ಬೆಂಗಳೂರು: ಬೆಳೆ ಸಮೀಕ್ಷೆಯನ್ನು ಆ್ಯಪ್ ಮೂಲಕ ಅಕ್ಟೋಬರ್11ರವರೆಗೆ ಶೇ.98ರಷ್ಟು ಮಾಡಲಾಗಿದೆ.
ರೈತ ಬೆಳೆ ಆ್ಯಪ್ ಸಮೀಕ್ಷೆಗೆ ಅ.15 ಕೊನೆಯ ದಿನಾಂಕ - Oct.15th is an last date for crop survey
ರೈತರು ತಮ್ಮ ಬೆಳೆ ಸಮೀಕ್ಷೆ ನಡೆಸಲು ಅ.15 ಕೊನೆ ದಿನಾಂಕವಾಗಿದೆ. ಇಲ್ಲಿಯವರೆಗೆ ಶೇ.98ರಷ್ಟು ಬೆಳೆ ಸಮೀಕ್ಷೆ ನಡೆದಿದೆ.
![ರೈತ ಬೆಳೆ ಆ್ಯಪ್ ಸಮೀಕ್ಷೆಗೆ ಅ.15 ಕೊನೆಯ ದಿನಾಂಕ Vidhanasowdha](https://etvbharatimages.akamaized.net/etvbharat/prod-images/768-512-02:50:01:1602494401-kn-bng-02-farmer-crop-app-script-7208083-12102020143805-1210f-1602493685-538.jpg)
Vidhanasowdha
ನನ್ನ ಬೆಳೆ ನನ್ನ ಹಕ್ಕು ಎಂದು ರೈತರು ಹೆಮ್ಮೆಯಿಂದ ಹೇಳುವ ರೈತ ಬೆಳೆ ಸಮೀಕ್ಷೆ ಆ್ಯಪ್ ನಲ್ಲಿ ಇಲ್ಲಿಯವರೆಗೆ 2 ಕೋಟಿ 6 ಲಕ್ಷ ಪ್ಲಾಟ್‌ಗಳು ಆ್ಯಪ್ ಮೂಲಕ ಅಪ್ಲೋಡ್ ಆಗಿರುತ್ತವೆ. ರೈತ ಬೆಳೆ ಆ್ಯಪ್ ಸಮೀಕ್ಷೆಗೆ ಅ.15 ಕೊನೆ ದಿನಾಂಕವಾಗಿದೆ.
ಅಲ್ಲದೆ ಅಪ್ಲೋಡ್ ಆದ ಮಾಹಿತಿಗಳಲ್ಲಿ ತಿದ್ದುಪಡಿ ಇದ್ದಲ್ಲಿ ಬೆಳೆ ದರ್ಶಕ್ ಆ್ಯಪ್ ಮೂಲಕ ತಿದ್ದುಪಡಿ ಸಲ್ಲಿಸಲು ಸಹ ಅ.15 ಕೊನೆಯ ದಿನಾಂಕವಾಗಿದೆ ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ.