ಕರ್ನಾಟಕ

karnataka

ETV Bharat / state

ಕೆಎಸ್​ಆರ್​ಟಿಸಿ ಆಯ್ತು ಇದೀಗ ಖಾಸಗಿ ಬಸ್ ಟಿಕೆಟ್​ ದರ ಏರಿಕೆ‌..! - ಕೆಎಸ್ಆರ್ಟಿಸಿ ಟಿಕೆಟ್ ದರ ಏರಿಕೆ

ರಾಜ್ಯ ರಸ್ತೆ ಸಾರಿಗೆ ಬಸ್​ ಟಿಕೆಟ್​ ದರ ಏರಿಕೆಯಾದ ಬೆನ್ನಿಗೇ ಖಾಸಗಿ ಬಸ್​ ಟಿಕೆಟ್​ ದರವೂ ಏರಿಕೆಯಾಗಲಿದೆ.

Private Bus
ಕೆಎಸ್​ಆರ್​ಟಿಸಿ ಟಿಕೆಟ್ ದರ ಏರಿಕೆ

By

Published : Mar 1, 2020, 10:46 PM IST

ಬೆಂಗಳೂರು:ರಾಜ್ಯ ರಸ್ತೆ ಸಾರಿಗೆ ಬಸ್​ ಟಿಕೆಟ್​ ದರ ಏರಿಕೆಯಾದ ಬೆನ್ನಿಗೇ ಖಾಸಗಿ ಬಸ್​ಟಿಕೆಟ್​ ದರವೂ ಏರಿಕೆಯಾಗಲಿದೆ.

ರಾಜ್ಯದ ಖಾಸಗಿ ಬಸ್ ದರ ಏರಿಕೆ ಮಾಡಲು ಖಾಸಗಿ ಬಸ್ ಮಾಲೀಕರ ಸಂಘ ತೀರ್ಮಾನಿಸಿದ್ದು, ಟಿಕೆಟ್ ದರ ಪರಿಷ್ಕರಣೆ ಸಂಬಂಧ ಬೆಂಗಳೂರಿನಲ್ಲಿ ಖಾಸಗಿ ಬಸ್ ಮಾಲೀಕರು ಬರುವ ಬುಧವಾರ ಸಭೆ ಮಾಡಲು ನಿರ್ಧಾರಿಸಿದ್ದಾರೆ.

ಖಾಸಗಿ ಬಸ್ ದರ ಶೇ 10 -15 ರಷ್ಟು ಏರಿಕೆ ಮಾಡಲು ತೀರ್ಮಾನ ಮಾಡಲಾಗಿದೆ. 2014 ರಿಂದ ಖಾಸಗಿ ಬಸ್ ದರ ಏರಿಕೆ ಮಾಡಿರಲಿಲ್ಲ. ಆಗ ಡೀಸೆಲ್‌ ದರ 61,59 ರೂ ಇತ್ತು ಇದೀಗ 67 ರೂ ಇದೆ. ವಿಮೆ, ಆಯಿಲ್ ಬೆಲೆ, ರಸ್ತೆ ತೆರಿಗೆ ಕೂಡ ಹೆಚ್ಚಳವಾಗಿದೆ. ಹೀಗಾಗಿ ಖಾಸಗಿ ಬಸ್ ದರ ಏರಿಕೆ ಮಾಡಲು ಖಾಸಗಿ ಬಸ್ ಮಾಲೀಕರು ನಿರ್ಧಾರ ಮಾಡಿದ್ದಾರೆ.‌

ಇನ್ನು ರಾಜ್ಯದಲ್ಲಿ ಸುಮಾರು 8000 ಖಾಸಗಿ ಬಸ್​ಗಳು ಕಾರ್ಯಾಚರಣೆ ಮಾಡುತ್ತಿದ್ದು, ಶೀಘ್ರದಲ್ಲಿ ಸಭೆ ನಡೆಸಿ, ಖಾಸಗಿ ಬಸ್ ದರವನ್ನ ಪ್ರಕಟಿಸಲು ಖಾಸಗಿ ಬಸ್ ಮಾಲೀಕರು ನಿರ್ಧಾರ ಮಾಡಲಾಗಿದೆ.‌

ಒಟ್ಟಾರೆ, ಕೆಎಸ್​ಆರ್​ಟಿಸಿ ಶಾಕ್ ನಂತರ ಈಗ ಖಾಸಗಿ ಬಸ್ಸುಗಳ ಟಿಕೆಟ್ ದರ ಶಾಕ್ ಕೊಡಲು ಸಜ್ಜಾಗಿದೆ.‌

ABOUT THE AUTHOR

...view details