ಕರ್ನಾಟಕ

karnataka

ETV Bharat / state

ಬೆಂಗಳೂರಿನಲ್ಲಿ ಕೋವಿಡ್ ನಿಯಮ ಪಾಲಿಸದ 20 ವ್ಯಾಪಾರ ಮಳಿಗೆಗಳಿಗೆ ಬೀಗ! - ಕೋವಿಡ್ ನಿಯಮ ಪಾಲಿಸದ ಅಂಗಡಿ ಮುಂಗಟ್ಟು ಬಂದ್

ಕೋವಿಡ್ ಮಾರ್ಗಸೂಚಿಗಳನ್ನು ಪಾಲಿಸದ ಸಿಲಿಕಾನ್ ಸಿಟಿಯ ಅಂಗಡಿ ಮುಂಗಟ್ಟುಗಳನ್ನು ಆರೋಗ್ಯಾಧಿಕಾರಿಗಳು ಬಂದ್​ ಮಾಡಿಸಿದ್ದಾರೆ.

Officers shut downs shops and restaurant for violating Covid Guidelines
ಕೋವಿಡ್ ನಿಯಮ ಪಾಲಿಸದ ಉದ್ಯಮಗಳಿಗೆ ಬೀಗ

By

Published : Apr 7, 2021, 10:55 PM IST

ಬೆಂಗಳೂರು: ಬಿಬಿಎಂಪಿ ವ್ಯಾಪ್ತಿಯ 8 ವಲಯಗಳಲ್ಲಿ ಕೋವಿಡ್ ಮುನ್ನೆಚ್ಚರಿಕಾ ನಿಯಮ ಪಾಲಿಸದ 20 ಹೋಟೆಲ್​, ಅಂಗಡಿ ಮಳಿಗೆಗಳನ್ನು ಮುಚ್ಚಿ ದಂಡ ವಿಧಿಸಲಾಗಿದೆ.

ಯಲಹಂಕದ ರೆಸ್ಟೋರೆಂಟ್, ಹಗದೂರಿನ ಸೂಪರ್ ಮಾರ್ಕೆಟ್, ದಕ್ಷಿಣ ವಲಯದ ನಾಲ್ಕು ಹೋಟೆಲ್​ಗಳನ್ನು ಮುಚ್ಚಲಾಗಿದೆ. ಬೊಮ್ಮನಹಳ್ಳಿ ವಲಯದಲ್ಲಿ ಎಂಟಿಆರ್​ ಹೋಟೆಲ್​ಗೆ ಹತ್ತು ಸಾವಿರ ರೂ. ದಂಡ ವಿಧಿಸಲಾಗಿದೆ. ಪಾರ್ಟಿ ಆಯೋಜಿಸಿದ ಬೇಗೂರಿನ ಅಪಾರ್ಟ್​ಮೆಂಟ್​ಗೆ 20 ಸಾವಿರ ರೂ. ದಂಡ ವಿಧಿಸಲಾಗಿದೆ.

ಓದಿ : ಭಾರತದಲ್ಲಿ ಹೆಚ್ಚುತ್ತಿರುವ ಕೊರೊನಾ: ನಾಳೆ ಸಿಎಂಗಳ ಜತೆ ಪ್ರಧಾನಿ ಮೋದಿ ಸಭೆ, ಯಡಿಯೂರಪ್ಪ ಭಾಗಿ

ಸಾಮಾಜಿಕ ಅಂತರ ಕಾಪಾಡದಿರುವುದು, ಮಾಸ್ಕ್ ಧರಿಸದೆ ಇರುವ, ಸ್ಯಾನಿಟೈಸರ್ ಉಪಯೋಗಿಸದಿರುವ, ಥರ್ಮಲ್ ಸ್ಕ್ಯಾನಿಂಗ್ ಮಾಡದಿರುವ ಹೋಟೆಲ್, ರೆಸ್ಟೋರೆಂಟ್, ಸೂಪರ್ ಮಾರ್ಕೆಟ್​ಗಳನ್ನು ಆರೋಗ್ಯಾಧಿಕಾರಿಗಳ ತಂಡ ಪರಿಶೀಲನೆ ನಡೆಸಿ ದಂಡ ವಿಧಿಸಿದೆ.

ವ್ಯಾಪಾರ/ಉದ್ದಿಮೆ ಮುಚ್ಚಿಸಿರುವ ಸಂಖ್ಯೆ:

ಯಲಹಂಕ : 1
ಮಹದೇವಪುರ : 4
ಪಶ್ಚಿಮ ವಯಲ : 3
ದಕ್ಷಿಣ ವಲಯ : 4
ಬೊಮ್ಮನಹಳ್ಳಿ : 2
ಪೂರ್ವ ವಲಯ : 3
ರಾಜರಾಜೇಶ್ವರಿ ನಗರ - 3

ಒಟ್ಟು: 20 ಮಳಿಗೆಗಳನ್ನು ಬಂದ್ ಮಾಡಲಾಗಿದೆ.

ABOUT THE AUTHOR

...view details