ಕರ್ನಾಟಕ

karnataka

ETV Bharat / state

ಬೆಂಗಳೂರಲ್ಲಿ ಜಿಎಸ್​ಟಿ ಪ್ರಧಾನ ಕಚೇರಿ ಕಟ್ಟಡದಿಂದ ಬಿದ್ದು ಆಫೀಸ್ ಬಾಯ್ ಆತ್ಮಹತ್ಯೆ - ಬೆಂಗಳೂರು ಜಿಎಸ್‌ಟಿ ಆಫೀಸ್ ಬಾಯ್ ಆತ್ಮಹತ್ಯೆ

ಕಟ್ಟಡದಿಂದ ಬಿದ್ದು ಆಫೀಸ್ ಬಾಯ್ ಆತ್ಮಹತ್ಯೆ ಮಾಡಿಕೊಂಡ ಘಟನೆ ಬೆಂಗಳೂರಿನಲ್ಲಿ ನಡೆದಿದೆ.

office-boy-committed-suicide-in-bengaluru
ಬೆಂಗಳೂರಲ್ಲಿ ಕಟ್ಟಡದಿಂದ ಬಿದ್ದು ಆಫೀಸ್ ಬಾಯ್ ಆತ್ಮಹತ್ಯೆ

By

Published : Jun 27, 2022, 4:41 PM IST

ಬೆಂಗಳೂರು : ಕಟ್ಟಡದಿಂದ ಬಿದ್ದು ಆಫೀಸ್ ಬಾಯ್ ಆತ್ಮಹತ್ಯೆ ಮಾಡಿಕೊಂಡ ಘಟನೆ ನಗರದ ಕ್ವೀನ್ಸ್ ರಸ್ತೆಯ ಜಿಎಸ್‌ಟಿ ಪ್ರಧಾನ ಕಚೇರಿಯಲ್ಲಿ ಸೋಮವಾರ ಬೆಳಗ್ಗೆ ನಡೆದಿದೆ. ಲಕ್ಷ್ಮಣ್ (26) ಎಂಬಾತನೆ ಆತ್ಮಹತ್ಯೆಗೆ ಶರಣಾದವ.

ಕೆಲ ದಿನಗಳಿಂದ ಜಿಎಸ್‌ಟಿ ಕಚೇರಿಯಲ್ಲಿ ಆಫೀಸ್ ಬಾಯ್ ಆಗಿ ಕೆಲಸ ಮಾಡಿಕೊಂಡಿದ್ದ ಲಕ್ಷ್ಮಣ್ ಇವತ್ತು ಬೆಳಗ್ಗೆ ಕರ್ತವ್ಯಕ್ಕೆ ಬಂದ ಕೆಲ ಸಮಯದಲ್ಲೇ ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಆತ್ಮಹತ್ಯೆಗೆ ನಿಖರ ಕಾರಣ ತಿಳಿದು ಬಂದಿಲ್ಲ. ಮೃತದೇಹವನ್ನು ಮರಣೋತ್ತರ ಪರೀಕ್ಷೆಗಾಗಿ ಬೌರಿಂಗ್ ಆಸ್ಪತ್ರೆಗೆ ರವಾನಿಸಲಾಗಿದೆ. ಈ ಬಗ್ಗೆ ಬೆಂಗಳೂರಿನ ಕಮರ್ಶಿಯಲ್ ಸ್ಟ್ರೀಟ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ‌.

ಇದನ್ನೂ ಓದಿ:ನಿತ್ಯಾನಂದ ಆಶ್ರಮದಿಂದ ನನ್ನ ಮಗಳನ್ನು ರಕ್ಷಿಸಿ : ದೂರು ನೀಡಿದ ಬೆಂಗಳೂರಿನ ವ್ಯಕ್ತಿ

For All Latest Updates

TAGGED:

ABOUT THE AUTHOR

...view details