ಬೆಂಗಳೂರು: ವಿದ್ಯುತ್‌ಚಾಲಿತ ವಾಹನ ಬಿಡುಗಡೆ ಬಗ್ಗೆ ಹೇಳಿಕೆ ನೀಡಿದ ಕ್ಷಣದಿಂದಲೂ ಮಾರುಕಟ್ಟೆಯಲ್ಲಿ ಚರ್ಚೆ ಆಗುತ್ತಿರುವ ಓಲಾ ಎಲೆಕ್ಟ್ರಿಕ್ ಈಗ ವಾಹನ ತಯಾರಿಕಾ ಕಾರ್ಖಾನೆಯಲ್ಲಿ ಹತ್ತು ಸಾವಿರಕ್ಕೂ ಹೆಚ್ಚು ಮಹಿಳಾ ಸಿಬ್ಬಂದಿ ನೇತೃತ್ವದಲ್ಲಿ ವಾಹನ ತಯಾರಿಕೆ ನಡೆಯಲಿದೆ ಎಂದು ಸಂಸ್ಥೆಯ ಮುಖ್ಯಸ್ಥ ಭಾವಿಶ್ ಅಗರ್ವಾಲ್ ಹೇಳಿದ್ದಾರೆ.
ಓಲಾ ಎಲೆಕ್ಟ್ರಿಕ್ ಸ್ಕೂಟರ್ ಘಟಕದಲ್ಲಿ ಸ್ತ್ರೀ ಶಕ್ತಿ: 10 ಸಾವಿರ ಮಹಿಳಾ ಸಿಬ್ಬಂದಿಗೆ ಉದ್ಯೋಗ - ಓಲಾ ಎಲೆಕ್ಟ್ರಿಕ್ ಸ್ಕೂಟರ್ ಘಟಕ
ಆತ್ಮನಿರ್ಭರ ಭಾರತಕ್ಕೆ ಆತ್ಮನಿರ್ಭರ ಮಹಿಳೆಯರು ಬೇಕು. ಹೀಗಾಗಿ ಓಲಾ ಫ್ಯುಚರ್ ಫ್ಯಾಕ್ಟರಿಯಲ್ಲಿ ಮಹಿಳೆಯರು ಪೂರ್ಣಪ್ರಮಾಣದ ಕೆಲಸ ಮಾಡಲಿದ್ದಾರೆ. ಈಗ ಓಲಾ ಕಾರ್ಖಾನೆ ಜಗತ್ತಿನ ಅತಿದೊಡ್ಡ ಮಹಿಳಾ ಸಿಬ್ಬಂದಿ ಹೊಂದಿದ ಕಾರ್ಖಾನೆ ಆಗಿದೆ ಎಂದು ಅಗರ್ವಾಲ್ ಹೇಳಿದ್ದಾರೆ.
ಓಲಾ ಎಲೆಕ್ಟ್ರಿಕ್ ಸ್ಕೂಟರ್ ಘಟಕ
ಆತ್ಮನಿರ್ಭರ ಭಾರತಕ್ಕೆ ಆತ್ಮನಿರ್ಭರ ಮಹಿಳೆಯರು ಬೇಕು. ಹೀಗಾಗಿ ಓಲಾ ಫ್ಯುಚರ್ ಫ್ಯಾಕ್ಟ್ರಿಯಲ್ಲಿ ಮಹಿಳೆಯರು ಪೂರ್ಣಪ್ರಮಾಣದ ಕೆಲಸ ಮಾಡಲಿದ್ದಾರೆ. ಈಗ ಓಲಾ ಕಾರ್ಖಾನೆ ಜಗತ್ತಿನ ಅತಿದೊಡ್ಡ ಮಹಿಳಾ ಸಿಬ್ಬಂದಿ ಹೊಂದಿದ ಕಾರ್ಖಾನೆ ಆಗಿದೆ ಎಂದು ಅವರು ಹೇಳಿದರು.