆಗಿಂತ ಹೆಚ್ಚಾಗಿ ವೃದ್ಧರೇ ಈ ಬಾರಿ ಮತ ಚಲಾಯಿಸಿ ಕರ್ತವ್ಯ ಪ್ರಜ್ಞೆ ಮೆರೆದಿದ್ದಾರೆ.

vote
ವಿಧಾನಸಭಾ ಚುನಾವಣೆ 2023

By

Published : May 10, 2023, 3:50 PM IST

Updated : May 10, 2023, 4:41 PM IST

ಇಳಿ ವಯಸ್ಸಲ್ಲೂ ಕುಂದದ ಉತ್ಸಾಹ: ಶತಾಯುಷಿ ಅಜ್ಜಿಯಿಂದ ಮತದಾನ

ಬೆಂಗಳೂರು: ರಾಜ್ಯದಲ್ಲಿ ಮತದಾನ ಪ್ರಕ್ರಿಯೆ ಭರದಿಂದ ಸಾಗುತ್ತಿದೆ. ಯುವಕ - ಯುವತಿಯರಿಂದ ಹಿಡಿದು ವೃದ್ಧರವರೆಗೆ ಎಲ್ಲರೂ ಮತ ಚಲಾಯಿಸುತ್ತಿದ್ದಾರೆ. ಯುವ ಜನತೆಗಿಂತ ಹೆಚ್ಚಾಗಿ ವೃದ್ಧರೇ ಈ ಬಾರಿ ಮತ ಚಲಾಯಿಸಿ ಕರ್ತವ್ಯ ಪ್ರಜ್ಞೆ ಮೆರೆದಿದ್ದಾರೆ. ನಡೆಯಲು ಕೂಡದೇ ಇದ್ದರೂ ವೀಲ್​ಚೇರ್​ನಲ್ಲಿ ಬಂದು ಮತ ಚಲಾಯಿಸಿದ್ದಾರೆ. ಇದು ಈ ಬಾರಿಯ ವಿಧಾನಸಭೆ ಚುನಾವಣೆಯಲ್ಲಿ ವಿಶೇಷವಾಗಿ ಗಮನ ಸೆಳೆದಿದೆ.

ಶತಾಯುಷಿ ಅಜ್ಜಿ ಮತದಾನ: ಚಿಕ್ಕಮಗಳೂರು ಜಿಲ್ಲೆಯಲ್ಲಿ ಶತಾಯುಷಿ ಅಜ್ಜಿ ಮತದಾನ ಮಾಡಿದ್ದಾರೆ. ಮೂಗ್ತಿಹಳ್ಳಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಮತಗಟ್ಟೆ ಸಂಖ್ಯೆ 244 ರಲ್ಲಿ ವೋಟ್​ ಒತ್ತಿದ್ದಾರೆ. ಈ ಇಳಿ ವಯಸ್ಸಿನ್ನಲ್ಲೂ ಮತದಾನ ಮಾಡಿ ಇತರರಿಗೆ ಮಾದರಿಯಾಗಿದ್ದಾರೆ.

93 ವರ್ಷದ ವೃದ್ಧೆಯಿಂದ ವೋಟಿಂಗ್:​ ಕೋಲಾರ ಜಿಲ್ಲೆಯಲ್ಲಿ 93 ವರ್ಷದ ವೃದ್ಧೆ ಮತ ಚಲಾಯಿಸಿದ್ದಾರೆ. ಕೋಲಾರ ನಗರದ ಸರ್ಕಾರಿ ಪದವಿ ಪೂರ್ವ ಕಾಲೇಜಿನ ಮತಗಟ್ಟೆ ಸಂಖ್ಯೆ 135 ರಲ್ಲಿ ವೋಟಿಂಗ್​ ಮಾಡಿದ್ದಾರೆ.

ವೃದ್ಧ ಮತದಾರನಿಗೆ ಡಿಸಿ ಸಹಾಯ ಹಸ್ತ:ಮತದಾನಕ್ಕೆ ಆಗಮಿಸುತ್ತಿದ್ದ ವೃದ್ಧರೊಬ್ಬರಿಗೆ ಬೆಳಗಾವಿ ಡಿಸಿ ಡಾ. ನಿತೇಶ ಪಾಟೀಲ ನೆರವಾಗಿದ್ದಾರೆ. ಚುನಾವಣೆ ಅಧಿಕಾರಿಯೂ ಆಗಿರುವ ಅವರು ಮತದಾನ ಪ್ರಕ್ರಿಯೆ ಪರಿಶೀಲನೆಗೆ ಆಗಮಿಸುತ್ತಿದ್ದ ವೇಳೆ ವೃದ್ಧರೊಬ್ಬರನ್ನು ಮತಗಟ್ಟೆಗೆ ಕರೆ ತಂದು ಸಹಾಯ ಮಾಡಿದ್ದಾರೆ. ಬೆಳಗಾವಿಯ ವಿಶ್ವೇಶ್ವರಯ್ಯ ನಗರದಲ್ಲಿರುವ ಮತಗಟ್ಟೆಯಲ್ಲಿ ಈ ಘಟನೆ ನಡೆದಿದೆ.

ವೀಲ್​ಚೇರ್​ನಲ್ಲಿ ಬಂದು ಮತ ಚಲಾವಣೆ: 89 ವರ್ಷದ ವೃದ್ಧೆ ವೀಲ್​ಚೇರ್​ನಲ್ಲಿ ಬಂದು ಮತ ಚಲಾಯಿಸಿದ್ದಾರೆ. ಚಾಮರಾಜಪೇಟೆ ಮತಗಟ್ಟೆಗೆ ವೀಲ್​ಚೇರ್​ನಲ್ಲಿ ಬಂದ ರೇಸಿ ಎಂಬವರು ವೋಟ್​ ಹಾಕಿದ್ದಾರೆ.

