ಕರ್ನಾಟಕ

karnataka

ETV Bharat / state

ಹೊಂಗಸಂದ್ರದಲ್ಲಿ ಕೊರಿಯರ್ ಬಾಯ್​ಗೆ ಕೊರೊನಾ ಶಂಕೆ: ದೃಢಪಟ್ಟರೆ ಬಿಬಿಎಂಪಿಗೆ ದೊಡ್ಡ ತಲೆನೋವು - ಕೊರೊನಾ ಶಂಕೆ

ನಗರದ ಹೊಂಗಸಂದ್ರ ವಾರ್ಡ್​ನ ಕೊರಿಯರ್ ಬಾಯ್​ಗೂ ಕೊರೊನಾ ತಗುಲಿರುವ ಬಗ್ಗೆ ಶಂಕೆ ವ್ಯಕ್ತವಾಗಿದ್ದು, ಅಧಿಕಾರಿಗಳು ಆತನ ರಿಪೋರ್ಟ್​ಗಾಗಿ ಕಾಯುತ್ತಿದ್ದಾರೆ.

Hongasandra
ಹೊಂಗಸಂದ್ರ

By

Published : May 6, 2020, 12:47 PM IST

ಬೆಂಗಳೂರು:ಹೊಂಗಸಂದ್ರದಲ್ಲಿ ನಿನ್ನೆ ಕೊರೊನಾ ದೃಢಪಟ್ಟ 45 ವರ್ಷದ ವ್ಯಕ್ತಿಯ ಮಗ, ಕೊರಿಯರ್​ ಬಾಯ್​ ಆಗಿದ್ದು ಆತನ ರಿಪೋರ್ಟ್​ಗಾಗಿ ಅಧಿಕಾರಿಗಳು ಕಾಯುತ್ತಿದ್ದಾರೆ. ಒಂದು ವೇಳೆ ಆತನ ರಿಪೋರ್ಟ್​ ಪಾಸಿಟಿವ್​​ ಬಂದರೆ ಅಧಿಕಾರಿಗಳಿಗೆ ಇದು ದೊಡ್ಡ ತಲೆ ನೋವಾಗಲಿದೆ.

ಹೊಂಗಸಂದ್ರದ ಮಂಗಮ್ಮನಪಾಳ್ಯದ ಗುಜರಿ ಅಂಗಡಿಯಲ್ಲಿ ಕೆಲಸ ಮಾಡುತ್ತಿದ್ದ 45 ವರ್ಷದ ವ್ಯಕ್ತಿಗೆ ನಿನ್ನೆ ಕೊರೊನಾ ಸೋಂಕು ದೃಢಪಟ್ಟಿದೆ. ಆತನ ಮಗ, ಮಗಳು, ಪತ್ನಿಯ ಕೊರೊನಾ ಟೆಸ್ಟ್ ಕೂಡಾ ಮಾಡಲಾಗಿದೆ. ಆದ್ರೆ ಮಗ ಕೊರಿಯರ್ ಬಾಯ್ ಆಗಿ ಕೆಲಸ ಮಾಡುತ್ತಿದ್ದ ಹಿನ್ನಲೆ ಸಾಕಷ್ಟು ಮನೆಗಳಿಗೆ ಆಹಾರ, ವಸ್ತುಗಳನ್ನು ಡೆಲಿವರಿ ಮಾಡುತ್ತಿದ್ದ. ಈ ಹಿನ್ನೆಲೆ ಆತನಿಗೇನಾದ್ರೂ ಕೊರೊನಾ ದೃಢಪಟ್ಟರೆ ಸಾಕಷ್ಟು ಜನರಿಗೆ ಕೊರೊನಾ ಸೋಂಕು ಹರಡಿರುವ ಸಾಧ್ಯತೆ ಹೆಚ್ಚಾಗಿದೆ. ಹೀಗಾಗಿ ಅವರ ರಿಪೋರ್ಟ್​ಗಾಗಿ ಎದುರುನೋಡುತ್ತಿದ್ದೇವೆ ಎಂದು ಬಿಬಿಎಂಪಿ ಆರೋಗ್ಯಾಧಿಕಾರಿ ಡಾ. ಸುರೇಶ್ ತಿಳಿಸಿದ್ದಾರೆ.

