ಕರ್ನಾಟಕ

karnataka

ETV Bharat / state

ಮುಗಿಯುತ್ತಲೇ ಇಲ್ಲ ಹಳೆಕಟ್ಟಡಗಳ ರಗಳೆ..  ಕಮರ್ಷಿಯಲ್ ಸ್ಟ್ರೀಟ್​​​ನಲ್ಲಿ ಹಳೆ ಕಟ್ಟಡದ ಗೋಡೆ ಕುಸಿತ - ಬೆಂಗಳೂರಲ್ಲಿ ಹಳೆ ಕಟ್ಟಡದ ಗೋಡೆ ಕುಸಿತ

ರಾಜಧಾನಿಯಲ್ಲಿನ ಕಮರ್ಷಿಯಲ್ ಸ್ಟ್ರೀಟ್​​​ನ ನಗರತ್ ಪೇಟೆಯಲ್ಲಿ ಹಳೇ ಕಟ್ಟಡದ ಗೋಡೆ ಕುಸಿದು ಬಿದ್ದಿದೆ. ಘಟನೆಯಲ್ಲಿ ಯಾವುದೇ ಪ್ರಾಣ ಹಾನಿ ಸಂಭವಿಸಿಲ್ಲ.

Old building wall collapsed
ಹಳೆ ಕಟ್ಟಡದ ಗೋಡೆ ಕುಸಿತ

By

Published : Oct 16, 2021, 3:37 PM IST

ಬೆಂಗಳೂರು:ಸಿಲಿಕಾನ್​ ಸಿಟಿಯಲ್ಲಿ ಕಟ್ಟಡಗಳ ಕುಸಿತ ಪ್ರಕಣಗಳು ಹೆಚ್ಚಾಗುತ್ತಿದ್ದು, ಈಗಾಗಲೇ ನಾಲ್ಕು ಬೃಹತ್ ಕಟ್ಟಡಗಳು ಧರೆಗುರುಳಿವೆ. ಇದರ ಬೆನ್ನಲ್ಲೇ ನಗರತ್ ಪೇಟೆಯಲ್ಲಿ ಹಳೇ ಕಟ್ಟಡದ ಗೋಡೆ ಕುಸಿದು ಬಿದ್ದಿದೆ.

ಹಳೆ ಕಟ್ಟಡದ ಗೋಡೆ ಕುಸಿತ

ನಗರದ ಕಮರ್ಷಿಯಲ್ ಸ್ಟ್ರೀಟ್​​​ನಲ್ಲಿ ಘಟನೆ ನಡೆದಿದ್ದು, ಮುಖ್ಯರಸ್ತೆಯಲ್ಲಿನ ಹಳೇ ಕಟ್ಟಡದ ಗೋಡೆ ಕುಸಿದಿದೆ. ನಿನ್ನೆಯಿಂದ ಹಂತ - ಹಂತವಾಗಿ ಕುಸಿಯುತ್ತಿದ್ದ ಗೋಡೆ ಇಂದು ಸಂಪೂರ್ಣವಾಗಿ ಕುಸಿದು ಬಿದ್ದ ಪರಿಣಾಮ ದ್ವಿಚಕ್ರ ವಾಹನ ಜಖಂಗೊಂಡಿದೆ.

ಗೋಡೆ ಕುಸಿತದಿಂದ ಜಖಂಗೊಂಡಿರುವ ಸ್ಕೂಟಿ

ಕಟ್ಟಡ ಬೀಳುವ ಸೂಚನೆ ಹಿನ್ನೆಲೆಯಲ್ಲಿ ಕಟ್ಟಡದಲ್ಲಿದ್ದ ಆರು ಅಂಗಡಿಗಳನ್ನು ಬಿಬಿಎಂಪಿ ಖಾಲಿ ಮಾಡಿಸಿದ್ದು, ಕಟ್ಟಡ ಕುಸಿದಿರುವ ಸ್ಥಳದಲ್ಲಿ ಯಾರೂ ಓಡಾಡದಂತೆ ಅಧಿಕಾರಿಗಳು ತಮ್ಮ ಸುಪರ್ದಿಗೆ ತೆಗೆದುಕೊಂಡಿದ್ದಾರೆ. ಘಟನೆಯಲ್ಲಿ ಯಾವುದೇ ಪ್ರಾಣಾಪಾಯ ಸಂಭವಿಸಿಲ್ಲ.

ಹಳೆ ಕಟ್ಟಡದ ಗೋಡೆ ಕುಸಿತ

ಇನ್ನೊಂದೆಡೆ, ದಾಸರಹಳ್ಳಿ ಕ್ಷೇತ್ರದ ಮಲ್ಲಸಂದ್ರ ವಾರ್ಡ್​​ನಲ್ಲಿ ಕೆಲ ದಿನಗಳ ಹಿಂದೆ ಕಳಪೆ ಗುಣಮಟ್ಟದಿಂದಾಗಿ ಕೆಂಪೇಗೌಡ ಪಾರ್ಕ್​ನ ಗೋಡೆ ಕುಸಿದಿತ್ತು. 7 ಎಕರೆ ಪ್ರದೇಶದಲ್ಲಿ 24 ಕೋಟಿ ರೂ. ಖರ್ಚು ಮಾಡಿ ಈ ಪಾರ್ಕ್ ನಿರ್ಮಾಣ ಮಾಡಲಾಗಿತ್ತು.

ಇದನ್ನೂ ಓದಿ: ವಾಯುಭಾರ ಕುಸಿತ: ಇಂದು, ನಾಳೆ ಕರ್ನಾಟಕದ 16 ಜಿಲ್ಲೆಗಳಿಗೆ ಯಲ್ಲೋ ಅಲರ್ಟ್

ABOUT THE AUTHOR

...view details