ಕರ್ನಾಟಕ

karnataka

ETV Bharat / state

ಇಂದಿನಿಂದ ಓಲಾ, ಉಬರ್, ರಾಪಿಡೊ ಕಂಪನಿಗಳ ಆ್ಯಪ್ ಆಟೋ ಸೇವೆ ಬ್ಯಾನ್​.. ಓಡಿಸಿದರೆ ದಂಡ ಎಷ್ಟು ಗೊತ್ತಾ!? - ಕಂಪನಿಗಳ ಆ್ಯಪ್​ಗಳಲ್ಲಿ ಆಟೋ ಸೇವೆ ಬ್ಯಾನ್

ಇಂದಿನಿಂದ ಓಲಾ, ಉಬರ್, ರಾಪಿಡೊ ಕಂಪನಿಗಳ ಆ್ಯಪ್​ಗಳಲ್ಲಿ ಆಟೋ ಸೇವೆ ಬ್ಯಾನ್ ಮಾಡಲಾಗಿದೆ. ನಿಯಮ ಪಾಲಿಸದಿದ್ದಲ್ಲಿ ದಂಡ ವಿಧಿಸಲಾಗುವುದು ಎಂದು ಸರ್ಕಾರ ಎಚ್ಚರಿಸಿದೆ.

ola uber rapido app auto service ban  ola uber rapido app auto service ban in Karnataka  auto service ban in Karnataka from today  ಕಂಪನಿಗಳ ಆ್ಯಪ್ ಸೇವೆ ಬ್ಯಾನ್  ಓಲಾ ಉಬರ್ ಕಂಪನಿಗಳ ಆ್ಯಪ್​ಗಳಲ್ಲಿ ಆಟೋ ಸೇವೆ ಬ್ಯಾನ್  ನಿಯಮ ಪಾಲಿಸದಿದ್ರೆ ದಂಡ ಪ್ರಯೋಗ  ಇಡೀ ಆ್ಯಪ್ ರದ್ದುಗೊಳಿಸಲು ಸಾಧ್ಯವಿಲ್ಲ  ಕಂಪನಿಗಳ ಆ್ಯಪ್​ಗಳಲ್ಲಿ ಆಟೋ ಸೇವೆ ಬ್ಯಾನ್  ನಿಯಮ ಪಾಲಿಸದಿದ್ದಲ್ಲಿ ದಂಡ
ಆ್ಯಪ್ ಆಟೋ ಸೇವೆ ಬ್ಯಾನ್

By

Published : Oct 12, 2022, 7:47 AM IST

ಬೆಂಗಳೂರು: ಓಲಾ, ಉಬರ್ ಮತ್ತು ರಾಪಿಡೊ ಕಂಪನಿಗಳ ಆ್ಯಪ್‌ಗಳಲ್ಲಿ ಆಟೋ ಸೇವೆ ಇಂದಿನಿಂದ ಸ್ಥಗಿತವಾಗಿದೆ ಎಂದು ಸಾರಿಗೆ ಆಯುಕ್ತ ಟಿಎಚ್‌ಎಂ ಕುಮಾರ್ ತಿಳಿಸಿದ್ದಾರೆ. ಮಂಗಳವಾರ ಶಾಂತಿನಗರದ ಸಾರಿಗೆ ಇಲಾಖೆಯಲ್ಲಿ ಓಲಾ ಮತ್ತು ಉಬರ್ ಕಂಪನಿಗಳ ಪ್ರತಿನಿಧಿಗಳ ಜತೆ ಸಭೆ ನಡೆಸಿದ ಬಳಿಕ ಮಾತನಾಡಿದ ಅವರು, ನಿಯಮದ‌ ಪ್ರಕಾರ ಆಟೋ ಸೇವೆ ಒದಗಿಸಲು ಈ ಕಂಪನಿಗಳಿಗೆ ಅನುಮತಿ ಇಲ್ಲ. ಈ ಸಂಬಂಧ ಸಭೆಯಲ್ಲಿ ಸಂಸ್ಥೆಗಳಿಗೆ ಮನವರಿಕೆ ‌ಮಾಡಿಕೊಡಲಾಗಿದೆ. ಸಂಸ್ಥೆಗಳಿಗೆ ಆಟೋ ಸೇವೆಯನ್ನು ಆ್ಯಪ್​ನಿಂದ ತೆಗೆಯಲು ಸೂಚಿಸಲಾಗಿದೆ. ಒಂದು ವೇಳೆ, ಸೂಚನೆ ಪಾಲಿಸದೇ ಇದ್ದರೆ ಸೈಬರ್ ಕ್ರೈಂ ಠಾಣೆಗೆ ದೂರು ನೀಡಿ ಕ್ರಮ ಕೈಗೊಳ್ಳಲಾಗುವುದು ಎಂದು ತಿಳಿಸಿದ್ದಾರೆ.

