ಕರ್ನಾಟಕ

karnataka

ETV Bharat / state

ಇನ್ಮುಂದೆ ಫಲಾನುಭವಿಗಳ ಅಕೌಂಟ್​​ಗೆ ಮಾಸಾಶನ: ಅಭಿಯಾನಕ್ಕೆ ಸಿಎಂ ಚಾಲನೆ - CM BSY R ASHOK

ರಾಜ್ಯದಲ್ಲಿ ಒಟ್ಟು 68.84 ಲಕ್ಷ ಫಲಾನುಭವಿಗಳಿಗೆ ವಿವಿಧ ಯೋಜನೆಗಳಡಿ ಪಿಂಚಣಿ ಮಂಜೂರು ಮಾಡಲಾಗಿದೆ. ಯೋಜನೆಗಳ ಅನುಷ್ಠಾನಕ್ಕಾಗಿ ಪ್ರಸಕ್ತ 2020-21ನೇ ಸಾಲಿನಲ್ಲಿ 7,500 ಕೋಟಿ ರೂ. ಮೀಸಲಿಟ್ಟಿದ್ದು, ಡಿಸೆಂಬರ್ ಅಂತ್ಯದವರೆಗೆ 5446.00 ಕೋಟಿ ರೂ. ಅನುದಾನ ವೆಚ್ಚ ಮಾಡಲಾಗಿದೆ ಎಂದು ಸಿಎಂ ಯಡಿಯೂರಪ್ಪ ಹೇಳಿದರು.

CM BSY R ASHOK
ಸಿಎಂ ಬಿಎಸ್​​​ವೈ, ಆರ್​ ಅಶೋಕ್

By

Published : Jan 27, 2021, 4:57 PM IST

ಬೆಂಗಳೂರು: ಅರ್ಹ ಫಲಾನುಭವಿಗಳಿಗೆ ಪಿಂಚಣಿ ಸಿಗದ ಹಿನ್ನೆಲೆ ‘ಮನೆ ಬಾಗಿಲಿಗೆ ಮಾಸಾಶನ' ಎಂಬ ನೂತನ ಅಭಿಯಾನಕ್ಕೆ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಚಾಲನೆ ನೀಡಿದ್ದಾರೆ.

ವಿಧಾನಸೌಧದ ಬ್ಯಾಂಕ್ವೆಟ್ ಹಾಲ್​​​​​ನಲ್ಲಿ ಕಂದಾಯ ಇಲಾಖೆಯ ಸಾಮಾಜಿಕ ಭದ್ರತೆ ಮತ್ತು ಪಿಂಚಣಿಗಳ ನಿರ್ದೇಶನಾಲಯ ಹಮ್ಮಿಕೊಂಡಿದ್ದ ಕಾರ್ಯಕ್ರಮದಲ್ಲಿ 'ನವೋದಯ' ಆ್ಯಪ್ ಮತ್ತು ತಂತ್ರಾಂಶ ಲೋಕಾರ್ಪಣೆ ಮಾಡಿ ಸಿಎಂ ಬಿಎಸ್​​ವೈ ಮಾತನಾಡಿದರು.

ಮಧ್ಯವರ್ತಿಗಳ ಹಾವಳಿ ಇಲ್ಲದೇ ಸರ್ಕಾರದ ಯೋಜನೆಗಳು ಜನರಿಗೆ ಸಿಗಬೇಕು. ಇದು ಪ್ರಧಾನಿ ನರೇಂದ್ರ ಮೋದಿಯವರ ಆಶಯ ಕೂಡ. ಇಷ್ಟು ದಿನ ಪಿಂಚಣಿಗಾಗಿ ಫಲಾನುಭವಿಗಳು ತುಂಬಾ ಕಷ್ಟ ಪಡುತ್ತಿದ್ದರು. ಇದೀಗ ಅದನ್ನು ತಪ್ಪಿಸಲು ಮಹತ್ವದ ಯೋಜನೆ ಜಾರಿ ಮಾಡಲಾಗಿದೆ ಎಂದು ತಿಳಿಸಿದರು.

