ನೆಲಮಂಗಲ :ನೆಲಮಂಗಲ ತಾಲೂಕಿನ ನಿಡವಂದ ಗ್ರಾಮದ ರೈಲ್ವೆ ನಿಲ್ದಾಣದ ಬಳಿ ವೃದ್ಧನೊಬ್ಬ ರೈಲಿಗೆ ಸಿಲುಕಿ ಮೃತಪಟ್ಟಿದ್ದಾರೆ.
ಚಲಿಸುತ್ತಿದ್ದ ರೈಲಿಗೆ ಸಿಲುಕಿ ವೃದ್ಧ ಸಾವು - ರೈಲಿಗೆ ಸಿಲುಕಿ ವೃದ್ಧ ಸಾವು
ನೆಲಮಂಗಲ ತಾಲೂಕಿನ ನಿಡವಂದ ಗ್ರಾಮದ ರೈಲ್ವೆ ನಿಲ್ದಾಣದ ಬಳಿ ವೃದ್ಧನೊಬ್ಬ ರೈಲಿಗೆ ಸಿಲುಕಿ ಮೃತಪಟ್ಟಿದ್ದಾರೆ. ಮೃತ ವ್ಯಕ್ತಿಯು ತನ್ನ ಗ್ರಾಮದಿಂದ ಬಂದು ಇಲ್ಲಿನ ನಿಲ್ದಾಣದ ಬಳಿಯ ಅಂಗಡಿಯಲ್ಲಿ ಟೀ ಕುಡಿದು ಹೋಗುತ್ತಿದ್ದರಂತೆ. ನಿನ್ನೆಯೂ ಕೂಡ ಹಾಗೆಯೇ ಬಂದಿದ್ದು, ನಿಲ್ದಾಣದ ಬಳಿ ಬರುತ್ತಿದ್ದ ರೈಲನ್ನು ಗಮನಿಸದೆ ರೈಲಿಗೆ ಸಿಲುಕಿ ಸಾವನ್ನಪ್ಪಿದ್ದಾರೆ.
Old man dies
ಸುಗ್ಗಯ್ಯನ ಪಾಳ್ಯದ ಗಂಗಣ್ಣ (70) ಮೃತ ವ್ಯಕ್ತಿಯೆಂದು ಗುರುತಿಸಲಾಗಿದೆ. ಮೃತರು ಪ್ರತಿದಿನ ಬೆಳಿಗ್ಗೆ ತನ್ನ ಗ್ರಾಮದಿಂದ ನಿಡವಂದ ಗ್ರಾಮಕ್ಕೆ ಟೀ ಕುಡಿಯಲು ಬರುತ್ತಿದ್ದರಂತೆ. ಇಂದು ಕೂಡ ಗಂಗಣ್ಣ, ರೈಲು ಹಳಿಯ ಮೇಲೆ ನಡೆದುಕೊಂಡು ಹೋಗುತ್ತಿದ್ದ ವೇಳೆ ತುಮಕೂರಿನಿಂದ ಬೆಂಗಳೂರಿಗೆ ಬರುತ್ತಿದ್ದ ಅರಿಸಿಕೆರೆ- ಬೆಂಗಳೂರು ರೈಲನ್ನು ಗಮನಿಸಿದ ಅದರಡಿ ಸಿಲುಕಿ ಸಾವನ್ನಪ್ಪಿದ್ದಾರೆ.
ಘಟನಾ ಸ್ಥಳಕ್ಕೆ ರೈಲ್ವೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