ನಿಯಮ ಪಾಲಿಸದಿದ್ರೆ ದಂಡ ಪ್ರಯೋಗ: ಇಂದಿನಿಂದ ಓಲಾ, ಉಬರ್, ರಾಪಿಡೋಗಳ ಆಟೋ ಸೇವೆ ಸ್ಥಗಿತವಾಗಲಿದ್ದು, ಪರವಾನಗಿ ಪಡೆದ ಬಳಿಕವಷ್ಟೇ ಆಟೋಗಳನ್ನು ಚಲಾಯಿಸಬಹುದು. ಅದೂ ಕೂಡಾ ಸಾರಿಗೆ ಇಲಾಖೆ ನಿಗದಿಪಡಿಸಿದ ದರದಲ್ಲೇ ಆಟೋ ಓಡಿಸಬೇಕೆಂಬ ನಿಯಮ ಜಾರಿ ಮಾಡಲಾಗಿದೆ. ಒಂದು ವೇಳೆ ನಿಯಮ ಉಲ್ಲಂಘಿಸಿ ಆಟೋ ಓಡಿಸಿದರೆ ಓಲಾ, ಉಬರ್ ಸಂಸ್ಥೆಗೆ 5 ಸಾವಿರ ದಂಡ ಹಾಕಲಾಗುವುದು ಎಂದು ಎಚ್ಚರಿಕೆ ನೀಡಿದ್ದಾರೆ.

ಆಟೊ ಸೇವೆ ಕಾನೂನು ಬಾಹಿರವಾಗಿದೆ. ಹೀಗಾಗಿ ಆಟೊ ಚಾಲಕರು ಮತ್ತು ಪ್ರಯಾಣಿಕರು ಈ ಸೇವೆ ಬಳಕೆ ಮಾಡಬಾರದು. ಬಳಕೆ ಮಾಡಿ ತೊಂದರೆ ಅನುಭವಿಸಿದರೆ ಅದಕ್ಕೆ ಇಲಾಖೆ ಜವಾಬ್ದಾರಿ ಆಗುವುದಿಲ್ಲ ಎಂಬ ಪ್ರಕಟಣೆ ಹೊರಡಿಸಲಾಗುವುದು. ಒಂದು ವೇಳೆ ಆಟೋ ಸೇವೆ ಕೋರಿ ಕಂಪನಿಗಳು ಅರ್ಜಿ ಸಲ್ಲಿಸಿದರೆ ಅದನ್ನು ಸರ್ಕಾರಕ್ಕೆ ರವಾನಿಸಲಾಗುವುದು. ಬಳಿಕ ಈ ಬಗ್ಗೆ ಸರ್ಕಾರ ತೀರ್ಮಾನ ಕೈಗೊಳ್ಳಲಿದೆ ಎಂದು ಹೇಳಿದ್ದಾರೆ.

ಇಡೀ ಆ್ಯಪ್ ರದ್ದುಗೊಳಿಸಲು ಸಾಧ್ಯವಿಲ್ಲ: ಇಡೀ ಆ್ಯಪ್ ರದ್ದುಗೊಳಿಸಲು ಸಾಧ್ಯವಿಲ್ಲ. ಒಂದೂವರೆ ವರ್ಷದಿಂದ ಕಂಪನಿಗಳ ಪರವಾನಗಿ ನವೀಕರಣಗೊಂಡಿಲ್ಲ. ಈ ಸಂಬಂಧ ಹೈಕೋರ್ಟ್ ತಡೆಯಾಜ್ಞೆ ನೀಡಿದ್ದು, ಈಗ ಇಡೀ ಆ್ಯಪ್ ರದ್ದು ಕಷ್ಟ ಎಂದು ಕಂಪನಿ ಪ್ರತಿನಿಧಿಗಳು ತಿಳಿಸಿದ್ದಾರೆ. ಆ್ಯಪ್‌ನಲ್ಲಿ ಆಟೋ ಸೇವೆ ನೀಡುವ ಸಂಬಂಧ ಅನುಮತಿ ಕೋರಿ ಅರ್ಜಿ ಸಲ್ಲಿಸಲಾಗುವುದು ಎಂದು ಕಂಪನಿಗಳು ತಿಳಿಸಿವೆ.

ಸಾರ್ವಜನಿಕರು ದೂರು ಸಲ್ಲಿಸಬಹುದು:ಓಲಾ, ಉಬರ್ ಆಟೋ ಓಡಿಸಿದರೆ ಸಾರ್ವಜನಿಕರು ನೇರವಾಗಿ ಸಾರಿಗೆ ಇಲಾಖೆಗೆ ಕರೆ ಮಾಡಿ(ದೂರವಾಣಿ ಸಂಖ್ಯೆ 9449863429/426)ದೂರು ನೀಡಬಹುದಾಗಿದೆ. ದೂರು ನೀಡಲು RTO ನಿಂದ ವಾಟ್ಸ್​​ಆ್ಯಪ್​ ಗ್ರೂಪ್ ರಚನೆ ಮಾಡಲಾಗುತ್ತಿದೆ ಎಂದು ಸಾರಿಗೆ ಆಯುಕ್ತ ಟಿಎಚ್‌ಎಂ ಕುಮಾರ್ ತಿಳಿಸಿದ್ದಾರೆ.

ಓದಿ:ಒಂದೇ ದಿನ‌ 22.64 ಕೋಟಿ ಆದಾಯ.. ಹೊಸ ದಾಖಲೆ ಬರೆದ ಕೆಎಸ್‌ಆರ್‌ಟಿಸಿ

ABOUT THE AUTHOR

...view details