ಕಡೆಗೂ ಪತ್ತೆಯಾದ ಗುಜರಿ ಅಂಗಡಿ ಮಾಲೀಕ!

ಹೊಂಗಸಂದ್ರದಲ್ಲಿ ವಾಸವಾಗಿದ್ದ ವಲಸೆ ಕಾರ್ಮಿಕರಿಗೆ ಮೊದಲು ಸೋಂಕು ಹರಡಿದ್ದು ಗುಜರಿ ಅಂಗಡಿಯಿಂದ. ಇದುವರೆಗೂ 419 ರೋಗಿಯಿಂದ ಹಿಡಿದು ಇಲ್ಲಿಯವರೆಗೆ 30 ಜನರಿಗೆ ಕೊರೊನಾ ಸೋಂಕು ಹರಡಿದೆ. ಆದ್ರೆ ಗುಜರಿ ಅಂಗಡಿ ಮಾಲೀಕ ಮಾತ್ರ ತಲೆಮರೆಸಿಕೊಂಡಿದ್ದ. ಕಡೆಗೂ ಈಗ ಆತ ಪತ್ತೆಯಾಗಿದ್ದಾನೆ.

ಆದ್ರೆ ಆತ ಕೂಡಾ ಇದೀಗ ಕೊರೊನಾ ಸೋಂಕಿತನಾಗಿದ್ದು ರಾಜೀವ್ ಗಾಂಧಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾನೆ. 419ನೇ ವ್ಯಕ್ತಿಯಲ್ಲಿ ಸೋಂಕು ಪತ್ತೆಯಾಗುತ್ತಿದ್ದಂತೆ ತಲೆಮರೆಸಿಕೊಂಡ ಅಂಗಡಿ ಮಾಲೀಕ 10 ದಿನಗಳ ಬಳಿಕ ಲಾಲ್ ಬಾಗ್ ರಸ್ತೆಯಲ್ಲಿ ತಲೆ ತಿರುಗಿ ಬಿದ್ದಿದ್ದ. ಪರೀಕ್ಷೆಗಾಗಿ ಮದೀನಾ ನಗರದ ಕ್ಲಿನಿಕ್​ಗೆ ತೆರಳಿದ್ದ ಈ ವ್ಯಕ್ತಿಯಲ್ಲಿ ತೀವ್ರ ಜ್ವರ ಇದ್ದ ಹಿನ್ನಲೆ ರಾಜೀವ್ ಗಾಂಧಿ ಆಸ್ಪತ್ರೆಗೆ ರವಾನೆ ಮಾಡಲಾಗಿತ್ತು‌.

ರಾಜೀವ್ ಗಾಂಧಿ ಆಸ್ಪತ್ರೆ ಪರೀಕ್ಷೆಯಲ್ಲಿ ಆತನಿಗೆ ಕೊರೊನಾ ಸೋಂಕು ದೃಢಪಟ್ಟಿದೆ. ಈತ ತನ್ನ ಹಿನ್ನಲೆ ಬಗ್ಗೆ ಮಾಹಿತಿ ನೀಡದೇ ಇದ್ದದ್ದು ಆರೋಗ್ಯ ಅಧಿಕಾರಿಗಳಿಗೆ ತಲೆನೋವಾಗಿ ಪರಿಣಮಿಸಿತ್ತು. ಕಡೆಗೂ ಆತನ ಫೋನ್ ಸಿಡಿಆರ್ ಅನ್ನು ಇಂಚಿಂಚೂ ಬಿಡದೇ ಮಾಹಿತಿ ಕಲೆಹಾಕಿದ್ದರಿಂದ ಆತನ ಹಿಸ್ಟರಿ ಬಯಲಾಗಿದೆ. ಅಲ್ಲದೆ ಆತ ಬೇಕಾಬಿಟ್ಟಿಯಾಗಿ ನಗರದ ಹಲವೆಡೆ ಓಡಾಟ ನಡೆಸಿರುವುದು ದೃಢಪಟ್ಟಿದೆ.

ABOUT THE AUTHOR

...view details