ಬೆಂಗಳೂರು: ವೀಕೆಂಡ್ ಕರ್ಫ್ಯೂಗೆ ನಗರದ ಓಲಾ, ಊಬರ್ ಡ್ರೈವರ್ ಅಂಡ್ ಓನರ್ಸ್ ಅಸೋಸಿಯೇಷನ್ ತೀವ್ರ ಅಸಮಾಧಾನ ವ್ಯಕ್ತಪಡಿಸಿದೆ.
ವೀಕೆಂಡ್ ಕರ್ಫ್ಯೂ: ಓಲಾ, ಊಬರ್ ಚಾಲಕ ಸಂಘದಿಂದ ವಿರೋಧ - ವೀಕೆಂಡ್ ಕರ್ಫ್ಯೂ ನಿರ್ಧಾರಕ್ಕೆ ಓಲಾ ಊಬರ್ ಚಾಲಕ ಸಂಘದಿಂದ ವಿರೋಧ
ಆಟೋ ಟ್ಯಾಕ್ಸಿ ಚಾಲಕರ ಜೀವನ ನಶಿಸಿ ಹೋಗುತ್ತಿದೆ. ಶನಿವಾರ, ಭಾನುವಾರ ಚಾಲಕರಿಗೆ ಹೆಚ್ಚಿನ ಆದಾಯ ತಂದುಕೊಡುವ ದಿನಗಳು. 2000 ಕೋವಿಡ್ ಕೇಸ್ ಬಂದಿದೆ ಅಂತ ಹೇಳುತ್ತಿದ್ದಾರೆ, ಆದರೆ ಆಸ್ಪತ್ರೆಯಲ್ಲಿ ದಾಖಲಾತಿ ಇಲ್ಲ. ಕರ್ಫ್ಯೂ ಜಾರಿ ಮಾಡಿ ಸರ್ಕಾರ ಮತ್ತೆ ಸಾಮಾನ್ಯ ಜನರಿಗೆ ಆರ್ಥಿಕ ಸಂಕಷ್ಟ ತಂದೊಡ್ಡಿದೆ ಎಂದು ತನ್ವೀರ್ ಪಾಷಾ ಹೇಳಿದರು.
ಈ ಬಗ್ಗೆ ಮಾತನಾಡಿದ ಸಂಘದ ಅಧ್ಯಕ್ಷ ತನ್ವೀರ್ ಪಾಷಾ, ಕರ್ಫ್ಯೂ ಜಾರಿ ಮಾಡಿ ಸರ್ಕಾರ ಚಾಲಕರ ಜೀವನದ ಜೊತೆ ಚೆಲ್ಲಾಟವಾಡುತ್ತಿದೆ. ಇದು ದುಃಖಕರ ಸಂಗತಿ, ರಾಜ್ಯ ಸರ್ಕಾರಕ್ಕೆ ಲಾಕ್‌ಡೌನ್ ಒಂದೇ ಪರಿಹಾರವಾಗುತ್ತಿದೆಯೇ? ಹಾಗಾದರೆ, ವ್ಯಾಕ್ಸಿನ್‌ನಿಂದಾದ ಪ್ರಯೋಜನವೇನು ಎಂದು ಪ್ರಶ್ನಿಸಿದ್ದಾರೆ.
ಆಟೋ ಟ್ಯಾಕ್ಸಿ ಚಾಲಕರ ಜೀವನ ನಶಿಸಿ ಹೋಗುತ್ತಿದೆ. ಶನಿವಾರ, ಭಾನುವಾರ ಚಾಲಕರಿಗೆ ಹೆಚ್ಚಿನ ಆದಾಯ ತಂದುಕೊಡುವ ದಿನಗಳು. 2000 ಕೋವಿಡ್ ಕೇಸ್ ಬಂದಿದೆ ಅಂತ ಹೇಳುತ್ತಿದ್ದಾರೆ. ಆದರೆ ಆಸ್ಪತ್ರೆಯಲ್ಲಿ ದಾಖಲಾತಿ ಇಲ್ಲ. ಕರ್ಫ್ಯೂ ಜಾರಿ ಮಾಡಿ ಸರ್ಕಾರ ಮತ್ತೆ ಸಾಮಾನ್ಯ ಜನರಿಗೆ ಆರ್ಥಿಕ ಸಂಕಷ್ಟ ತಂದೊಡ್ಡಿದೆ ಎಂದು ದೂರಿದರು.