'ಮತದಾನ ಮಾಡಲು ಇಷ್ಟ':ಬೆಂಗಳೂರಿನ ಎಂಇಎಸ್ ಮಹಾವಿದ್ಯಾಲಯ ಕಾಲೇಜ್​ನಲ್ಲಿ ಮತದಾರರು ಸರತಿ ಸಾಲಿನಲ್ಲಿ ನಿಂತು ಮತ ಹಾಕುತ್ತಿದ್ದಾರೆ. 94 ವರ್ಷದ ಪಾರ್ವತಮ್ಮ ವೀಲ್​ಚೇರ್​ನಲ್ಲಿ ಬಂದು ವೋಟ್​ ಒತ್ತಿದ್ದಾರೆ. ಬಳಿಕ ಮಾಧ್ಯಮದೊಂದಿಗೆ ಮಾತನಾಡಿದ ಅವರು, "ನನಗೆ ಮನೆಯಿಂದ ಮತ ಚಲಾಯಿಸಲು ಅವಕಾಶ ಇದ್ದರೂ ರಿಜಿಸ್ಟರ್​ ಮಾಡಿಕೊಳ್ಳಬೇಕೆಂದು ಗೊತ್ತಿರಲಿಲ್ಲ. ಮತದಾನ ಮಾಡಲು ಇಷ್ಟ, ಹೀಗಾಗಿಯೇ ಆಗಮಿಸಿದ್ದೇನೆ. ವೋಟ್​ ಮಾಡಲು ಹೆಚ್ಚಿನ ಸಂಖ್ಯೆಯಲ್ಲಿ ಹಿರಿಯರೇ ಬರ್ತಿರೋದು ಕೇಳ್ಪಟ್ಟೆ. ಬಹುಶಃ ಹಿರಿಯರಿಗೆ ಸಮಾಜದ ಬಗ್ಗೆ ಹೆಚ್ಚಿನ ಕಾಳಜಿ ಇದೇ ಅನ್ಸುತ್ತೆ." ಎಂದರು.

ಸ್ಟ್ರೆಕ್ಚರ್​ನಲ್ಲಿ ಬಂದು ಮತ ಚಲಾಯಿಸಿದ ವೃದ್ಧೆ: ದಾವಣಗೆರೆ ನಗರದ ಎಂಸಿಸಿ ಎ ಬ್ಲಾಕ್​ನ ನಿವಾಸಿ 75 ವರ್ಷದ ಶಿಶಿಕಲಾ ಎಂಬವರು ಸ್ಟ್ರೆಕ್ಚರ್​ನಲ್ಲಿ ಬಂದು ಮತದಾನ ಮಾಡಿದ್ದಾರೆ. ಬಕ್ಕೆಶ್ವರ ಶಾಲೆಯ ಮತಗಟ್ಟೆ 74 ರಲ್ಲಿ ಮತ ಚಲಾಯಿಸಿದ್ದಾರೆ.

ಮೊಮ್ಮಗನೊಂದಿಗೆ ಬಂದು ವೋಟ್​ ಹಾಕಿದ ಅಜ್ಜಿ: 94ನೇ ವಯಸ್ಸಿನಲ್ಲಿಯೂ ಮೊಮ್ಮಗನೊಂದಿಗೆ ಮತದಾನ ಕೇಂದ್ರಕ್ಕೆ ಬಂದು ನಯನಮ್ಮ ಎಂಬವರು ವೋಟ್​ ಹಾಕಿದ್ದಾರೆ. ಮಹದೇವಪುರದ ಚೆಲ್ಲಘಟ್ಟದಲ್ಲಿರುವ ಮತಗಟ್ಟೆಯಲ್ಲಿ ಮತ ಚಲಾಯಿಸಿದ್ದಾರೆ. ಬಳಿಕ ಪ್ರತಿಯೊಬ್ಬರೂ ವೋಟ್​ ಮಾಡಬೇಕೆಂದು ಜನತೆಯಲ್ಲಿ ಮನವಿ ಮಾಡಿದ್ದಾರೆ.

ವಯೋವೃದ್ಧರ ಮತದಾನದ ಉತ್ಸಾಹ:ಚಿಕ್ಕಮಗಳೂರು ಜಿಲ್ಲೆಯಲ್ಲಿ ವಯೋ ವದ್ಧರೇ ಹೆಚ್ಚು ಮತ ಚಲಾಯಿಸಿದ್ದಾರೆ. ಚಿಕ್ಕಮಗಳೂರು, ಶೃಂಗೇರಿ, ತರೀಕೆರೆ, ಕಡೂರು, ಮೂಡಿಗೆರೆ ವಿಧಾನಸಭಾ ಕ್ಷೇತ್ರದಲ್ಲಿ ವಯೋ ವೃದ್ಧರಲ್ಲಿ ಮತದಾನದ ಉತ್ಸಾಹ ಹೆಚ್ಚಿದೆ. ಈ ಇಳಿ ವಯಸ್ಸಿನಲ್ಲೂ ಮತದಾನ ಮಾಡಿ ಯುವಕ- ಯುವತಿಯರಿಗೆ ಮಾದರಿಯಾಗಿದ್ದಾರೆ.

ಇದನ್ನೂ ಓದಿ:ರಾಜ್ಯದಲ್ಲಿ ಬಿಜೆಪಿ 140 ಸ್ಥಾನಗಳನ್ನು ಗೆಲ್ಲುತ್ತದೆ: ಕೆ ಎಸ್ ಈಶ್ವರಪ್ಪ ವಿಶ್ವಾಸ

Last Updated : May 10, 2023, 4:41 PM IST

ABOUT THE AUTHOR

...view details