ಬೆಂಗಳೂರು: ಪರಪ್ಪನ ಅಗ್ರಹಾರ ಜೈಲಿಗೆ ಬಂದಿದ್ದ ಪಾರ್ಸೆಲ್ ಕಂಡು ಅನುಮಾನಗೊಂಡು ತೆಗೆದು ನೋಡಿದಾಗ ಡ್ರಗ್ಸ್ ಇರುವುದು ಪತ್ತೆಯಾಗಿದೆ. ಮಡಿವಾಳ ಬಾಂಬ್ ಸ್ಫೋಟ ಪ್ರಕರಣದಲ್ಲಿ ಜೈಲುವಾಸ ಅನುಭವಿಸುತ್ತಿರುವ ಮುಜೀಬ್ ಎಂಬಾತನಿಗೆ ಈ ಕೊರಿಯರ್ ಬಂದಿತ್ತು.
ಜೈಲಿಗೆ ಬಂದಿದ್ದ ಕೊರಿಯರ್ನಲ್ಲಿತ್ತು ಡ್ರಗ್ಸ್.. ಬಾಂಬ್ ಸ್ಫೋಟದ ಅಪರಾಧಿಗೆ ಕೇರಳದಿಂದ ಬಂತು ಮಾದಕ ದ್ರವ್ಯ - ಡ್ರಗ್ಸ್ ರವಾಬನೆೠ
ಪರಪ್ಪನ ಅಗ್ರಹಾರಕ್ಕೆ ಕೇರಳದಿಂದ ಬಂದಿದ್ದ ಕೊರಿಯರ್ ಕಂಡು ಅನುಮಾನಗೊಂಡ ಪೊಲೀಸರು ಅದನ್ನು ತೆರದು ನೋಡಿದ್ದಾರೆ. ಈ ವೇಳೆ ಅದರಲ್ಲಿ ಡ್ರಗ್ಸ್ ಇರುವುದು ಕಂಡು ಬಂದಿದೆ.
ಪರಪ್ಪನ ಅಗ್ರಹಾರ
ಪಾರ್ಸೆಲ್ ಕಂಡು ಅನುಮಾನಗೊಂಡ ಜೈಲಾಧಿಕಾರಿಗಳು ತೆರೆದು ನೋಡಿದಾಗ ಒಳಗೆ ಹೆರಾಯಿನ್ ರೀತಿಯ ಡ್ರಗ್ಸ್ ಇರುವುದು ಪತ್ತೆಯಾಗಿದೆ. ಕೇರಳದ ಕಣ್ಣೂರಿನಿಂದ ಜಿನೇಬ್ ಎಂಬಾತ ಈ ಕೊರಿಯರ್ ಕಳುಹಿಸಿರುವುದು ತಿಳಿದುಬಂದಿದೆ.
ಸದ್ಯ ಕೊರಿಯರ್ನಲ್ಲಿ ಸಿಕ್ಕ ಡ್ರಗ್ಸ್ ಅನ್ನು ಲ್ಯಾಬ್ಗೆ ಕಳುಹಿಸಲಾಗಿದ್ದು, ಜಿನೇಬ್ ಬಂಧನಕ್ಕಾಗಿ ಪೊಲೀಸರು ಬಲೆ ಬೀಸಿದ್ದಾರೆ.