ನವೋದಯ' ಆ್ಯಪ್ ಮತ್ತು ತಂತ್ರಾಂಶ ಲೋಕಾರ್ಪಣೆ ಮಾಡಿದ ಸಿಎಂ

ಪಿಂಚಣಿಗಾಗಿ ಜನರು ಸರ್ಕಾರಿ ಕಚೇರಿಗೆ ಹೋಗಿ ಅಧಿಕಾರಿಗಳ ಬಳಿ ಕೈಕಟ್ಟಿ ನಿಲ್ಲುವ ಪರಿಸ್ಥಿತಿ ಇತ್ತು. ಇದೆಲ್ಲವನ್ನೂ ತಪ್ಪಿಸಲು ಈ ಯೋಜನೆ ತುಂಬಾ ಸಹಕಾರಿಯಾಗಲಿದೆ. ಯಾವುದೇ ಮಧ್ಯವರ್ತಿಗಳು ಇಲ್ಲದೆ, ಅರ್ಹ ಫಲಾನುಭವಿಗಳಿಗೆ ಪಿಂಚಣಿ ನೇರವಾಗಿ ಅವರ ಅಕೌಂಟ್​​​ಗೆ ತಲುಪಲಿದೆ. ಇದು ದೇಶದಲ್ಲೇ ಮೊದಲು ಎಂದರು.

ಈ ಯೋಜನೆ ಇತರ ಪಿಂಚಣಿದಾರರಿಗೂ ವಿಸ್ತರಣೆ

ಮೊದಲ ಹಂತದಲ್ಲಿ ವೃದ್ಧಾಪ್ಯ ವರ್ಗಕ್ಕೆ ಈ ಯೋಜನೆ ಜಾರಿ ಮಾಡಲಾಗಿದೆ. ಮುಂದೆ ಎರಡನೇ ಹಂತದಲ್ಲಿ ವಿಧವೆಯರು, ವಿಶೇಷ ಚೇತನರು ಸೇರಿದಂತೆ ಉಳಿದ ಎಲ್ಲಾ ಪಿಂಚಣಿದಾರರಿಗೆ ಇದೇ ರೀತಿ ಜಾರಿ ಮಾಡಲು ಉದ್ದೇಶಿಸಲಾಗಿದೆ ಎಂದರು.

ರಾಜ್ಯದಲ್ಲಿ ಒಟ್ಟು 68.84 ಲಕ್ಷ ಫಲಾನುಭವಿಗಳಿಗೆ ವಿವಿಧ ಯೋಜನೆಗಳಡಿ ಪಿಂಚಣಿ ಮಂಜೂರು ಮಾಡಲಾಗಿದೆ. ಯೋಜನೆಗಳ ಅನುಷ್ಠಾನಕ್ಕಾಗಿ ಪ್ರಸಕ್ತ 2020- 21ನೇ ಸಾಲಿನಲ್ಲಿ 7,500 ಕೋಟಿ ರೂ. ಮೀಸಲಿಟ್ಟಿದ್ದು, ಡಿಸೆಂಬರ್ ಅಂತ್ಯದವರೆಗೆ 5446.00 ಕೋಟಿ ರೂ. ಅನುದಾನ ವೆಚ್ಚ ಮಾಡಲಾಗಿದೆ ಎಂದರು.

ಕಂದಾಯ ಇಲಾಖೆ ಸಚಿವ ಆರ್.ಅಶೋಕ್ ಮಾತನಾಡಿ, ಸರಳವಾಗಿ ಪಿಂಚಣಿ ಫಲಾನುಭವಿಗಳ ಮನೆ ಬಾಗಿಲಿಗೆ ಬರಲಿದೆ. ಈ ಯೋಜನೆಗೆ ಸರ್ಕಾರ 7.5 ಸಾವಿರ ಕೋಟಿ ರೂ. ಮೀಸಲಿಡುತ್ತಿದೆ.

ಇನ್ಮುಂದೆ ಪೋಸ್ಟ್ ಆಫೀಸ್ ಮೂಲಕ ಪಿಂಚಣಿ ಸಿಗುವುದಿಲ್ಲ. ಹಿಂದೆ ಪೋಸ್ಟ್ ಮ್ಯಾನ್ ಮನೆಗೆ ಬಂದು ಪಿಂಚಣಿ ಕೊಡುತ್ತಿದ್ದರು. ಆದರೆ ಈಗ ಪೋಸ್ಟ್ ಮ್ಯಾನ್ ಮನೆಗೆ ಬಂದು ಪಿಂಚಣಿ ನೀಡುವುದಿಲ್ಲ. ನೇರವಾಗಿ ಫಲಾನುಭವಿಯ ಬ್ಯಾಂಕ್ ಖಾತೆಗೆ ಪಿಂಚಣಿ ಬರಲಿದೆ ಎಂದು ವಿವರಿಸಿದರು.

ಇದನ್ನೂ ಓದಿ:ಪರಿಷತ್ ಸದಸ್ಯರ ಜೊತೆ ಸಿಎಂ ಸಭೆ: ಸಭಾಪತಿ, ಉಪಸಭಾಪತಿ ಸ್ಥಾನದ ಗೊಂದಲಕ್ಕೆ ಬೀಳಲಿದೆಯಾ ತೆರೆ!?

ABOUT THE AUTHOR

...view details