ಬೆಂಗಳೂರು: ಬೆಂಗಳೂರು ಜಲಮಂಡಳಿಯ ಕೋಡಿಚಿಕ್ಕನಹಳ್ಳಿ ಬಳಿ ದುರಸ್ತಿ ಕಾರ್ಯ ಇರುವುದರಿಂದ, ಅಕ್ಟೋಬರ್ 2 ರಂದು ಕೆಲವು ಕಡೆ ಕಾವೇರಿ ನೀರು ಪೂರೈಕೆ ಸ್ಥಗಿತಗೊಳ್ಳಲಿದೆ.
ಗಮನಿಸಿ: ಅ. 2 ರಂದು ಎಲೆಕ್ಟ್ರಾನಿಕ್ ಸಿಟಿ ಸೇರಿದಂತೆ ಹಲವೆಡೆ ಕಾವೇರಿ ನೀರು ಸ್ಥಗಿತ - Bengaluru Water Board
ಅಕ್ಟೋಬರ್ 2 ರಂದು ಬೆಳಗ್ಗೆ ಆರು ಗಂಟೆಯಿಂದ ಸಂಜೆ ನಾಲ್ಕು ಗಂಟೆಯವರೆಗೆ ಎಲೆಕ್ಟ್ರಾನಿಕ್ ಸಿಟಿ ಸೇರಿದಂತೆ ಹಲವೆಡೆ ಕಾವೇರಿ ನೀರು ಪೂರೈಕೆ ಸ್ಥಗಿತಗೊಳ್ಳಲಿದೆ.
ಬೆಂಗಳೂರು
ಬೆಳಗ್ಗೆ ಆರು ಗಂಟೆಯಿಂದ ಸಂಜೆ ನಾಲ್ಕು ಗಂಟೆಯವರೆಗೆ ಎಲೆಕ್ಟ್ರಾನಿಕ್ ಸಿಟಿ, ಹೆಚ್ಎಸ್ಆರ್ ಲೇಔಟ್, ರಾಜೀವ್ ಗಾಂಧಿ ನಗರ, ವಿನಾಯಕ ನಗರ, ಗುಂಡುತೋಪು, ಅಗರ ಗ್ರಾಮ ಪರಂಗಿಪಾಳ್ಯ, ಜಕ್ಕಸಂದ್ರ, ವೆಂಕಟಾಪುರ, ಮಂಗಮ್ಮನಪಾಳ್ಯ, ಕೋರಮಂಗಲ ನಾಲ್ಕನೇ ಮತ್ತು ಮೂರನೇ ಬ್ಲಾಕ್ ಗಳಲ್ಲಿ ನೀರು ಪೂರೈಕೆ ವ್ಯತ್ಯಾಸವಾಗಲಿದೆ ಎಂದು ಜಲಮಂಡಳಿ ತಿಳಿಸಿದೆ.