ಕರ್ನಾಟಕ

karnataka

ಓಲಾ ಕ್ಯಾಬ್ ಚಾಲಕನ ದುರ್ವರ್ತನೆ ಪ್ರಕರಣ: ಪೊಲೀಸ್ ಆಯುಕ್ತರಿಂದ ಕ್ರಮ ಭರವಸೆ

By

Published : Oct 3, 2019, 6:09 PM IST

ಕೆಂಪೇಗೌಡ ಇಂಟರ್‌ನ್ಯಾಷನಲ್ ಏರ್ಪೋರ್ಟ್‌ನಿಂದ ಕ್ಯಾಬ್‌ಗೆ ಹತ್ತಿದ್ದ ಮಹಿಳೆಯೊಬ್ಬರು ಚಾಲಕನಿಗೆ ರಾಷ್ಟ್ರೀಯ ಹೆದ್ದಾರಿ 44ಕ್ಕೆ ಕರೆದುಕೊಂಡು ಹೋಗಲು ತಿಳಿಸಿದ್ದಾರೆ. ಆದ್ರೆ, ಆಕೆಯ ಮಾತು ಕೇಳದೆ ಸೀದಾ ಬೇಗೂರಿಗೆ ಕರೆದೊಯ್ದ ಚಾಲಕ ಮಹಿಳೆಯೊಂದಿಗೆ ಅಸಭ್ಯವಾಗಿ ವರ್ತಿಸಿರುವ ಘಟನೆ ನಡೆದಿದೆ. ಪ್ರಕರಣ ಸಂಬಂಧ ನಗರ ಪೊಲೀಸ್ ಆಯುಕ್ತರು ಕ್ರಮದ ಕುರಿತು ಎಚ್ಚರಿಕೆ ನೀಡಿದ್ದಾರೆ.

ಭಾಸ್ಕರ್ ರಾವ್

ಬೆಂಗಳೂರು: ಕೆಂಪೇಗೌಡ ಇಂಟರ್‌ನ್ಯಾಷನಲ್ ಏರ್ಪೋರ್ಟ್‌ನಿಂದ ಕ್ಯಾಬ್ ಹತ್ತಿದ್ದ ಮಹಿಳೆಯೊಬ್ಬರು ರಾಷ್ಟ್ರೀಯ ಹೆದ್ದಾರಿ 44ಕ್ಕೆ ಕರೆದುಕೊಂಡು ಹೋಗಲು ತಿಳಿಸಿದ್ದಾರೆ. ಆದ್ರೆ, ಆಕೆಯ ಮಾತು ಕೇಳದ ಚಾಲಕ ಮಾರ್ಗ ಬದಲಿಸಿ ಸೀದಾ ಬೇಗೂರಿಗೆ ಕರೆದೊಯ್ದಿದ್ದಾನೆ. ಅಲ್ಲದೇ ಮ್ಯಾಪ್‌ನಲ್ಲಿ ಹೇಗೆ ತೋರಿಸುತ್ತಿದೆಯೋ ಹಾಗೆ ಹೋಗುತ್ತಿದ್ದೇನೆ ಎಂದಿದ್ದಲ್ಲದೇ, ಮಹಿಳೆಯೊಂದಿಗೆ ಅಸಭ್ಯವಾಗಿ ವರ್ತಿಸಿದ್ದಾನೆ ಎಂದು ನಗರ ಪೊಲೀಸ್ ಆಯುಕ್ತ ಭಾಸ್ಕರ್ ರಾವ್ ತಿಳಿಸಿದ್ದಾರೆ. ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಲಾಗಿದ್ದು ಕಠಿಣ ಕ್ರಮದ ಭರವಸೆ ನೀಡಿದ್ದಾರೆ.

