ಬೆಂಗಳೂರು: ಬಡವರಿಗಾಗಿಯೇ ಆರಂಭಗೊಂಡ ಇಂದಿರಾ ಕ್ಯಾಂಟೀನ್ ನಲ್ಲಿ ಸಂಪೂರ್ಣವಾಗಿ ಉಚಿತವಾಗಿ ಇಂದಿನಿಂದ ತಿಂಡಿ, ಊಟ ನೀಡಲಾಗ್ತಿದೆ. ಕೈ ತೊಳೆಯಲು ನೀರು, ಹೊಟ್ಟೆ ತುಂಬಾ ಉಪಹಾರ ಸೇವಿಸಿ ಕೂಲಿ ಕಾರ್ಮಿಕರು, ಸೆಕ್ಯುರಿಟಿ ಗಾರ್ಡ್ಗಳು ಹಸಿವು ನೀಗಿಸಿಕೊಳ್ಳುತ್ತಿದ್ದಾರೆ.
ಇಂದಿರಾ ಕ್ಯಾಂಟೀನ್ ಉಚಿತ ಆಹಾರಕ್ಕೆ ಭಾವುಕರಾದ ಹಿರಿಜೀವ... ಸರ್ಕಾರದ ಕ್ರಮಕ್ಕೆ ಮೆಚ್ಚುಗೆ - ಬಡವರಿಗಾಗಿಯೇ ಆರಂಭಗೊಂಡ ಇಂದಿರಾಕ್ಯಾಂಟೀನ್
ಬಡವರಿಗಾಗಿಯೇ ಆರಂಭಗೊಂಡ ಇಂದಿರಾ ಕ್ಯಾಂಟೀನ್ ನಲ್ಲಿ ಸಂಪೂರ್ಣವಾಗಿ ಉಚಿತವಾಗಿ ಇಂದಿನಿಂದ ತಿಂಡಿ, ಊಟ ನೀಡಲಾಗ್ತಿದೆ. ಕೈ ತೊಳೆಯಲು ನೀರು, ಹೊಟ್ಟೆ ತುಂಬಾ ಉಪಹಾರ ತಿಂದು ಕೂಲಿ ಕಾರ್ಮಿಕರು, ಸೆಕ್ಯುರಿಟಿ ಗಾರ್ಡ್ಗಳು ಹಸಿವು ನೀಗಿಸಿಕೊಳ್ಳುತ್ತಿದ್ದಾರೆ. ಹಿರಿ ವಯಸ್ಸಿನ ಕಾವಲು ಕೆಲಸಗಾರರೊಬ್ಬರು ಉಚಿತವಾಗಿ ಆಹಾರ ನೀಡಿದ್ದಕ್ಕೆ ಭಾವುಕರಾಗಿ ಈಟಿವಿ ಭಾರತ್ ಜೊತೆ ಮಾತನಾಡಿದ್ದಾರೆ.
ಇಂದಿರಾ ಕ್ಯಾಂಟೀನ್
ಅಲ್ಲದೇ ಈ ಕ್ಯಾಂಟೀನ್ನಲ್ಲಿ ಬಹುಮುಖ್ಯವಾಗಿ ಸ್ವಚ್ಛತೆಯತ್ತ ಗಮನ ಹರಿಸುವುದರೊಂದಿಗೆ ಉತ್ತಮ ಗುಣಮಟ್ಟದ ಆಹಾರವನ್ನು ಒದಗಿಸುತ್ತ ಬಂದಿದ್ದು, ಹಲವು ಜನರು ಇಲ್ಲಿನ ಆಹಾರದ ಗುಣಮಟ್ಟಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
ಈ ಹಿನ್ನೆಲೆಯಲ್ಲಿ ಹಿರಿ ವಯಸ್ಸಿನ ಕಾವಲು ಕೆಲಸಗಾರರೊಬ್ಬರು ಉಚಿತವಾಗಿ ಆಹಾರ ನೀಡಿದ್ದಕ್ಕೆ ಭಾವುಕರಾಗಿ ಈಟಿವಿ ಭಾರತ್ ಜೊತೆ ತಮ್ಮ ಅಭಿಪ್ರಾಯವನ್ನು ಹಂಚಿಕೊಂಡಿದ್ದಾರೆ.
TAGGED:
Indhira canteen food