ನಗರ ಪೊಲೀಸ್ ಆಯುಕ್ತ ಭಾಸ್ಕರ್ ರಾವ್ ಮಾತನಾಡಿದ್ದಾರೆ

ಈ ಮಾರ್ಗದಲ್ಲಿ ಯಾವುದೇ ಹೆದ್ದಾರಿ ಸಿಗುವುದಿಲ್ಲ ಎಂದಿದ್ದ ಚಾಲಕ:

ಡ್ರೈವರ್‌ನ ವರ್ತನೆ ಕಂಡು ಪ್ರಶ್ನಿಸಿದ ಆಕೆಗೆ, ಮ್ಯಾಪ್‌ನಲ್ಲಿ ಹೇಗೆ ತೋರಿಸುತ್ತಿದೆಯೋ ಹಾಗೆ ಹೋಗುತ್ತಿದ್ದೇನೆ ಎಂದಿದ್ದಾನೆ. ಅಲ್ಲದೇ ಈ ಮಾರ್ಗದಲ್ಲಿ ಯಾವುದೇ ಹೆದ್ದಾರಿ ಸಿಗುವುದಿಲ್ಲ ಎಂದಾಗ ಅವರೊಂದಿಗೆ ಅಸಭ್ಯವಾಗಿ ವರ್ತಿಸಿದ್ದಾನೆ ಎನ್ನಲಾಗಿದೆ. ಕೂಡಲೇ ಮಹಿಳೆ ಓಲಾ ಕ್ಯಾಬ್‌ನ ಎಮರ್ಜನ್ಸಿ ಬಟನ್ ಪ್ರೆಸ್ ಮಾಡಿದ್ದಾಳೆ. ಹೀಗಾಗಿ ಆಕೆಯನ್ನು ಅಲ್ಲೇ ಇಳಿದುಕೊಳ್ಳಲು ಸೂಚಿಸಿ ಚಾಲಕ ಪರಾರಿಯಾಗಿದ್ದಾನೆ.

ಪೊಲೀಸ್ ಆಯುಕ್ತ ಭಾಸ್ಕರ್ ರಾವ್ ಪ್ರತಿಕ್ರಿಯೆ;

ಈಗಾಗಲೇ ಕತ್ತಲೆ ಇರುವ ಹಾಗೂ ನಿಷೇಧಿತ ಪ್ರದೇಶದಲ್ಲಿ ಕ್ಯಾಬ್ ಚಾಲಕರು ಸಂಚರಿಸದಂತೆ ಸೂಚಿಸಲಾಗಿದೆ. ಈ ಕುರಿತು ಕ್ಯಾಬ್ ಚಾಲಕರ ಜೊತೆ ಈಗಾಗಲೇ ಮಾತುಕತೆ ನಡೆಸಿ ಸೂಚನೆ ನೀಡಲಾಗಿದೆ. ಇನ್ನು‌ ಮುಂದೆ‌ ಈ ರೀತಿ ಘಟನೆಗಳು ಮರುಕಳಿಸದಂತೆ ಕ್ರಮ ಕೈಗೊಳ್ಳಲಾಗುವುದು ಎಂದರು. ಈ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿದ್ದು ಮಹಿಳೆಗೆ ಸೂಕ್ತ ರೀತಿಯಲ್ಲಿ ಸ್ಪಂದಿಸಿದ ಓಲಾ ಸಂಸ್ಥೆಯ ಮೇಲೂ ಪ್ರಕರಣ ದಾಖಲಿಸಲಾಗುವುದು ಎಂದು ಹೇಳಿದ್ದಾರೆ. ಸದ್ಯ ಚಾಲಕ ತಲೆಮರೆಸಿಕೊಂಡಿದ್ದು ಶೀಘ್ರ ಪತ್ತೆ ಹಚ್ಚಿ ವಿಚಾರಣೆ ನಡೆಸುವುದಾಗಿ ಆಯುಕ್ತರು ಭರವಸೆ ಕೊಟ್ಟರು.

ABOUT THE AUTHOR

...view details